Haiti Earthquake: ಹೈಟಿ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 2189ಕ್ಕೆ ಏರಿಕೆ; 300ಕ್ಕೂ ಹೆಚ್ಚು ಮಂದಿ ನಾಪತ್ತೆ
2010ರಲ್ಲಿ ಹೈಟಿ ದೇಶದಲ್ಲಿ ಭಯಂಕರ ಪ್ರಮಾಣದ ಭೂಕಂಪ ಆಗಿತ್ತು. ಆಗ 10 ಸಾವಿರಗಳಷ್ಟು ಮನೆಗಳು, ಕಟ್ಟಡಗಳು ಕುಸಿದುಬಿದ್ದಿದ್ದವು. ಇನ್ನೂ ಅಭಿವೃದ್ಧಿಶೀಲ ದೇಶವಾಗಿರುವ ಹೈಟಿ ಇನ್ನೇನು ಚೇತರಿಸಿಕೊಳ್ಳುತ್ತಿದೆ ಎನ್ನುವಷ್ಟರಲ್ಲಿ ಈ ಬಾರಿ ಮತ್ತೆ ಪ್ರಬಲ ಭೂಕಂಪಕ್ಕೆ ತತ್ತರಿಸಿದೆ.
ಪೋರ್ಟ್-ಔ-ಪ್ರಿನ್ಸ್ (ಹೈಟಿ): ಹೈಟಿ ದೇಶದಲ್ಲಿ ಉಂಟಾದ ವಿನಾಶಕಾರಿ ಭೂಕಂಪ (Haiti Earthquake)ದಲ್ಲಿ ಮೃತಪಟ್ಟವರ ಸಂಖ್ಯೆ ಬುಧವಾರ 2189ಕ್ಕೆ ಏರಿಕೆಯಾಗಿದೆ. ರಕ್ಷಣಾ ಕಾರ್ಯಾಚರಣೆ (Rescue Operations) ನಡೆಸಿದಷ್ಟೂ ಶವಗಳೇ ಪತ್ತೆಯಾಗುತ್ತಿದ್ದು, ಬುಧವಾರ 250 ಶವಗಳು ಸಿಕ್ಕಿವೆ. ಈ ಮೂಲಕ ಮೃತರ ಸಂಖ್ಯೆ 2189ಕ್ಕೆ ತಲುಪಿದೆ ಎಂದು ಕೆರಿಬಿಯನ್ ರಾಷ್ಟ್ರದ ನಾಗರಿಕ ಸಂರಕ್ಷಣಾ ಸಂಸ್ಥೆ ಟ್ವಿಟರ್ (Twitter) ಮೂಲಕ ತಿಳಿಸಿದೆ.
ಶನಿವಾರ ಹೈಟಿ ದೇಶದ ನೈರುತ್ಯ ಭಾಗದಲ್ಲಿರುವ ರಾಜಧಾನಿ ಪೋರ್ಟ್-ಔ-ಪ್ರಿನ್ಸ್‌ನ ಪಶ್ಚಿಮಕ್ಕೆ ಸುಮಾರು 160 ಕಿಮೀ ದೂರದಲ್ಲಿ 7.2ರಷ್ಟು ತೀವ್ರತೆ ಭೂಕಂಪ ಆಗಿತ್ತು. ಇದರಿಂದ ನೂರಾರು ಕಟ್ಟಡಗಳು ಕುಸಿದಿವೆ. ಸುಮಾರು 12,260 ಮಂದಿ ಗಾಯಗೊಂಡಿದ್ದಾರೆ. ಇನ್ನೂ 332 ಮಂದಿ ನಾಪತ್ತೆಯಾಗಿದ್ದು, ಅವರನ್ನು ಹುಡುಕುವ ಕಾರ್ಯಾಚರಣೆ ನಡೆಯುತ್ತಲೇ ಇದೆ.
ಜೆರೆಮಿ ನಗರದಲ್ಲಿ ಭೂಕಂಪದ ತೀವ್ರತೆ ಹೆಚ್ಚಾಗಿತ್ತು. ಆದರೆ ಒಂದು ಅಂತಸ್ತಿನ ಮನೆಗಳೇ ಹೆಚ್ಚಿನ ಪ್ರಮಾಣದಲ್ಲಿದ್ದ ಕಾರಣ ಸಾವುನೋವಿನ ಪ್ರಮಾಣ ಇತರೆಡೆಗಳಿಗಿಂತ ಕಡಿಮೆಯಿದೆ. ಲೆಸ್ ಕೆಯೆಸ್ ನಗರದಲ್ಲಿ ಬಹು ಅಂತಸ್ತಿನ ಹೊಟೆಲ್ ಉರುಳಿದ್ದು, ಸಾವುನೋವು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿದೆ. ಆಗಸ್ಟ್ 14ರಂದು ಭೂಕಂಪ ಸಂಭವಿಸಿದ ಬಳಿಕ ಅಲ್ಲಿ ಮಳೆಯ ಪ್ರಮಾಣವೂ ಹೆಚ್ಚಾಗಿದ್ದು, ರಕ್ಷಣಾ ಕಾರ್ಯಾಚರಣೆಗೂ ತೊಡಕಾಗುತ್ತಿದೆ.
2010ರಲ್ಲಿ ಹೈಟಿ ದೇಶದಲ್ಲಿ ಭಯಂಕರ ಪ್ರಮಾಣದ ಭೂಕಂಪ ಆಗಿತ್ತು. ಆಗ 10 ಸಾವಿರಗಳಷ್ಟು ಮನೆಗಳು, ಕಟ್ಟಡಗಳು ಕುಸಿದುಬಿದ್ದಿದ್ದವು. ಇನ್ನೂ ಅಭಿವೃದ್ಧಿಶೀಲ ದೇಶವಾಗಿರುವ ಹೈಟಿ ಇನ್ನೇನು ಚೇತರಿಸಿಕೊಳ್ಳುತ್ತಿದೆ ಎನ್ನುವಷ್ಟರಲ್ಲಿ ಈ ಬಾರಿ ಮತ್ತೆ ಪ್ರಬಲ ಭೂಕಂಪಕ್ಕೆ ತತ್ತರಿಸಿದೆ. ಹೈಟಿಯಲ್ಲಿ ಸಮಸ್ಯೆಗಳು ಒಂದೆರಡಲ್ಲ. ಅಲ್ಲಿ ಕೊವಿಡ್ 19 ಪರಿಸ್ಥಿತಿ ಇದೆ..ರಾಜಕೀಯವಾಗಿ ಹಲವು ಜಂಜಾಟಗಳಿವೆ. ಅದರಲ್ಲೂ ಕಳೆದ ತಿಂಗಳು ಹಿಂದಿನ ಅಧ್ಯಕ್ಷ ಜೊವೆನೆಲ್ ಮೊಯಿಸ್ ಹತ್ಯೆಯಾದ ಬಳಿಕ ರಾಜಕೀಯ ಅಸ್ತವ್ಯಸ್ತತೆ ಇನ್ನಷ್ಟು ಹೆಚ್ಚಾಗಿದೆ. ಸದ್ಯ ಪ್ರಧಾನಿ ಏರಿಯಲ್ ಹೆನ್ರಿ ಹೈಟಿಯಲ್ಲಿ ಒಂದು ತಿಂಗಳ ಕಾಲದ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿದು ಹರಕಲು ಬಾಯಿ ಎಂದ ಮಾಜಿ ಕ್ರಿಕೆಟಿಗ
Published On - 3:34 pm, Thu, 19 August 21