ಇಬ್ಬರು ಆಫ್ಘನ್ನರು ವಿಮಾನದಿಂದ ಜಾರಿ ಮನೆಯೊಂದರ ಮಾಳಿಗೆ ಮೇಲೆ ಬಿದ್ದಾಗ ಟ್ರಕ್ಕಿನ ಟೈರ್ ಬರ್ಸ್ಟ್ ಆದಂಥ ಶಬ್ದ ಕೇಳಿಸಿತಂತೆ!

ಒಬ್ಬ ವ್ಯಕ್ತಿಯ ಜೇಬಿನಲ್ಲಿ ಅವನ ಜನನ ಪ್ರಮಾಣ ಪತ್ರ ಸಿಕ್ಕಿದ್ದು ಅವನ ಹೆಸರು ಸಫಿಯುಲ್ಲಾಹ್ ಹೋತಕ್ ಆಗಿದ್ದು ಅವನು ವೃತ್ತಿಯಲ್ಲಿ ವೈದ್ಯನಾಗಿದ್ದ. ಎರಡನೇಯವನ ಹೆಸರು ಫಿದಾ ಮೊಹಮ್ಮದ್. ಇವರಿಬ್ಬರು 30 ಕ್ಕಿಂತ ಕಡಿಮೆ ಪ್ರಾಯದವರು.

ಇಬ್ಬರು ಆಫ್ಘನ್ನರು ವಿಮಾನದಿಂದ ಜಾರಿ ಮನೆಯೊಂದರ ಮಾಳಿಗೆ ಮೇಲೆ ಬಿದ್ದಾಗ ಟ್ರಕ್ಕಿನ ಟೈರ್ ಬರ್ಸ್ಟ್ ಆದಂಥ ಶಬ್ದ ಕೇಳಿಸಿತಂತೆ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 19, 2021 | 11:19 PM

ನವದೆಹಲಿ: ಅಫಘಾನಿಸ್ತಾನದ ಇಬ್ಬರು ನಾಗರಿಕರು ತಮ್ಮ ದೇಶದಿಂದ ಓಡಿಹೋಗುವ ಪ್ರಯತ್ನದಲ್ಲಿ ಅಮೆರಿಕದ ಮಿಲಿಟರಿ ವಿಮಾನಕ್ಕೆ ಜೋತು ಬಿದ್ದು ಅದು ಟೇಕಾಫ್ ಆಗುತ್ತಲೇ ಕಾಬೂಲ್ ನಗರದ ಮನೆಯೊಂದರ ಮೇಲೆ ಧೊಪ್ಪನೆ ಬಿದ್ದು ಪ್ರಾಣ ಕಳೆದುಕೊಂಡ ದೃಶ್ಯವನ್ನು ಈಗ ಇಡೀ ವಿಶ್ವವೇ ನೋಡಿದೆ. ಅವರು ಬಿದ್ದ ಮನೆಯ ಮಾಲೀಕ ತಾನು ಕಂಡಿದ್ದನ್ನು ವಿವರಿಸಿದ್ದಾನೆ. ಅವನ ಹೆಸರು ವಲಿ ಸಲೇಕ್. ಅವರು ಮಾಳಿಗೆ ಮೇಲೆ ಬಿದ್ದಾಗ ಸಲೇಕ್ ಮನೆಯಲ್ಲೇ ಇದ್ದನಂತೆ. ‘ಟ್ರಕ್ಕಿನ ಟೈರೊಂದು ಬರ್ಸ್ಟ್ ಆದಂಥ ಶಬ್ದ ನನಗೆ ಕೇಳಿಸಿತು,’ ಎಂದು ವೃತ್ತಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿರುವ 49 ವರ್ಷ ವಯಸ್ಸಿನ ಸಲೇಕ್ ಹೇಳಿದ್ದಾನೆ. ಶಬ್ದ ಕೇಳಿದ ಕೂಡಲೇ ಅವನು ಮಾಳಿಗೆಗೆ ಹೋದವನು ಮೃತದೇಹಗಳನ್ನು ಕಂಡು ಹೆದರಿದ್ದಾನೆ. ಅವನ ಹಿಂದಯೇ ಟೆರೇಸ್ ಹತ್ತಿದ ಅವನ ಪತ್ನಿ ದೃಶ್ಯ ಕಂಡು ಮೂರ್ಛೆ ಹೋಗಿದ್ದಾಳೆ.

ತಾಲಿಬಾನಿಗಳು ಅಫಘಾನಿಸ್ತಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡ ನಂತರ ಕಾಬೂಲ್ ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿದ್ದ ವಿದ್ಯಮಾನಗಳನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದ ಸಲೇಕ್​​ನ ನೆರೆಮನೆಯವನು ಅವರು ವಿಮಾನದಿಂದ ಬಿದ್ದವರು ಎಂದು ಹೇಳಿದ್ದಾನೆ.

ಅಫಘಾನಿಸ್ತಾನದಿಂದ ತಪ್ಪಿಸಿಕೊಳ್ಳುವ ಹತಾಷ ಪ್ರಯತ್ನ ನಡೆಸುತ್ತಿದ್ದ ಸಾವಿರಾರು ಜನ ಸೋಮವಾರ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜಮಾ ಆಗಿದ್ದರು ಮತ್ತು ಅವರಲ್ಲಿ ಇವರಿಬ್ಬರು ಕೂಡ ಸೇರಿದ್ದರು. ಅಮೆರಿಕ ಮಿಲಿಟರಿ ವಿಮಾನದ ಹಾರುವ ಮೊದಲು ಅದರು ಗಾಲಿಗಳಿಗೆ ಜೋತು ಬಿದ್ದಿದ್ದ ಅವರು ಕೆಲವೇ ಕ್ಷಣಗಳ ನಂತರ ಸಲೇಕ್ ಮನೆ ಮೇಲೆ ಬಿದ್ದು ಪ್ರಾಣ ಕಳೆದುಕೊಂಡರು. ಸಲೇಕ್ ಮನೆ ವಿಮಾನ ನಿಲ್ದಾಣದಿಂದ 4 ಕಿಮೀ ದೂರದಲ್ಲಿದೆ. ಅವರಿಬ್ಬರು ಬಿದ್ದ ಜೋರು ಮತ್ತು ಭಾರಕ್ಕೆ ಮಾಳಿಗೆಯ ಒಂದಷ್ಟು ಭಾಗ ಹಾನಿಗೊಳಗಾಗಿದೆ.

‘ಆ ದೇಹಗಳ ಹೊಟ್ಟೆ ಮತ್ತು ತಲೆ ಒಡೆದು ಬಿಚ್ಚಿಕೊಂಡಿದ್ದವು. ಒಂದು ಶಾಲು ಮತ್ತು ಸ್ಕಾರ್ಫ್ ನಿಂದ ನಾನು ಮೃತ ದೇಹಗಳನ್ನು ಮುಚ್ಚಿದೆ. ನಂತರ ನನ್ನ ಬಂಧುಗಳ ನೆರವಿನಿಂದ ದೇಹಗಳನ್ನು ಮಸೀದಿಗೆ ತೆಗೆದುಕೊಂಡು ಹೋದೆ,’ ಎಂದು ದೆಹಲಿಯಲ್ಲಿರುವ ತನ್ನ ಕುಟುಂಬದ ಸದಸ್ಯನೊಬ್ಬನಿಗೆ ಮಾಡಿದ ವಿಡಿಯೋ ಕಾಲ್ ಮೂಲಕ ಎನ್ಡಿಟಿವಿಗೆ ತಿಳಿಸಿದ್ದಾನೆ.

ಒಬ್ಬ ವ್ಯಕ್ತಿಯ ಜೇಬಿನಲ್ಲಿ ಅವನ ಜನನ ಪ್ರಮಾಣ ಪತ್ರ ಸಿಕ್ಕಿದ್ದು ಅವನ ಹೆಸರು ಸಫಿಯುಲ್ಲಾಹ್ ಹೋತಕ್ ಆಗಿದ್ದು ಅವನು ವೃತ್ತಿಯಲ್ಲಿ ವೈದ್ಯನಾಗಿದ್ದ. ಎರಡನೇಯವನ ಹೆಸರು ಫಿದಾ ಮೊಹಮ್ಮದ್. ಇವರಿಬ್ಬರು 30 ಕ್ಕಿಂತ ಕಡಿಮೆ ಪ್ರಾಯದವರು.

ಅವತ್ತಿನ ಭಯಾನಕ ಘಟನೆ ನಂತರ ಸಲೇಕ್ ನಂಥ ಅನೇಕ ಕುಟುಂಬಗಳು ತಮ್ಮ ಕಣ್ಣೆದುರೇ ಕಾಬೂಲ್ ನಗರದಲ್ಲಾಗುತ್ತಿರುವ ಬದಲಾವಣೆಗಳನ್ನು ಅತಂಕ ಮತ್ತು ಭೀತಿಯಿಂದ ಗಮನಿಸುತ್ತಿದ್ದಾರೆ. ‘ಕಾಬೂಲ್ ನಗರದ ಬೀದಿಗಳು ಬಿಕೋ ಅನ್ನುತ್ತಿವೆ. ಮಹಿಳೆಯರ ಮಾತು ಹಾಗಿರಲಿ, ಪುರುಷರು ಸಹ ಮನೆ ಬಿಟ್ಟು ಹೊರಬರುತ್ತಿಲ್ಲ. ಮುಂದಿನ ಕೆಲ ಸಮಯದಲ್ಲಿ ಏನು ನಡೆಯಲಿದೆ ಅನ್ನೋದು ಯಾರಿಗೂ ಗೊತ್ತಿಲ್ಲ,’ ಎಂದು ಸಲೇಕ್ ಹೇಳಿದ್ದಾನೆ.

‘ಎಲ್ಲೆಡೆ ಭೀತಿಯ ವಾತಾವರಣವಿದೆ, ಅವಕಾಶ ಸಿಕ್ಕರೆ ನಾನೂ ಸಹ ಅಫಘಾನಿಸ್ತಾನ ತೊರೆದು ಬೇರೆ ಯಾವುದು ದೇಶಕ್ಕೆ ಹೋಗುತ್ತೇನೆ,’ ಎಂದು ಅವನು ಹೇಳಿದ್ದಾನೆ.

ತಾಲಿಬಾನ್ ಅಫಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ನಂತರ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನ ಜಾತ್ರೆಯಂತೆ ನೆರೆದು ಅಲ್ಲಿ ಕಂಡ ವಿಮಾನಗಳನ್ನು ಹತ್ತುವ ಪ್ರಯತ್ನ ಮಾಡುತ್ತಿರುವ ದೃಶ್ಯಗಳು ಸಾಮಾಜಿನ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕೆಲವರು ವಿಮಾನದ ರೆಕ್ಕೆಗಳಿಗೆ ಜೋತಿ ಬಿದ್ದಿದ್ದರೆ ಇನ್ನೂ ಕೆಲವರು ರನ್ವೇ ಮೇಲೆ ಹುಚ್ಚು ಹಿಡಿದವರಂತೆ ಓಡುತ್ತಿದ್ದಾರೆ. ದೇಶ ಬಿಟ್ಟು ಹೋಗುವುದೊಂದೇ ಅವರ ಗುರಿಯಾಗಿದೆ.

ಸೋಮವಾರದಂದು ಕಾಬೂಲ್ ವಿಮಾನ ನಿಲ್ದಾಣದದಲ್ಲಿ ಸಿ-17 ಕಾರ್ಗೋ ವಿಮಾನ ಟೇಕಾಫ್ ಮಾಡುವಾಗ ಅದನ್ನು ಹತ್ತುವ ಪ್ರಯತ್ನದಲ್ಲಿ ಹಲವಾರು ಜನ ಸಾವಿಗೀಡಾದ ಘಟನೆಯನ್ನು ತಾನು ಪರಿಶೀಲಿಸುತ್ತಿರುವುದಾಗಿ ಅಮೇರಿಕದ ವಾಯುದಳ ಹೇಳಿದೆ.

ತನ್ನ ವಿಮಾನ ಕತಾರ್ ನಲ್ಲಿ ಲ್ಯಾಂಡ್ ಆದ ನಂತರ ಮಾನವ ದೇಹದ ಭಾಗಗಳು ಅದರ ಚಕ್ರಗಳಿಗೆ ಮತ್ತಿಕೊಂಡಿದ್ದು ಗಮನಕ್ಕೆ ಬಂದಿದೆ ಎಂದು ಅಮೇರಿಕ ಹೇಳಿದೆ.

ಇದನ್ನೂ ಓದಿ: ಕಾಬೂಲ್​ನಿಂದ ಸುರಕ್ಷಿತವಾಗಿ ಭಾರತಕ್ಕೆ ಬಂದಿಳಿದ ರಾಯಭಾರಿ ಕಚೇರಿ ಸಿಬ್ಬಂದಿಯ ಮುಖದಲ್ಲಿ ನಿರಾಳ ಭಾವ!

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?