ಅಫ್ಘಾನಿಸ್ತಾನದ 4 ಕಮಾಂಡರ್​ಗಳನ್ನು ಜನರೆದುರೇ ನೇಣಿಗೇರಿಸಿದ ತಾಲಿಬಾನ್; ಇದೇನಾ ಶಾಂತಿ ಸ್ಥಾಪನೆ?

Taliban Terrorists: ಶಾಂತಿ ಸ್ಥಾಪನೆಯ ಭರವಸೆ ನೀಡಿದ ಬೆನ್ನಲ್ಲೇ ತಾಲಿಬಾನ್ ಉಗ್ರರು ಸಾರ್ವಜನಿಕ ಸ್ಥಳದಲ್ಲಿ ಅಫ್ಘಾನಿಸ್ತಾನ ಸೇನೆಯ ನಾಲ್ವರು ಕಮಾಂಡರ್​ಗಳನ್ನು ನೇಣಿಗೇರಿಸುವ ಮೂಲಕ ಜನರಲ್ಲಿ ಮತ್ತಷ್ಟು ಭಯವನ್ನು ಬಿತ್ತಿದ್ದಾರೆ.

ಅಫ್ಘಾನಿಸ್ತಾನದ 4 ಕಮಾಂಡರ್​ಗಳನ್ನು ಜನರೆದುರೇ ನೇಣಿಗೇರಿಸಿದ ತಾಲಿಬಾನ್; ಇದೇನಾ ಶಾಂತಿ ಸ್ಥಾಪನೆ?
ತಾಲಿಬಾನ್ ಉಗ್ರರು
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 19, 2021 | 1:03 PM

ಕಾಬೂಲ್: 2 ದಶಕಗಳ ಬಳಿಕ ಮತ್ತೆ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನ್​ (Taliban) ಸಂಘಟನೆ ಇನ್ನುಮುಂದೆ ಅಫ್ಘಾನ್​ನಲ್ಲಿ (Afghanistan) ಶಾಂತಿ ಸ್ಥಾಪಿಸುವುದಾಗಿ ಭರವಸೆ ನೀಡಿತ್ತು. ಆದರೆ, ಅದಾದ ನಂತರವೂ ಅಫ್ಘಾನಿಸ್ತಾನದಲ್ಲಿ ಗುಂಡಿನ ಸದ್ದು ನಿಂತಿಲ್ಲ. ಶಾಂತಿ ಸ್ಥಾಪನೆಯ ಭರವಸೆ ನೀಡಿದ ಬೆನ್ನಲ್ಲೇ ತಾಲಿಬಾನ್ ಉಗ್ರರು ಸಾರ್ವಜನಿಕ ಸ್ಥಳದಲ್ಲಿ ಅಫ್ಘಾನಿಸ್ತಾನ ಸೇನೆಯ ನಾಲ್ವರು ಕಮಾಂಡರ್​ಗಳನ್ನು ನೇಣಿಗೇರಿಸುವ ಮೂಲಕ ಜನರಲ್ಲಿ ಮತ್ತಷ್ಟು ಭಯವನ್ನು ಬಿತ್ತಿದ್ದಾರೆ.

ಬುಧವಾರ ಅಫ್ಘಾನ್​ನ ನಾಲ್ಕು ಪ್ರಸಿದ್ಧ ಕಮಾಂಡರ್​ಗಳನ್ನು ಕಂದಹಾರ್​ನ ಸ್ಟೇಡಿಯಂನಲ್ಲೇ ನೇಣಿಗೇರಿಸಲಾಗಿದೆ. ಅವರಲ್ಲಿ ಒಬ್ಬರು ಅಫ್ಘಾನ್​ನ ಜನರಲ್ ರಜಾಕ್​ ಅವರಿಗೆ ಆತ್ಮೀಯರಾಗಿದ್ದರು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಈ ನಾಲ್ವರು ಕಮಾಂಡರ್​ಗಳು ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ತಮ್ಮ ಸ್ಥಾನದಿಂದ ಕೆಳಗಿಳಿದು ಅಫ್ಘಾನಿಸ್ತಾನವನ್ನು ತಾಲಿಬಾನಿಗರಿಗೆ ಬಿಟ್ಟುಕೊಟ್ಟ ನಂತರ ಅಮ್ರುಲ್ಲಾ ಸಲೇಹ್ ನಾನೇ ಈಗ ಅಫ್ಘಾನಿಸ್ತಾನದ ಉಸ್ತುವಾರಿ ಎಂದು ಘೋಷಿಸಿದ್ದರು.ಹಾಗೇ, ತಾಲಿಬಾನ್ ಕಾಬೂಲ್ ನಗರವನ್ನು ವಶಪಡಿಸಿಕೊಂಡಿದ್ದರೂ ನಾವು ಮಾತ್ರ ಆ ಉಗ್ರರಿಗೆ ಶರಣಾಗುವುದಿಲ್ಲ ಎಂದು ಟ್ವೀಟ್ ಮಾಡಿದ್ದರು.

ಅಮ್ರುಲ್ಲಾ ಸಲೇಹ್ ಅವರಿಗೆ ಅಫ್ಘಾನ್ ಸೇನೆಯ ಕಮಾಂಡರ್​ಗಳು ಬೆಂಬಲ ನೀಡಿದ್ದರು. ನಿಮಗೆ ಯಾವಾಗ ನಮ್ಮ ಸಹಾಯ ಬೇಕಿದ್ದರೂ ನಾವು ಸಿದ್ಧವಿರುತ್ತೇವೆ ಎಂದು ಕಮಾಂಡರ್​ಗಳು ಅಮ್ರುಲ್ಲಾ ಅವರಿಗೆ ತಾಲಿಬಾನ್ ವಿರುದ್ಧ ನಿಲ್ಲಲು ಬೆಂಬಲ ನೀಡಿದ್ದರು. ನಾನು ಈ ಬಗ್ಗೆ ನಮ್ಮ ತಂಡದವರ ಜೊತೆ ಮಾತನಾಡಿದ್ದೇನೆ. ನಾವು ಅಮ್ರುಲ್ಲಾ ಸಲೇಹ್ ಅವರಿಗೆ ಬೆಂಬಲ ನೀಡಿ, ಅಫ್ಘಾನಿಸ್ತಾನಕ್ಕಾಗಿ ಹೋರಾಡಲು ಬದ್ಧರಾಗಿದ್ದೇವೆ ಎಂದು ಅಫ್ಘಾನ್ ಕಮಾಂಡರ್ ಸರ್ಫರಾಜ್ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಇದಾದ ಮರುದಿನವೇ ನಾಲ್ವರು ಕಮಾಂಡರ್​ಗಳನ್ನು ಹಾಡಹಗಲೇ ನೇಣಿಗೆ ಹಾಕಿ ಹತ್ಯೆ ಮಾಡಲಾಗಿದೆ.

ತಾಲಿಬಾನ್ ಬಗ್ಗೆ ಜನರಲ್ಲಿ ಹಾಗೂ ಬೇರೆ ದೇಶಗಳಲ್ಲಿ ಇನ್ನೂ ಭಯ ಉಂಟಾಗಿಲ್ಲ. ಹೀಗಾಗಿ, ಜನರಲ್ಲಿ ಭೀತಿ ಹೆಚ್ಚಿಸಲು ಈ ರೀತಿ ಟಾಪ್ ಕಮಾಂಡರ್​ಗಳನ್ನು ಹತ್ಯೆ ಮಾಡಿದ್ದಾಗಿ ತಾಲಿಬಾನ್ ಸಮರ್ಥನೆ ಮಾಡಿಕೊಂಡಿದೆ. ಉಗ್ರರು ಕಾಬೂಲ್ ಅನ್ನು ವಶಪಡಿಸಿಕೊಂಡ ಬಳಿಕ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. ಇದಾದ ಬಳಿಕ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದ ತಾಲಿಬಾನ್, ತಾಲಿಬಾನ್​ನಿಂದ ಯಾವ ದೇಶಕ್ಕೂ ತೊಂದರೆ ಆಗುವುದಿಲ್ಲ. ಅಫ್ಘಾನ್ ಜೊತೆಗಿನ ಸಂಬಂಧವನ್ನು ಮೊದಲಿನಂತೆ ಮುಂದುವರೆಸಬಹುದು. ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡಲು ನಾವು ಬದ್ಧರಾಗಿದ್ದೇವೆ. ಇಲ್ಲಿನ ಜನರ ಜೀವನ ಸುಧಾರಣೆಗೆ ಸಾಧ್ಯವಾದಷ್ಟು ಪ್ರಯತ್ನ ನಡೆಸುವುದಾಗಿ ಘೋಷಿಸಿತ್ತು.

ಈಗ ಅಲ್ಲಾಹ್ ದಯೆಯಿಂದ ಅಫ್ಘಾನಿಸ್ತಾನ ದೇಶಕ್ಕೆ ಸೇವೆ ಸಲ್ಲಿಸುವ ಸಮಯ ಬಂದಿದೆ. ನಾವು ಇಡೀ ರಾಷ್ಟ್ರದಲ್ಲಿ ಶಾಂತಿ ನಿರ್ಮಿಸುತ್ತೇವೆ. ನಮ್ಮ ಆಡಳಿತದಲ್ಲಿ ಜನರ ಜೀವನ ಸಾಧ್ಯವಾದಷ್ಟು ಸುಧಾರಿಸಲಿದೆ ಎಂದು ತಾಲಿಬಾನ್ ಮುಖ್ಯಸ್ಥರು ಹೇಳಿದ್ದರು. ಆದರೆ, ಅಫ್ಘಾನ್​ನಲ್ಲಿ ರಕ್ತಪಾತ ಮಾತ್ರ ಕಡಿಮೆಯಾಗಿಲ್ಲ. ಮಹಿಳೆಯರು, ಮಕ್ಕಳು ಪ್ರಾಣಭೀತಿಯಿಂದ ಬದುಕುವಂತಾಗಿದೆ.

ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದ್ದು, ಬುರ್ಖಾ ಧರಿಸುವುದು ಕಡ್ಡಾಯವಾಗಿದೆ. 12 ವರ್ಷದಿಂದ 45 ವರ್ಷದೊಳಗಿನ ಎಲ್ಲ ಮಹಿಳೆಯರೂ ತಾಲಿಬಾನ್ ಉಗ್ರರ ಸೆಕ್ಸ್ ಸೇವಕರಾಗಿದ್ದಾರೆ. ಅಫ್ಘಾನಿಸ್ತಾನದಲ್ಲಿದ್ದ ಮೂವರು ಮಹಿಳಾ ಗವರ್ನರ್​ಗಳ ಪೈಕಿ ಒಬ್ಬರಾದ ಸಲಿಮಾ ಮಝಾರಿ ಅವರನ್ನು ತಾಲಿಬಾನ್ ಹೋರಾಟಗಾರರು ಬಂಧಿಸಿದ್ದಾರೆ. ಅಫ್ಘಾನಿಸ್ತಾನದ ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿ ವಿಮಾನಕ್ಕಾಗಿ ಕಾಯುತ್ತಿರುವ ಅಫ್ಘಾನಿಸ್ತಾನದ ಮಹಿಳೆಯರ ಗುಂಪು ಅಮೆರಿಕದ ಸೈನ್ಯದೊಂದಿಗೆ, ನಮಗೆ ಸಹಾಯ ಮಾಡಿ, ದಯವಿಟ್ಟು ನನಗೆ ಸಹಾಯ ಮಾಡಿ. ತಾಲಿಬಾನ್‌ ಉಗ್ರರು ನಮಗಾಗಿ ಬರುತ್ತಿದ್ದಾರೆ ಎಂದು ಬೇಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅಲ್ಲಿನ ಮಹಿಳೆಯರ ಸ್ಥಿತಿಗೆ ಅನೇಕ ದೇಶಗಳು ಮರುಕ ವ್ಯಕ್ತಪಡಿಸಿವೆ.

ಇದನ್ನೂ ಓದಿ: Afghanistan: ತಾಲಿಬಾನಿಗಳಿಗೆ ತಲೆಬಾಗಲ್ಲ; ಈಗ ನಾನೇ ನಿಮ್ಮ ಅಧ್ಯಕ್ಷ: ಆಫ್ಘನ್ ಮೊದಲ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಘೋಷಣೆ

Afghanistan Crisis: ತಾಲಿಬಾನ್ ವಶದಲ್ಲಿ ಅಫ್ಘಾನಿಸ್ತಾನ; ಕಾಬೂಲ್ ವಿಮಾನ ನಿಲ್ದಾಣದಲ್ಲಿ 5 ಜನರ ಹತ್ಯೆ

(Afghanistan Crisis: Taliban Publicly Hanged Four Afghan Force Commanders After Vowing To Maintain Peace)

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್