ಅಮ್ಮನ ಜತೆಗೆ ಅಮ್ಮನ ಮಧುರ ನೆನಪಿನ ಚಿತ್ರಗಳಿದ್ದ ಮೊಬೈಲನ್ನೂ ಕಳೆದುಕೊಂಡಿದ್ದ ಕೊಡಗಿನ ಬಾಲಕಿಗೆ ಕೊನೆಗೂ ಸಿಗಲಿದೆ ‘ಆ ಮೊಬೈಲ್‘
ಕೊಡಗು ಜಿಲ್ಲೆಯ ಗುಮ್ಮನಕೊಲ್ಲಿ ಗ್ರಾಮದ ಹೃತಿಕ್ಷ ಹೆಸರಿನ ಪುಟ್ಟ ಕಂದಮ್ಮ ಕೊವಿಡ್ 2ನೇ ಅಲೆಯಲ್ಲಿ ತನ್ನ ತಾಯಿಯನ್ನು ಕಳೆದುಕೊಂಡಿದ್ದಳು. ತಾಯಿ ಜೊತೆಗೆ ಮಾತನಾಡಲು ಬಳಸುತ್ತಿದ್ದ ಫೋನ್ ಕಾಣೆಯಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ ಮತ್ತು ಜಿಲ್ಲಾ ಕೊವಿಡ್ ಆಸ್ಪತ್ರೆ ಸಿಬ್ಬಂದಿಗೆ ಪತ್ರ ಬರೆದು ತನ್ನ ತಾಯಿಯೊಂದಿಗೆ ಇದ್ದ ಮೊಬೈಲ್ ಹುಡುಕಿಕೊಡುವಂತೆ ಮನವಿ ಮಾಡಿದ್ದಳು.
ಕೊಡಗು: ಕೊವಿಡ್ ಸೋಂಕಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದ ಅಮ್ಮ ತೀರಿಹೋದಳು, ಅವಳ ಜತೆಗಿನ ನೆನಪುಗಳ ಚಿತ್ರಗಳಿದ್ದ ಮೊಬೈಲ್ ಸಹ ಅವಳ ಜತೆಗೇ ಕಾಣೆಯಾಗಿದೆ. ದಯವಿಟ್ಟು ಆ ಮೊಬೈಲ್ ಫೋನ್ ಹುಡುಕಿಕೊಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದ ಬಾಲಕಿಗೆ ಬರೋಬ್ಬರಿ 3 ತಿಂಗಳ ನಂತರ ಆ ಭಾವನಾತ್ಮಕ ಮೊಬೈಲ್ ದೊರೆತಿದೆ. ‘ತಾಯಿ ಕಳೆದುಕೊಂಡು ನಾನು ತಬ್ಬಲಿಯಾಗಿದ್ದೇನೆ. ತಾಯಿ ಮೊಬೈಲ್‌ನಲ್ಲಿ ನೆನಪಿರುವ ಫೋಟೋಗಳಿವೆ’ಎಂದು ಬಾಲಕಿ ಹೃತಿಕ್ಷ ಕೊಡಗು ಜಿಲ್ಲಾಧಿಕಾರಿಗೂ ಪತ್ರ ಬರೆದಿದ್ದರು. ಬಾಲಕಿಯ ಮೊಬೈಲ್ ಪತ್ತೆಯಾಗಿದ್ದು, ಸಂಜೆ ಮೊಬೈಲ್ ಹಸ್ತಾಂತರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ಮೊಬೈಲ್ ಇಷ್ಟುದಿನ ಎಲ್ಲಿತ್ತು ಎಂಬ ಮಾಹಿತಿಯನ್ನು ಈವರೆಗೂ ಬಹಿರಂಗಪಡಿಸಿಲ್ಲ.
ಕೊಡಗು ಜಿಲ್ಲೆಯ ಗುಮ್ಮನಕೊಲ್ಲಿ ಗ್ರಾಮದ ಹೃತಿಕ್ಷ ಹೆಸರಿನ ಪುಟ್ಟ ಕಂದಮ್ಮ ಕೊವಿಡ್ 2ನೇ ಅಲೆಯಲ್ಲಿ ತನ್ನ ತಾಯಿಯನ್ನು ಕಳೆದುಕೊಂಡಿದ್ದಳು. ತಾಯಿ ಜೊತೆಗೆ ಮಾತನಾಡಲು ಬಳಸುತ್ತಿದ್ದ ಫೋನ್ ಕಾಣೆಯಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ ಮತ್ತು ಜಿಲ್ಲಾ ಕೊವಿಡ್ ಆಸ್ಪತ್ರೆ ಸಿಬ್ಬಂದಿಗೆ ಪತ್ರ ಬರೆದು ತನ್ನ ತಾಯಿಯೊಂದಿಗೆ ಇದ್ದ ಮೊಬೈಲ್ ಹುಡುಕಿಕೊಡುವಂತೆ ಮನವಿ ಮಾಡಿದ್ದಳು. ನಮ್ಮ ಮನೆಯಲ್ಲಿ ಕೊರೊನಾ ಕಾಣಿಸಿಕೊಂಡಿತ್ತು. ನನಗೆ, ನನ್ನ ತಂದೆ ಮತ್ತು ತಾಯಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ತಂದೆ ಮತ್ತು ನಾನು ಹೋಂ ಐಸೋಲೇಷನ್ನಲ್ಲಿ ಇದ್ದೆವು. ತಾಯಿಗೆ ಕೊರೊನಾ ತೀವ್ರವಾಗಿದ್ದರಿಂದ ಮೇ 6ರಂದು ಜಿಲ್ಲಾ ಕೊವಿಡ್ ಆಸ್ಪತ್ರೆಗೆ ದಾಖಲಿಸಿದ್ದೆವು. ಆದರೆ ತಾಯಿ ಚಿಕಿತ್ಸೆ ಫಲಕಾರಿಯಾದೆ ಮೇ 16ರಂದು ಬೆಳಿಗ್ಗೆ 6 ಗಂಟೆಗೆ ಮೃತಪಟ್ಟಿದ್ದಾರೆ ಎಂದು ನೊಂದ ಹುಡುಗಿ ಹೃತಿಕ್ಷ ಅಳಲು ತೋಡಿಕೊಂಡಿದ್ದಳು.
ಈಗಷ್ಟೇ ಅಮ್ಮ ಇನ್ನಿಲ್ಲ ಎನ್ನುವ ನೋವನ್ನು ನುಂಗುತ್ತಿದ್ದೇನೆ. ಆದರೆ ಮನೆಯಲ್ಲಿ ಅಮ್ಮನೊಂದಿಗೆ ಇದ್ದ ಪ್ರತಿ ಕ್ಷಣವು ನೆನಪಿಗೆ ಬರುತ್ತಿದೆ. ಅದರಲ್ಲೂ ಲಾಕ್ಡೌನ್ ಸಂದರ್ಭದಲ್ಲಿ ಅಮ್ಮನೇ ನನಗೆ ಎಲ್ಲಾ. ಆನ್ಲೈನ್ ಕ್ಲಾಸ್ ಆಗುವಾಗ ಅಮ್ಮ ಸಹಾಯ ಮಾಡುತ್ತಿದ್ದರು. ಮನೆಯಲ್ಲಿ ಅಮ್ಮನೊಂದಿಗೆ ಆಡುತ್ತಿದ್ದ ಆಟಗಳು ನನ್ನನ್ನು ಕಾಡುತ್ತಿದೆ. ಕಳೆದ ಪ್ರತಿಯೊಂದು ಸನ್ನಿವೇಶವು ಅಮ್ಮನ ಕೈಯಲ್ಲಿ ಇದ್ದ ಮೊಬೈಲ್ನಲ್ಲಿದೆ. ಹೀಗಾಗಿ ಆ ಮೊಬೈಲ್ ನನಗೆ ಬೇಕು ಎಂದು ಹೃತಿಕ್ಷ ಮನವಿ ಮಾಡಿದ್ದಳು.
ತಾಯಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು, ಅಂತ್ಯಸಂಸ್ಕಾರಕ್ಕೆ ಅವಸರವಿತ್ತು. ಹೀಗಾಗಿ ವಿಷಯ ತಿಳಿದು ನಮ್ಮ ತಂದೆ ಆಸ್ಪತ್ರೆಗೆ ತೆರಳಿದ್ದಾರೆ. ತಾಯಿಯ ಮೃತದೇಹವನ್ನು ಆಸ್ಪತ್ರೆಯವರು ಹಸ್ತಾಂತರಿಸಿದ್ದು, ಆಸ್ಪತ್ರೆಯಲ್ಲಿ ಇದ್ದ ಅಮ್ಮನ ಇನ್ನಿತರ ಸಾಮಗ್ರಿಗಳನ್ನು ಸಿಬ್ಬಂದಿಗಳು ಅಪ್ಪನಿಗೆ ಕೊಟ್ಟಿದ್ದಾರೆ. ಆದರೆ ತಾಯಿ ಜೊತೆಗಿದ್ದ ಮೊಬೈಲ್ ಕಾಣಿಸುತ್ತಿಲ್ಲ. ಆಸ್ಪತ್ರೆಯವರ ಬಳಿ ಕೇಳಿದರೆ ನಮಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ. ಆ ಮೊಬೈಲ್‌ನಲ್ಲಿ ನನ್ನ ತಾಯಿಯ ಜೊತೆಗಿದ್ದ ಸಾಕಷ್ಟು ನೆನಪುಗಳಿದೆ. ಹೀಗಾಗಿ ಮೊಬೈಲ್ ಹುಡುಕಿಕೊಡಿ ಎಂದು ನೊಂದ ಹುಡುಗಿ ಹೃತಿಕ್ಷ ಕೇಳಿಕೊಂಡಿದ್ದಳು.
ನನ್ನ ತಂದೆ ಕೂಲಿ ಕಾರ್ಮಿಕರಾಗಿದ್ದಾರೆ. ಕೊರೊನಾ ಕಾಲದಲ್ಲಿ ಓದಲು ಉಪಯೋಗವಾಗಲಿ ಎಂದು ಸ್ಯಾಮ್ಸಂಗ್ ಮೊಬೈಲ್ ಕೊಡಿಸಿದ್ದರು. ಇದರಲ್ಲಿ ನನಗೆ ಆನ್ಲೈನ್ ಕ್ಲಾಸ್ ಕೂಡ ನಡೆಯುತ್ತಿತ್ತು. ತಾಯಿಗೆ ಹುಷಾರಿಲ್ಲದ ಕಾರಣ ಇದು ಅವರ ಬಳಿ ಇತ್ತು. ಅಮ್ಮನ ಅಪ್ಪುಗೆಯಲ್ಲಿ ಇದ್ದ ಫೋಟೊಗಳು ಈ ಮೊಬೈಲ್‌ನಲ್ಲಿ ಇದೆ. ಅಮ್ಮನ ಬಳಿ ಮೇ 15ರಂದು ಮಾತನಾಡಿದ್ದೆ. ಆದರೆ ಶನಿವಾರ ಬೆಳಿಗ್ಗೆ ರಿಂಗ್ ಆದ ಫೋನ್ ಮಧ್ಯಾಹ್ನ ಸ್ವಿಚ್ ಆಫ್ ಆಗಿದೆ. ಹೀಗಾಗಿ ನನ್ನ ತಾಯಿಯ ಮೊಬೈಲ್ ಹುಡುಕಿ ಕೋಡಿ ಎಂದು 5ನೇ ತರಗತಿ ಓದುತ್ತಿರುವ ಹೃತಿಕ್ಷ ಮನವಿ ಮಾಡಿದ್ದಳು.
ಇದನ್ನೂ ಓದಿ:
ಮಾನವೀಯತೆ ಮೆರೆದ ಯುವ ಕಾಂಗ್ರೆಸ್ ಕಾರ್ಯಕರ್ತರು; ಮೊಬೈಲ್ ಕಳುವಾಗಿದೆ ಎಂದು ಪತ್ರ ಬರೆದ ಕೊಡಗು ಬಾಲಕಿಗೆ ಹೊಸ ಫೋನ್!
ಅಮ್ಮನ ಮೊಬೈಲ್ಗಾಗಿ ಮಗಳ ಪರದಾಟ ಪ್ರಕರಣ; ಆಸ್ಪತ್ರೆಯಲ್ಲೂ ಸಿಗದ ಮೊಬೈಲ್
(Kodagu madikeri Girl finally found mobile which had her mother photos who died by Covid 19)