AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾನವೀಯತೆ ಮೆರೆದ ಯುವ ಕಾಂಗ್ರೆಸ್ ಕಾರ್ಯಕರ್ತರು; ಮೊಬೈಲ್ ಕಳುವಾಗಿದೆ ಎಂದು ಪತ್ರ ಬರೆದ ಕೊಡಗು ಬಾಲಕಿಗೆ ಹೊಸ ಫೋನ್!

ಬಾಲಕಿ ಓದಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು ಎಂದು ಜಿಲ್ಲಾ ಯುವ ಕಾಂಗ್ರೇಸ್ ಕಾರ್ಯಕರ್ತರು ಹೊಸ ಮೊಬೈಲ್​ ಅನ್ನು ಈ ಬಾಲಕಿಗೆ ಉಡುಗೊರೆಯಾಗಿ ನೀಡಿದ್ದಾರೆ. ಬಾಲಕಿಗೆ ನೆರವು ನೀಡುವ ಭರದಲ್ಲಿ ಕೊವಿಡ್ ನಿಯಮವನ್ನು ಕಡೆಗಣಿಸಿದ ಕೊಡಗು ಯುವ ಕಾಂಗ್ರೆಸ್ ತಂಡ ಕ್ವಾರಂಟೈನ್​ನಲ್ಲಿರುವ ಕುಟುಂಬವನ್ನು ಮಾಸ್ಕ್ ಧರಿಸಿಯೇ ಭೇಟಿ ಮಾಡಿದ್ದಾರೆ.

ಮಾನವೀಯತೆ ಮೆರೆದ ಯುವ ಕಾಂಗ್ರೆಸ್ ಕಾರ್ಯಕರ್ತರು; ಮೊಬೈಲ್ ಕಳುವಾಗಿದೆ ಎಂದು ಪತ್ರ ಬರೆದ ಕೊಡಗು ಬಾಲಕಿಗೆ ಹೊಸ ಫೋನ್!
ಬಾಲಕಿಗೆ ಹೊಸ ಮೊಬೈಲ್ ಉಡುಗೊರೆಯಾಗಿ ನೀಡಿದ ಯುವ ಕಾಂಗ್ರೇಸ್ ಕಾರ್ಯಕರ್ತರು
preethi shettigar
|

Updated on:May 23, 2021 | 6:38 PM

Share

ಕೊಡಗು: ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದ, ತಾಯಿ ಕೈಯಲ್ಲಿದ್ದ ಮೊಬೈಲ್ ಫೋನ್ ಕಳುವಾಗಿದೆ. ಅದರಲ್ಲಿ ನನ್ನ ತಾಯಿಯ ನೆನಪುಗಳಿದೆ. ಹೇಗಾದರು ಮಾಡಿ ನನಗೆ ಅದನ್ನು ಹುಡುಕಿಕೊಡಿ ಎಂದು ಕೊಡಗು ಜಿಲ್ಲಾಧಿಕಾರಿಗೆ ಬಾಲಕಿ ಪತ್ರ ಬರೆದಿದ್ದಳು. ಈ ವರದಿ ಟಿವಿ9ನಲ್ಲಿ ಪ್ರಕಟವಾಗುತ್ತಿದ್ದಂತೆ, 5ನೇ ತರಗತಿ ಓದುತ್ತಿರುವ ಹೃತ್ವಿಕ್ಷಾ ಓದಿಗಾಗಿ ತಂದೆ ಮೊಬೈಲ್ ಕೊಡಿಸಿದ್ದರು, ಹೀಗಾಗಿ ಬಾಲಕಿ ಓದಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು ಎಂದು ಜಿಲ್ಲಾ ಯುವ ಕಾಂಗ್ರೇಸ್ ಕಾರ್ಯಕರ್ತರು ಹೊಸ ಮೊಬೈಲ್​ ಅನ್ನು ಈ ಬಾಲಕಿಗೆ ಉಡುಗೊರೆಯಾಗಿ ನೀಡಿದ್ದಾರೆ. ಬಾಲಕಿಗೆ ನೆರವು ನೀಡುವ ಭರದಲ್ಲಿ ಕೊವಿಡ್ ನಿಯಮವನ್ನು ಕಡೆಗಣಿಸಿದ ಕೊಡಗು ಯುವ ಕಾಂಗ್ರೆಸ್ ತಂಡ ಕ್ವಾರಂಟೈನ್​ನಲ್ಲಿರುವ ಕುಟುಂಬವನ್ನು ಮಾಸ್ಕ್ ಧರಿಸಿಯೇ ಭೇಟಿ ಮಾಡಿದ್ದು, ಸಾಮಾಜಿಕ ಅಂತರವನ್ನೂ ಕಾಯ್ದುಕೊಂಡಿದ್ದಾರೆ.

ಮೇ 16ರಂದು ಚಿಕಿತ್ಸೆ ಫಲಕಾರಿಯಾಗದೆ ಹೃತ್ವಿಕ್ಷಾ ತಾಯಿ ಮಡಿಕೇರಿ ಕೊವಿಡ್-19 ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ತಾಯಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು, ಅಂತ್ಯಸಂಸ್ಕಾರಕ್ಕೆ ಅವಸರವಿತ್ತು. ಹೀಗಾಗಿ ವಿಷಯ ತಿಳಿದು ನಮ್ಮ ತಂದೆ ಆಸ್ಪತ್ರೆಗೆ ತೆರಳಿದ್ದಾರೆ. ತಾಯಿಯ ಮೃತದೇಹವನ್ನು ಆಸ್ಪತ್ರೆಯವರು ಹಸ್ತಾಂತರಿಸಿದ್ದು, ಆಸ್ಪತ್ರೆಯಲ್ಲಿ ಇದ್ದ ಅಮ್ಮನ ಇನ್ನಿತರ ಸಾಮಗ್ರಿಗಳನ್ನು ಸಿಬ್ಬಂದಿಗಳು ತಂದೆ ಕೈಗೆ ಇಟ್ಟಿದ್ದಾರೆ. ಆದರೆ ತಾಯಿ ಜೊತೆಗಿದ್ದ ಮೊಬೈಲ್ ಕಾಣಿಸುತ್ತಿಲ್ಲ. ಆಸ್ಪತ್ರೆಯವರ ಬಳಿ ಕೇಳಿದರೆ ನಮಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ. ಆ ಮೊಬೈಲ್​ನಲ್ಲಿ ನನ್ನ ತಾಯಿಯ ಜೊತೆಗಿದ್ದ ಸಾಕಷ್ಟು ನೆನಪುಗಳಿದೆ. ಹೀಗಾಗಿ ಮೊಬೈಲ್ ಹುಡುಕಿಕೊಡಿ ಎಂದು ನೊಂದ ಹುಡುಗಿ ಹೃತಿಕ್ಷಾ ವಿಡಿಯೋ ಮತ್ತು ಪತ್ರದ ಮೂಲಕ ಮನವಿ ಮಾಡಿದ್ದಳು.

ಬಾಲಕಿ ತಂದೆಗೆ ಕೊಡಗು ಡಿಹೆಚ್‌ಒ ಕರೆ: ಬಾಲಕಿ ತಾಯಿಯ ಮೊಬೈಲ್ ಪತ್ತೆಗೆ ಪ್ರಯತ್ನ ಮಾಡಲಾಗುತ್ತಿದೆ ಎಂದು ಕೊಡಗು ಡಿಹೆಚ್‌ಒ ಕರೆ ಮಾಡಿದ್ದಾರೆ. ಅಲ್ಲದೇ ಕೇಸ್‌ ದಾಖಲಿಸಿ ಮೊಬೈಲ್ ಹುಡುಕಿಕೊಡುವ ಭರವಸೆ ನೀಡಿದ್ದಾರೆ ಎಂದು ಹೃತಿಕ್ಷಾ ತಂದೆ ನವೀನ್ ಕುಮಾರ್​ ತಿಳಿಸಿದ್ದಾರೆ.

ಕೊವಿಡ್ ಆಸ್ಪತ್ರೆಯಲ್ಲಿ ಮೊಬೈಲ್ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಶಾಲನಗರ ಠಾಣೆಗೆ ಬಾಲಕಿ ತಂದೆ ನವೀನ್‌ಕುಮಾರ್ ದೂರು ನೀಡಿದ್ದು, ಇದೀಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಲ್ಲದೇ ಪೊಲೀಸರು ಮೊಬೈಲ್‌ನ IMEI ನಂಬರ್ ಟ್ರೇಸ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಇನ್ನು ಮೊಬೈಲ್ ಕಳವು ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿರುವ ಮಡಿಕೇರಿ ಕೊವಿಡ್ ಆಸ್ಪತ್ರೆಯ ಪಿಆರ್‌ಒ ಡಾ‌.ಕುಶ್ವಂತ್ ಕೋಳಿಬೈಲ್ ಮೃತಪಟ್ಟವರ ವಸ್ತುಗಳನ್ನ ಪ್ಯಾಕ್ ಮಾಡಿ ಸಂಬಂಧಿಕರಿಗೆ ನೀಡಲಾಗುತ್ತದೆ. ಹಲವು ಸಂಬಂಧಿಕರು ಮೊಬೈಲ್‌ಗಳನ್ನು ಪಡೆದುಕೊಂಡಿಲ್ಲ. ಇನ್ನೂ ಸುಮಾರು 10 ಮೊಬೈಲ್‌ ಆಸ್ಪತ್ರೆಯಲ್ಲೇ ಇವೆ. ಇವುಗಳಲ್ಲಿ ಬಾಲಕಿ ತಾಯಿಯ ಮೊಬೈಲ್ ಇರಬಹುದು. ಒಂದು ವೇಳೆ ಮೊಬೈಲ್ ಇದ್ದರೆ ಹಿಂದಿರುಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

 

ಇದನ್ನೂ ಓದಿ:

ಕೊರೊನಾಕ್ಕೆ ತಾಯಿ ಕಳೆದುಕೊಂಡ ಹುಡುಗಿಯ ಭಾವುಕ ಪತ್ರ: ಅಮ್ಮನ ಮೊಬೈಲ್ ಸಿಕ್ಕರೆ ಹಿಂದಿರುಗಿಸಿ

ಕೊರೊನಾ ಮಾಹಾಮಾರಿಯ ಆರ್ಭಟ: ಇದು ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಕಂಡುಬಂದ ಕರುಳು ಕಿತ್ತು ಬರುವ ದೃಶ್ಯ

Published On - 5:40 pm, Sun, 23 May 21