Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಷಿಂಗ್​ಟನ್: ಕ್ಯಾಪಿಟೊಲ್​ನಲ್ಲಿ ಬಾಂಬ್​ ಬೆದರಿಕೆ, ದೂರ ಹೋಗುವಂತೆ ಪತ್ರಕರ್ತರಿಗೆ ಪೊಲೀಸರ ಸೂಚನೆ

ಅಮೆರಿಕದ ಜನಪ್ರತಿನಿಧಿಗಳ ಸಭೆ ನಡೆಯುವ ವಾಷಿಂಗ್​ಟನ್​ನ ಕ್ಯಾಪಿಟೊಲ್ ಪ್ರದೇಶದಲ್ಲಿ ಬಾಂಬ್ ಬೆದರಿಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಷಿಂಗ್​ಟನ್: ಕ್ಯಾಪಿಟೊಲ್​ನಲ್ಲಿ ಬಾಂಬ್​ ಬೆದರಿಕೆ, ದೂರ ಹೋಗುವಂತೆ ಪತ್ರಕರ್ತರಿಗೆ ಪೊಲೀಸರ ಸೂಚನೆ
ಅಮೆರಿಕದ ಕ್ಯಾಪಿಟೊಲ್ ಕಟ್ಟಡ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 19, 2021 | 9:45 PM

ವಾಷಿಂಗ್​ಟನ್: ಅಮೆರಿಕದ ಜನಪ್ರತಿನಿಧಿಗಳ ಸಭೆ ನಡೆಯುವ ವಾಷಿಂಗ್​ಟನ್​ನ ಕ್ಯಾಪಿಟೊಲ್ ಪ್ರದೇಶದಲ್ಲಿ ಬಾಂಬ್ ಬೆದರಿಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು, ಪತ್ರಕರ್ತರು ಕಾಂಗ್ರೆಸ್​ (ಅಮೆರಿಕದ ಜನಪ್ರತಿನಿಧಿ ಸಭೆ) ಗ್ರಂಥಾಲಯದ ಆಸುಪಾಸಿನಲ್ಲಿ ಓಡಾಡಬಾರದು ಎಂದು ಕ್ಯಾಪಿಟೊಲ್ ಪೊಲೀಸರು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಕ್ಯಾಪಿಟೊಲ್ ಕಟ್ಟಡದ ಸಮೀಪ ಅನುಮಾನಾಸ್ಪದ ವಾಹನವೊಂದು ನಿಂತಿರುವುದನ್ನು ಗಮನಿಸಿದ ಪೊಲೀಸರು ತಕ್ಷಣ ಎಚ್ಚರಿಕೆಯ ಸಂದೇಶ ರವಾನಿಸಿದರು. ಸ್ಫೋಟಕಗಳು ಇರಬಹುದು ಎಂಬ ಶಂಕೆಯಿಂದ ಕಾಂಗ್ರೆಸ್ ಕಟ್ಟಡದ ಗ್ರಂಥಾಲಯದಲ್ಲಿಯೂ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಎಫ್​ಬಿಐ (Federal Bureau of Investigation – FBI) ಏಜೆಂಟ್​ಗಳೂ ಸ್ಥಳಕ್ಕೆ ಧಾವಿಸಿದ್ದು, ಪೊಲೀಸರಿಗೆ ನೆರವು ನೀಡುತ್ತಿದ್ದಾರೆ.

ಸಜೀವ ಬಾಂಬ್ ಇರಬಹುದು ಎಂಬ ಶಂಕೆಯಿಂದ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಒಂದು ಪಿಕ್​ಅಪ್​ ಟ್ರಕ್​ನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಬಾಂಬ್ ಇದೆ ಎಂಬ ಸಂದೇಶವನ್ನು ಪೊಲೀಸರಿಗೆ ನೀಡಿದ್ದ. ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಅಮೆರಿಕದ ಕಾನೂನು ಜಾರಿ ಇಲಾಖೆ ಮತ್ತು ಎಫ್​ಬಿಐ ಸಾಕಷ್ಟು ಸಿಬ್ಬಂದಿಯನ್ನು ಬೆದರಿಕೆ ಕರೆ ಮಾಡಿದ ವ್ಯಕ್ತಿಯ ಪತ್ತೆಗಾಗಿ ನಿಯೋಜಿಸಿವೆ.

ಕಾಂಗ್ರೆಸ್​ನ ಮುಖ್ಯ ಕಟ್ಟಡದಿಂದ ಈಗಾಗಲೇ ಎಲ್ಲರನ್ನೂ ದೂರ ಕಳಿಸಲಾಗಿದೆ. ಸೆನೆಟ್ ಕಟ್ಟಡದ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹತ್ತಿರದಲ್ಲಿಯೇ ಇರುವ ರಿಪಬ್ಲಿಕನ್ ನ್ಯಾಷನಲ್ ಕಮಿಟಿ ಮುಖ್ಯ ಕಚೇರಿಯಿಂದ ಎಲ್ಲರನ್ನೂ ಹೊರಗೆ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಜನವರಿಯಲ್ಲಿ ಟ್ರಂಪ್ ಬೆಂಬಲಿಗರು ತಮ್ಮ ನಾಯಕನ ಸೋಲು ಖಚಿತವಾದ ನಂತರ ಕ್ಯಾಪಿಟೊಲ್ ಕಟ್ಟಡಕ್ಕೆ ನುಗ್ಗಿ ತಲಾಟೆ ಮಾಡಿದ್ದರು. ಅದಾದ ನಂತರ ಕ್ಯಾಪಿಟೊಲ್ ಹೆಸರು ಜಗತ್ತಿನಲ್ಲಿ ಚಿರಪರಿಚಿತವಾಗಿತ್ತು.

(Bomb Threat in Capitol of Washington Police Rushed to spot)

ಇದನ್ನೂ ಓದಿ: ‘ಅಫ್ಘಾನ್​​ನಲ್ಲಿ ಭಾರತದ ಹೂಡಿಕೆ ಮುಂದುವರಿಯಲಿದೆಯಾ’-ಅಮೆರಿಕ ಮಾಧ್ಯಮಗಳ ಈ ಪ್ರಶ್ನೆಗೆ ಎಸ್​.ಜೈಶಂಕರ್​ ಕೊಟ್ಟ ಚುಟುಕು ಉತ್ತರ ಹೀಗಿದೆ

ಇದನ್ನೂ ಓದಿ: ಅಮೆರಿಕ ಕ್ಯಾಪಿಟಲ್ ದಾಳಿ ಪ್ರಕರಣ: 100ಕ್ಕೂ ಹೆಚ್ಚು ಜನರ ಬಂಧನ, 200 ಶಂಕಿತರ ಗುರುತು ಪತ್ತೆ

Published On - 9:11 pm, Thu, 19 August 21

ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?
WITT: ಟಿವಿ9 ಶೃಂಗಸಭೆಯಲ್ಲಿ ಕೇಂದ್ರ ಸಚಿವರ ಸಂದರ್ಶನ, ಲೈವ್ ನೋಡಿ
WITT: ಟಿವಿ9 ಶೃಂಗಸಭೆಯಲ್ಲಿ ಕೇಂದ್ರ ಸಚಿವರ ಸಂದರ್ಶನ, ಲೈವ್ ನೋಡಿ