Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದಲ್ಲಿ ಮೆರವಣಿಗೆ ನಡೆಯುತ್ತಿದ್ದ ವೇಳೆ ಬಾಂಬ್​ ಸ್ಫೋಟ; ಮೂವರು ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ

Pakistan: 7ನೇ ಶತಮಾನದಲ್ಲಿ ಮೃತರಾದ, ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಹುಸೇನ್ ಪುಣ್ಯಸ್ಮರಣೆಯ ನಿಮಿತ್ತ ಪ್ರತಿವರ್ಷ ಶಿಯಾ ಸಮುದಾಯದವರು ಈ ಅಶೌರಾ ಉತ್ಸವ ಆಚರಣೆ ಮಾಡುತ್ತಾರೆ.

ಪಾಕಿಸ್ತಾನದಲ್ಲಿ ಮೆರವಣಿಗೆ ನಡೆಯುತ್ತಿದ್ದ ವೇಳೆ ಬಾಂಬ್​ ಸ್ಫೋಟ; ಮೂವರು ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ
ಸಾಂಕೇತಿಕ ಚಿತ್ರ
Follow us
TV9 Web
| Updated By: Digi Tech Desk

Updated on:Aug 19, 2021 | 5:45 PM

ಮುಲ್ತಾನ್​: ಶಿಯಾ ಪಂಥ (Shiite Islam)ದ ಮುಸ್ಲಿಮರ ಮೆರವಣಿಗೆ ನಡೆಯುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಪ್ರಬಲ ಬಾಂಬ್ (Bomb Blast)​ ಸ್ಫೋಟಗೊಂಡು ಕನಿಷ್ಠ ಮೂವರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಮಧ್ಯ ಪಾಕಿಸ್ತಾನ (Pakistan)ದ ಮುಲ್ತಾನ್​ ನಗರದಲ್ಲಿ ನಡೆದಿದೆ. ಬಾಂಬ್​ ಸ್ಫೋಟಗೊಂಡ ಸ್ಥಳಕ್ಕೆ ಪೊಲೀಸರು, ಆಂಬುಲೆನ್ಸ್​ಗಳು ದೌಡಾಯಿಸುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿವೆ. ಬಾಂಬ್​ ಸ್ಫೋಟಗೊಂಡ ಪರಿಣಾಮ ಸುಟ್ಟ ಗಾಯಗಳಿಗೆ ಒಳಗಾದ ಜನರು ಅಲ್ಲೇ ರಸ್ತೆ ಬದಿಯಲ್ಲಿ ಬಿದ್ದು ನರಳಾಡುವ, ಸಹಾಯಕ್ಕಾಗಿ ಅಂಗಲಾಚುವ ದೃಶ್ಯಗಳೂ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ.

ಬಾಂಬ್​ ಸ್ಫೋಟಗೊಂಡಿರುವುದು ಪೂರ್ವ ಪಂಜಾಬ್​ ಪ್ರಾಂತ್ಯದ ಕಟ್ಟಾ ಸಂಪ್ರದಾಯ ನಗರವಾದ ಬಹವಾಲ್​ನಗರದಲ್ಲಿ. ಶಿಯಾ ಸಮುದಾಯದವರ ಅಶೌರಾ ಹಬ್ಬದ ನಿಮಿತ್ತ ಮೆರವಣಿಗೆ ನಡೆಯುತ್ತಿತ್ತು. ಇದೀಗ ಇಲ್ಲಿನ ರಸ್ತೆಯುದ್ದಕ್ಕೂ ಜನರು ಬಿದ್ದು ಹೊರಳಾಡುತ್ತಿದ್ದಾರೆ. ಇಲ್ಲಿ ಸ್ಫೋಟಿಸಿದ್ದು ಪ್ರಬಲವಾದ ಬಾಂಬ್​ ಎಂದು ನಗರದ ಪೊಲೀಸ್​ ಅಧಿಕಾರಿ ಮೊಹಮ್ಮದ್​ ಅಸಾದ್​ ಮತ್ತು ಶಿಯಾ ಮುಖಂಡ ಖವಾರ್ ಶಫ್ಕತ್ ಇಬ್ಬರೂ ದೃಢಪಡಿಸಿದ್ದಾರೆ. ಬಾಂಬ್​ ಸ್ಫೋಟವಾಗಿ ಸಾವು-ನೋವು ಆಗುತ್ತಿದ್ದಂತೆ ಇದೀಗ ನಗರಾದ್ಯಂತ ಶಿಯಾ ಪಂಥದ ಜನರ ಪ್ರತಿಭಟನೆ, ಗಲಾಟೆ ಶುರುವಾಗಿದೆ. ಅಲ್ಲೀಗ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.

ಮುಹಾಜಿರ್ ಕಾಲನಿಯಲ್ಲಿ ಸದಾ ಜನದಟ್ಟಣೆ ಇರುತ್ತದೆ. ಮೆರವಣಿಗೆ ಈ ಕಾಲನಿ ಮೂಲಕ ಹಾದು ಹೋಗುವಾಗ ಬಾಂಬ್​ ಸ್ಫೋಟವಾಗಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಬರೀ ಇಲ್ಲಷ್ಟೇ ಅಲ್ಲದೆ, ಪಾಕಿಸ್ತಾನದಾದ್ಯಂತ ಹಲವು ಪ್ರದೇಶಗಳಲ್ಲಿ ಶಿಯಾ ಮೆರವಣಿಗೆಗಳು ನಡೆಯುತ್ತಿದ್ದು, ಇಂಥ ಮೆರವಣಿಗೆಗಳಿಗೆ ಸರ್ಕಾರದಿಂದ ಸೂಕ್ತ ಭದ್ರತೆ ನೀಡಬೇಕು ಎಂದು ಖವಾರ್ ಶಫ್ಕತ್ ಆಗ್ರಹಿಸಿದ್ದಾರೆ.

ಅಶೌರಾ ಉತ್ಸವದ ಬಗ್ಗೆ ವಿವರ.. 7ನೇ ಶತಮಾನದಲ್ಲಿ ಮೃತರಾದ, ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಹುಸೇನ್ ಪುಣ್ಯಸ್ಮರಣೆಯ ನಿಮಿತ್ತ ಪ್ರತಿವರ್ಷ ಶಿಯಾ ಸಮುದಾಯದವರು ಈ ಅಶೌರಾ ಉತ್ಸವ ಆಚರಣೆ ಮಾಡುತ್ತಾರೆ. ಹುಸೇನ್​ ಶಿಯಾ ಇಸ್ಲಾಮಿಗಳ ಪಾಲಿಗೆ ಅತ್ಯಂತ ನೆಚ್ಚಿನ ಧರ್ಮಗುರು ಆಗಿದ್ದಾರೆ. ಅವರ ಪುಣ್ಯಸ್ಮರಣೆಯನ್ನು ಶಿಯಾ ಸಮುದಾಯದವರು ಅತ್ಯಂತ ಭಾವನಾತ್ಮಕವಾಗಿ ಆಚರಿಸುತ್ತಾರೆ. ಈ ಅಶೌರಾ ಹಬ್ಬದಂದು ಜಗತ್ತಿನಾದ್ಯಂತ ಇರುವ ಎಲ್ಲ ಶಿಯಾಗಳು ಮೆರವಣಿಗೆ ನಡೆಸಿ, ಹುಸೇನ್​ಗೆ ಗೌರವ ಸಲ್ಲಿಸುತ್ತಾರೆ. ಪಾಕಿಸ್ತಾನದಲ್ಲಿ ಸುನ್ನಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದು, ಶಿಯಾಗಳು ಅಲ್ಪಸಂಖ್ಯಾತರು. ಈ ಎರಡೂ ವರ್ಗಗಳಲ್ಲೇ ಅಪಾರ ದ್ವೇಷವಿದೆ. ಶಿಯಾಗಳು ಧರ್ಮಭಷ್ಟರು.. ಅವರು ಬದುಕಲು ಯೋಗ್ಯರಲ್ಲ ಎಂಬುದು ಸುನ್ನಿಗಳ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ಪ್ರತ್ಯೇಕ ದೇಶವಾದ ಕಾಶ್ಮೀರ ಭಾರತಕ್ಕೂ ಸೇರಿದ್ದಲ್ಲ; ವಿವಾದಕ್ಕೆ ಕಾರಣವಾಯ್ತು ನವಜೋತ್ ಸಿಂಗ್ ಸಲಹೆಗಾರನ ಹೇಳಿಕೆ

Haiti Earthquake: ಹೈಟಿ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 2189ಕ್ಕೆ ಏರಿಕೆ; 300ಕ್ಕೂ ಹೆಚ್ಚು ಮಂದಿ ನಾಪತ್ತೆ

Published On - 4:02 pm, Thu, 19 August 21

ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಎಲುಬಿಲ್ಲದ ನಾಲಗೆ ಮೇಲೆ ಹತೋಟಿ ತಪ್ಪಿದರೆ ಗೌರವ ಸಿಗಲ್ಲ: ಚಲುವರಾಯಸ್ವಾಮಿ
ಎಲುಬಿಲ್ಲದ ನಾಲಗೆ ಮೇಲೆ ಹತೋಟಿ ತಪ್ಪಿದರೆ ಗೌರವ ಸಿಗಲ್ಲ: ಚಲುವರಾಯಸ್ವಾಮಿ
ಭಾರತಕ್ಕೆ ಆಗಮಿಸಿದ ದುಬೈ ಪ್ರಿನ್ಸ್ ಶೇಖ್ ಹಮ್ದಾನ್​ಗೆ ಚಂಡೆ ವಾದ್ಯದ ಸ್ವಾಗತ
ಭಾರತಕ್ಕೆ ಆಗಮಿಸಿದ ದುಬೈ ಪ್ರಿನ್ಸ್ ಶೇಖ್ ಹಮ್ದಾನ್​ಗೆ ಚಂಡೆ ವಾದ್ಯದ ಸ್ವಾಗತ
ಮಗಳ ಸಾಧನೆ ಕಂಡು ಮೂಕವಿಸ್ಮಿತನಾದ ತಂದೆಗೆ ಕಾಲೇಜು ಸಿಬ್ಬಂದಿಯಿಂದ ಸನ್ಮಾನ
ಮಗಳ ಸಾಧನೆ ಕಂಡು ಮೂಕವಿಸ್ಮಿತನಾದ ತಂದೆಗೆ ಕಾಲೇಜು ಸಿಬ್ಬಂದಿಯಿಂದ ಸನ್ಮಾನ
ಮುಂದಿನ ಹೋರಾಟ ಹೇಗೆ ಅಂತ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ: ಅಶೋಕ
ಮುಂದಿನ ಹೋರಾಟ ಹೇಗೆ ಅಂತ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ: ಅಶೋಕ
ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಫಸ್ಟ್: ಪರೀಕ್ಷೆ ತಯಾರಿ ಹೇಗಿತ್ತು?
ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಫಸ್ಟ್: ಪರೀಕ್ಷೆ ತಯಾರಿ ಹೇಗಿತ್ತು?
ಮೂರನೇ ಪರೀಕ್ಷೆ ಫಲಿತಾಂಶ ನಂತರವೇ ಪಾಸ್/ ಫೇಲ್ ಮಾರ್ಕ್ಸ್ ಕಾರ್ಡ್: ಸಚಿವ
ಮೂರನೇ ಪರೀಕ್ಷೆ ಫಲಿತಾಂಶ ನಂತರವೇ ಪಾಸ್/ ಫೇಲ್ ಮಾರ್ಕ್ಸ್ ಕಾರ್ಡ್: ಸಚಿವ
ವಾಟರ್ ಬಾಟಲ್ ಆರೋಗ್ಯಕ್ಕೆ ಮಾರಕ: ಆರೋಗ್ಯ ಸಚಿವರ ಸುದ್ದಿಗೋಷ್ಠಿ ಲೈವ್​
ವಾಟರ್ ಬಾಟಲ್ ಆರೋಗ್ಯಕ್ಕೆ ಮಾರಕ: ಆರೋಗ್ಯ ಸಚಿವರ ಸುದ್ದಿಗೋಷ್ಠಿ ಲೈವ್​
ದ್ವಿತೀಯ ಪಿಯು ಫಲಿತಾಂಶ: ಲಾರಿ ಡ್ರೈವರ್​ ಪುತ್ರಿ ಕರ್ನಾಟಕಕ್ಕೆ ಫಸ್ಟ್
ದ್ವಿತೀಯ ಪಿಯು ಫಲಿತಾಂಶ: ಲಾರಿ ಡ್ರೈವರ್​ ಪುತ್ರಿ ಕರ್ನಾಟಕಕ್ಕೆ ಫಸ್ಟ್
ಸರ್ಕಾರೀ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಯತ್ನ: ಸಚಿವ
ಸರ್ಕಾರೀ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಯತ್ನ: ಸಚಿವ