ಅನಗತ್ಯವಾಗಿ ಸುತ್ತಾಡುವ ಸವಾರರಿಗೆ ವಿಭಿನ್ನ ರೀತಿಯಲ್ಲಿ ಎಚ್ಚರಿಕೆ; ಹಾರ ಹಾಕಿ, ಕುಂಕುಮ ಇಟ್ಟು, ಆರತಿ ಬೆಳಗಿ ಸನ್ಮಾನ
ಅನಗತ್ಯವಾಗಿ ಹೊರಬಂದ ಸವಾರರಿಗೆ ಜಾಗೃತಿ ಮೂಡಿಸಲು ಮತ್ತು ಎಚ್ಚರಿಕೆ ನೀಡಲು ಪೊಲೀಸರು ವಿಭಿನ್ನ ಕ್ರಮ ಕೈಗೊಂಡಿದ್ದಾರೆ. ಕೊರೊನಾ ನಡುವೆಯೂ ಸುಖಾಸುಮ್ಮನೆ ಹೊರಬರುವ ಸವಾರರಿಗೆ ಪೊಲೀಸರು ಸನ್ಮಾನ ಮಾಡಿದ್ದಾರೆ.
ನೆಲಮಂಗಲ: ಕೊರೊನಾ ಎರಡನೇ ಅಲೆ ವೇಗವಾಗಿ ಹರಡಿ, ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಪರಿಣಾಮ ಇನ್ನೂ ಕೂಡ ನಿರೀಕ್ಷೆಯಷ್ಟು ಕಡಿಮೆ ಆಗಿಲ್ಲ. ಸಂಪೂರ್ಣ ಇಳಿಕೆಯತ್ತ ಮುಖಮಾಡಲು ಇನ್ನು ಕೆಲವು ದಿನಗಳು ಬೇಕಾಗಬಹುದು. ಹಾಗಾಗಿ, ಕೊವಿಡ್-19 ಲಾಕ್ಡೌನ್ನ್ನು ವಿಸ್ತರಣೆ ಮಾಡಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಜೂನ್ 7ರ ವರೆಗೆ ಲಾಕ್ಡೌನ್ ವಿಸ್ತರಿಸಿದ್ದಾರೆ.
ಲಾಕ್ಡೌನ್ ನಿರ್ಬಂಧದಂಥ ಕ್ರಮ ಕೈಗೊಂಡರೂ ಕೂಡ ಜನರು ಎಗ್ಗಿಲ್ಲದೆ ರಸ್ತೆಯಲ್ಲಿ ತಿರುಗಾಡುತ್ತಿರುವುದು ಕಂಡುಬರುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಜನರು ನಿರ್ಬಂಧವನ್ನು ಸರಿಯಾಗಿ ಪಾಲಿಸದೇ ಇರುವುದು ದಿನೇದಿನೇ ವರದಿ ಆಗುತ್ತಿದೆ. ಪೊಲೀಸರೊಂದಿಗೆ ಜನ ಕೊರೊನಾ ನಿಯಂತ್ರಣಕ್ಕೆ ಕೈಜೋಡಿಸದೇ ಹೋದರೆ, ಸೋಂಕನ್ನು ಇಲ್ಲವಾಗಿಸುವುದು ಕಷ್ಟವಾಗಲಿದೆ. ಜನರ ಬೇಜವಾಬ್ದಾರಿಯ ಇಂತಹ ಘಟನೆಗೆ ಪೊಲೀಸರು ವಿಭಿನ್ನ ರೀತಿಯಲ್ಲಿ ಜಾಗೃತಿ ಮೂಡಿಸಿದ ಘಟನೆ ನೆಲಮಂಗದಲ್ಲಿ ನಡೆದಿದೆ.
ಅನಗತ್ಯವಾಗಿ ಹೊರಬಂದ ಸವಾರರಿಗೆ ಜಾಗೃತಿ ಮೂಡಿಸಲು ಮತ್ತು ಎಚ್ಚರಿಕೆ ನೀಡಲು ಪೊಲೀಸರು ವಿಭಿನ್ನ ಕ್ರಮ ಕೈಗೊಂಡಿದ್ದಾರೆ. ಕೊರೊನಾ ನಡುವೆಯೂ ಸುಖಾಸುಮ್ಮನೆ ಹೊರಬರುವ ಸವಾರರಿಗೆ ಪೊಲೀಸರು ಸನ್ಮಾನ ಮಾಡಿದ್ದಾರೆ. ಹಾರ ಹಾಕಿ, ಕುಂಕುಮ ಇಟ್ಟು, ಆರತಿ ಬೆಳಗಿ ಸನ್ಮಾನ ಮಾಡಿದ್ದಾರೆ. ವಾಹನ ಸವಾರರಿಗೆ ಸನ್ಮಾನ ಮಾಡಿ ಪೊಲೀಸರು ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ. ಮತ್ತೊಮ್ಮೆ ಹೊರಬಂದರೆ ಕ್ರಮ ಜರುಗಿಸುವ ಎಚ್ಚರಿಕೆ ಹೇಳಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಹೀಗೆ ವಿಭಿನ್ನ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: Covid-19: ಕೊರೊನಾ ಸೋಂಕು ಗಂಭೀರ ಹಂತಕ್ಕೆ ಹೋಗದಂತೆ ತಡೆಯಲು ಈ ಸೂಚನೆಗಳನ್ನು ಪಾಲಿಸಿ
Corona Vaccine: ಕೊರೊನಾ ಲಸಿಕೆಯನ್ನು ಕೈಗೆ ಏಕೆ ನೀಡಲಾಗುತ್ತದೆ? ಸೊಂಟಕ್ಕೆ ಏಕಿಲ್ಲ? ಇಲ್ಲಿದೆ ಸಂಪೂರ್ಣ ವಿವರ
Published On - 5:05 pm, Sun, 23 May 21