AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಸೋಂಕಿತರ ನೆರವಿಗೆ ನಿಂತ ಕುಂದಾಪುರದ ವೈದ್ಯರು; ಕೊವಿಡ್ ವಿರುದ್ಧ ಹೋರಾಡಲು ಸಿದ್ಧರಾದ ಯುವ ಡಾಕ್ಟರ್ಸ್

ಇಡಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಬೆಡ್​ಗಳನ್ನು ಹೊಂದಿರುವ ತಾಲೂಕು ಆಸ್ಪತ್ರೆ ಕುಂದಾಪುರದಲ್ಲಿದ್ದು, ರೋಗಿಗಳ ಶುಶ್ರೂಷೆಗೆ ಸದ್ಯ 4 ಜನ ಯುವ ವೈದ್ಯರ ತಂಡ ಕಣಕ್ಕಿಳಿದಿರುವುದು ಆಸ್ಪತ್ರೆಗೆ ಜೀವ ಕಳೆ ನೀಡಿದೆ. ಈ ಯುವ ವೈದ್ಯರುಗಳಿಗೆ ಹಿರಿಯ ಫಿಸಿಶಿಯನ್ ಡಾ.ನಾಗೇಶ್ ಪುತ್ರನ್ ಮಾರ್ಗದರ್ಶನ ಮಾಡುತ್ತಿದ್ದಾರೆ.

ಕೊರೊನಾ ಸೋಂಕಿತರ ನೆರವಿಗೆ ನಿಂತ ಕುಂದಾಪುರದ ವೈದ್ಯರು; ಕೊವಿಡ್ ವಿರುದ್ಧ ಹೋರಾಡಲು ಸಿದ್ಧರಾದ ಯುವ ಡಾಕ್ಟರ್ಸ್
ಕೊರೊನಾ ಸೋಂಕಿತರ ನೆರವಿಗೆ ನಿಂತ ಕುಂದಾಪುರದ ವೈದ್ಯರು
preethi shettigar
|

Updated on:May 23, 2021 | 4:50 PM

Share

ಉಡುಪಿ: ವೈದ್ಯರು ಎಂದರೆ ಕಣ್ಣಿಗೆ ಕಾಣುವ ದೇವರು ಎನ್ನುವ ಕಾಲ ಇದಾಗಿದ್ದು, ಕೊರೊನಾ ಎರಡನೇ ಅಲೆಯ ಈ ಕಾಲಘಟ್ಟದಲ್ಲಿ ವೈದ್ಯರನ್ನು ಎಷ್ಟು ಸ್ಮರಿಸಿದರು ಕಡಿಮೆ. ಹೀಗಿರುವಾಗಲೇ ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಹೊಸ ಬೆಳಕು ಮೂಡಿದ್ದು, ಸೋಂಕಿತರಲ್ಲಿ ಉತ್ಸಾಹ ತುಂಬುವ ಮತ್ತು ಹೊಸ ಭರವಸೆ ಹುಟ್ಟುಹಾಕುವ ಕಾರ್ಯಕ್ಕೆ ವೈದ್ಯರ ತಂಡ ನಿಂತಿದೆ. ಕೊವಿಡ್ ಕೇರ್ ಆಸ್ಪತ್ರೆಯ ನೆರವಿಗೆ ವೈದ್ಯರ ತಂಡ ನಿಂತಿದ್ದು, ಆ ಮೂಲಕ ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯ ಮಾಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಉನ್ನತ ಮಟ್ಟದ ವ್ಯವಸ್ಥೆ ಇದ್ದರು ಕೂಡ ಕಳೆದ ಬಾರಿ ಹೊಸದಾಗಿ ಪ್ರಪಂಚವನ್ನೇ ಕಾಡಿದ್ದ ಕೊರೋನಾ ವೈರಸ್ ಇಲ್ಲಿನ ವೈದ್ಯರಿಂದ ಹಿಡಿದು ಗ್ರೂಪ್ ಡಿ ನೌಕರ ವರ್ಗದ ವರೆಗೆ ಕಾಡಿತ್ತು. ಲಭ್ಯವಿರುವ ಸಿಬ್ಬಂದಿಗಳನ್ನು ಬಳಸಿಕೊಂಡು ಕಳೆದ ಬಾರಿ ಕುಂದಾಪುರ ತಾಲೂಕು ಕೊವಿಡ್ ಕೇರ್ ಆಸ್ಪತ್ರೆ ಮೊದಲನೇ ಸುತ್ತಿನಲ್ಲಿ ಜಯಗಳಿಸಿತ್ತು. ಸದ್ಯ ಬಂದಿರುವ ಕೊರೋನಾ ಎರಡನೇಯ ಅಲೆ ಬಲು ಭೀಕರವಾಗಿರುವ ಹಿನ್ನಲೆಯಲ್ಲಿ ಕುಂದಾಪುರ ಸರಕಾರಿ ತಾಲೂಕು ಆಸ್ಪತ್ರೆ ಸರ್ವ ಸನ್ನದ್ಧವಾಗಿದೆ.

ಇಡಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಬೆಡ್​ಗಳನ್ನು ಹೊಂದಿರುವ ತಾಲೂಕು ಆಸ್ಪತ್ರೆ ಕುಂದಾಪುರದಲ್ಲಿದ್ದು, ರೋಗಿಗಳ ಶುಶ್ರೂಷೆಗೆ ಸದ್ಯ 4 ಜನ ಯುವ ವೈದ್ಯರ ತಂಡ ಕಣಕ್ಕಿಳಿದಿರುವುದು ಆಸ್ಪತ್ರೆಗೆ ಜೀವ ಕಳೆ ನೀಡಿದೆ. ಈ ಯುವ ವೈದ್ಯರುಗಳಿಗೆ ಹಿರಿಯ ಫಿಸಿಶಿಯನ್ ಡಾ.ನಾಗೇಶ್ ಪುತ್ರನ್ ಮಾರ್ಗದರ್ಶನ ಮಾಡುತ್ತಿದ್ದಾರೆ.

ಸ್ಥಳೀಯ ಯುವ ವೈದ್ಯರಾದ ಡಾ. ಆಶಿತ್ ಶೆಟ್ಟಿ, ಡಾ.ರಜತ್ ಶೆಟ್ಟಿ, ಡಾ.ರಚನಾ ಶೆಟ್ಟಿ ಮತ್ತು ಡಾ. ನಿವೇದಿತಾ ಸದ್ಯ ಕುಂದಾಪುರ ಕೊವಿಡ್ ಕೇರ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂಬೈಯಲ್ಲಿದ್ದ ಡಾ.ರಚನಾ‌ ಶೆಟ್ಟಿ ತಮ್ಮ ತಂದೆಯ ನಿಧನದ ಹಿನ್ನಲೆಯಲ್ಲಿ ಊರಿಗೆ ಬಂದಿದ್ದರು. ನೋವಿನಲ್ಲಿಯು ಕೊವಿಡ್ ಕೇರ್​ ಸೆಂಟರ್​ನಲ್ಲಿ ಇನ್ನೋಬ್ಬರ ನೋವು ಒರೆಸುವ ಕಾರ್ಯದಲ್ಲಿದ್ದಾರೆ. ಸಹೋದರರಾದ ಡಾ.ಆಶಿತ್ ಮತ್ತು ಡಾ.ರಜತ್ ಶೆಟ್ಟಿ ಅವರಿಗೆ ಮುಂಬೈನಲ್ಲಿ ಸ್ವಂತದ ಖಾಸಗಿ ಆಸ್ಪತ್ರೆ ಇದ್ದರು ಕೂಡ ಊರಿನವರ ಕಷ್ಟದ ಸಂದರ್ಭದಲ್ಲಿ ನೆರವು ನೀಡುವ ಸಲುವಾಗಿ ಕೊವಿಡ್ ಕೇರ್​ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಉಳಿದಂತೆ ಡಾ. ನಿವೇದಿತಾ ಕೂಡ ಸರಕಾರಿ ಕೊವಿಡ್ ಕೇರ್ ಸೆಂಟರ್​ಗೆ ಬಲ‌ ನೀಡುವ ನಿಟ್ಟಿನಲ್ಲಿ ಆಸ್ಪತ್ರೆಗೆ ಸಾಥ್ ನೀಡುತ್ತಿದ್ದಾರೆ. ದೇಶವೇ ಸಂಕಷ್ಟದಲ್ಲಿದೇ ಈ ಸಂದರ್ಭದಲ್ಲಿ ವೈದ್ಯರ ಅಗತ್ಯತೆ ಇದೆ, ಯಾವುದೇ ಭಯ ಬೇಡ ಮುಂದೆ ಬಂದು ಕೊವಿಡ್ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿ ಎಂದು ವೈದ್ಯರಾದ ಡಾ. ಆಶಿತ್ ಶೆಟ್ಟಿ ಹೇಳಿದ್ದಾರೆ.

ಒಟ್ಟಾರೆಯಾಗಿ ಈ ಯುವ ವೈದ್ಯರ ಪಡೆ ರೋಗಿಗಳಿಗೆ ಹುರಿದುಂಬಿಸುವ ಜೊತೆಗೆ ಕೊವಿಡ್ ಗೆಲ್ಲಲು ಚಿಕಿತ್ಸೆ ನೀಡುತ್ತಿದ್ದಾರೆ. ಯುವ ವೈದ್ಯರ ಈ ಕಾರ್ಯದ ಕುರಿತು ಸಾರ್ವಜನಿಕ ವಲಯದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಯುವ ವೈದ್ಯರ ಸೇವೆ ಇನ್ನುಳಿದ ಯುವಕರಿಗೆ ಪ್ರೇರಣೆಯಾಗಲಿ ಎನ್ನುವುದೆ ನಮ್ಮ ಆಶಯ.

ಇದನ್ನೂ ಓದಿ:

Covid-19: ಕೊರೊನಾ ಸೋಂಕು ಗಂಭೀರ ಹಂತಕ್ಕೆ ಹೋಗದಂತೆ ತಡೆಯಲು ಈ ಸೂಚನೆಗಳನ್ನು ಪಾಲಿಸಿ

ಕೊರೊನಾ ಸೋಂಕಿತರಿಗೆ ಮನೋಸ್ಥೈರ್ಯ ತುಂಬುವ ಪಾಠ; ಕಲಬುರಗಿ ಜಿಲ್ಲಾಡಳಿತಕ್ಕೆ ಸಾಥ್ ನೀಡಿದ ಶಿಕ್ಷಕರು

Published On - 4:36 pm, Sun, 23 May 21