Covid-19: ಕೊರೊನಾ ಸೋಂಕು ಗಂಭೀರ ಹಂತಕ್ಕೆ ಹೋಗದಂತೆ ತಡೆಯಲು ಈ ಸೂಚನೆಗಳನ್ನು ಪಾಲಿಸಿ

ಕೊವಿಡ್-19 ಸೋಂಕು ಉಲ್ಬಣಗೊಳ್ಳಲು ಅಥವಾ ಕೊನೆಯ ಕ್ಷಣದಲ್ಲಿ ಸಮಸ್ಯೆಗೆ ಒಳಗಾಗಲು ಜನರು ಮಾಡುವ ತಪ್ಪುಗಳು ಕೂಡ ಕಾರಣವಾಗಿದೆ. ಅವುಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

Covid-19: ಕೊರೊನಾ ಸೋಂಕು ಗಂಭೀರ ಹಂತಕ್ಕೆ ಹೋಗದಂತೆ ತಡೆಯಲು ಈ ಸೂಚನೆಗಳನ್ನು ಪಾಲಿಸಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Aug 21, 2021 | 10:03 AM

ಕೊರೊನಾ ಸೋಂಕು ಪ್ರಕರಣಗಳು ಭಾರತದಲ್ಲಿ ಬಹಳ ಸಂಕಷ್ಟ ಸೃಷ್ಟಿಮಾಡಿತ್ತು. ಒಂದನೇ ಅಲೆಯ ಬಳಿಕ ಕೊರೊನಾ ಎರಡನೇ ಅಲೆ ಊಹಿಸಲೂ ಆಗಿರದಂಥ ಸಮಸ್ಯೆ ತಂದೊಡ್ಡಿತ್ತು. ಕೊವಿಡ್ ಸಮಸ್ಯೆ ಇನ್ನೇನು ಮುಗಿದೇ ಬಿಟ್ಟಿತು ಎಂದು ಜನರು ಅಂದುಕೊಳ್ಳುತ್ತಿರುವಾಗ ಎರಡನೇ ಅಲೆ ಬಹುದೊಡ್ಡ ಸವಾಲಾಗಿ ಪರಿಣಮಿಸಿತು. ಕೊರೊನಾ ಸೋಂಕಿನ ಎರಡನೇ ಅಲೆಯು ಈಗ ದೇಶದಲ್ಲಿ ಇಳಿಕೆಯ ಹಂತದಲ್ಲಿದೆ. ಏರಿಕೆಯಾಗಿದ್ದ ಸೋಂಕು ಇಳಿಕೆಯತ್ತ ಮುಖಮಾಡಿದೆ. ಆದರೆ, ದಕ್ಷಿಣದ ರಾಜ್ಯಗಳಲ್ಲಿ, ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು ಇನ್ನೂ ಕೂಡ ಖಚಿತವಾಗಿ ಇಳಿಕೆಯತ್ತ ಮುಖಮಾಡಿಲ್ಲ. ಹಾಗಾಗಿ ಜನರು ಕೊರೊನಾ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದೆ.

ಇಲ್ಲಿ ಕೊರೊನಾ ಸೋಂಕಿನ ಬಗ್ಗೆ ಜನರು ಮಾಡಬಹುದಾದ ಕೆಲವು ಮುಖ್ಯ ತಪ್ಪುಗಳು ಇಲ್ಲಿದೆ. ಕೊವಿಡ್-19 ಸೋಂಕು ಉಲ್ಬಣಗೊಳ್ಳಲು ಅಥವಾ ಕೊನೆಯ ಕ್ಷಣದಲ್ಲಿ ಸಮಸ್ಯೆಗೆ ಒಳಗಾಗಲು ಜನರು ಮಾಡುವ ತಪ್ಪುಗಳು ಕೂಡ ಕಾರಣವಾಗಿದೆ. ಅವುಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಸಣ್ಣ ಲಕ್ಷಣಗಳನ್ನು ಕಡೆಗಣಿಸಬೇಡಿ ಕೊರೊನಾ ಸೋಂಕು ಸಣ್ಣ ಗುಣಲಕ್ಷಣಗಳಿಂದಲೇ ಆರಂಭವಾಗುತ್ತದೆ. ಈಗ ಕಂಡುಬಂದಿರುವ ಕೊವಿಡ್-19 ರೂಪಾಂತರಿ ವೈರಾಣು ಸಣ್ಣ ಗುಣಲಕ್ಷಣಗಳಿಂದ ನಂತರ ಗಂಭೀರ ಪರಿಣಾಮವನ್ನೂ ತಂದೊಡ್ಡಬಲ್ಲದು. ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿಯೂ ನಿರ್ಮಾಣವಾಗಬಹುದು. ಆದರೆ, ನಾವು ಆರಂಭಿಕ ಹಂತದಲ್ಲೇ ಕೊರೊನಾ ವಿರುದ್ಧ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಗಂಭೀರ ಸಮಸ್ಯೆಗಳನ್ನು ಮೊದಲೇ ತಡೆಗಟ್ಟಬಹುದು. ಕೊರೊನಾ ತಗುಲಿದ ಮೊದಲ ದಿನದಿಂದಲೇ ನಿಗಾ ವಹಿಸಿದರೆ ಸೋಂಕಿನಿಂದ ಪಾರಾಗಬಹುದು. ತಾಪಮಾನ, ಆಕ್ಸಿಜನ್ ಲೆವೆಲ್​ನಂತಹ ವಿವರಗಳನ್ನು ಗಮನಿಸುವುದು ಒಳ್ಳೆಯದು.

ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ ಕೊವಿಡ್-19 ಸೋಂಕಿನ ಬಗ್ಗೆ ನಿರ್ಲಕ್ಷ್ಯವಹಿಸುವುದು ಒಳ್ಳೆಯದಲ್ಲ. ಅಥವಾ ಕೊರೊನಾ ಬಗ್ಗೆ ಅವಗಣನೆ ಮಾಡುವುದು, ಕೊರೊನಾ ಇಲ್ಲ, ಕೊರೊನಾವೇ ಬಂದಿಲ್ಲ ಎಂಬ ವಾದ ಮುಂದೊಡ್ಡುವುದು ಒಳ್ಳೆಯದಲ್ಲ. ಸಣ್ಣ ಲಕ್ಷಣಗಳನ್ನು ಹೇಳಿ ತಪ್ಪಿಸಿಕೊಳ್ಳುವುದು ಸರಿಯಲ್ಲ. ಹಾಗೆ ಕಡೆಗಣಿಸಿದರೆ ಮುಂದೆ ಕೊವಿಡ್ ಸೋಂಕು ನಿಯಂತ್ರಣ ಮೀರುವಂತೆ ಆಗಬಹುದು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳಿ.

ಸ್ಟಿರಾಯ್ಡ್ ಚಿಕಿತ್ಸೆಯನ್ನು ಬೇಗ ಆರಂಭಿಸುವುದು ಒಳಿತಲ್ಲ ಕೊರೊನಾ ಸೋಂಕು ಚಿಕಿತ್ಸೆಗೆ, ಸೋಂಕು ಗಂಭೀರವಾಗಿದ್ದರೆ ಈಗ ಸ್ಟಿರಾಯ್ಡ್ ಔಷಧವನ್ನು ನೀಡಲಾಗುತ್ತಿದೆ. ಆರಂಭಿಕ ಹಂತದಲ್ಲಿ ಅಥವಾ ಸಣ್ಣ ಲಕ್ಷಣಗಳಿರುವ ರೋಗಿಗಳಿಗೆ ಸ್ಟಿರಾಯ್ಡ್ ನೀಡಬಾರದು. ಹೀಗಾಗಿ, ವೈದ್ಯರ ಸೂಚನೆ ಇಲ್ಲದೆ, ಆರಂಭಿಕ ಹಂತದಲ್ಲೇ ಸ್ಟಿರಾಯ್ಡ್ ಪಡೆದುಕೊಳ್ಳುವುದು ಕೆಲವು ಅಡ್ಡಪರಿಣಾಮಗಳಿಗೆ, ಸೋಂಕು ಉಲ್ಬಣಗೊಳ್ಳಲು ಕಾರಣವಾಗಬಹುದು. ಹಾಗಾಗಿ, ವೈದ್ಯರ ಸೂಚನೆ ಇಲ್ಲದೆ, ಗಂಭೀರ ಲಕ್ಷಣಗಳಿಲ್ಲದೆ ಸ್ಟಿರಾಯ್ಡ್ ಔಷಧ ಪಡೆಯುವುದು ಒಳ್ಳೆಯದಲ್ಲ.

ಕೊರೊನಾ ಪರೀಕ್ಷೆ ಮಾಡಿಸಲು ತಡಮಾಡಬೇಡಿ ಕೊರೊನಾ ಸೋಂಕು ಸಾಮಾನ್ಯ ಜ್ವರ ಅಥವಾ ಶೀತದ ಲಕ್ಷಣವನ್ನೇ ಹೊಂದಿರುವುದರಿಂದ ಬಹಳಷ್ಟು ಮಂದಿ ಕೊರೊನಾ ಪರೀಕ್ಷೆ ನಡೆಸಲು ಹಿಂದೆಮುಂದೆ ಆಲೋಚಿಸುತ್ತಾರೆ. ತಡಮಾಡುತ್ತಾರೆ. ಹೀಗೆ ಮಾಡುವುದು ಕೂಡ ಸಮಸ್ಯೆ ಉಂಟುಮಾಡಬಹುದು. ಜ್ವರ ಇದ್ದಾಗಿಯೂ ಹೊರಗಡೆ ತಿರುಗಾಡಲು ಹೋಗುವುದು ಇತರರಿಗೆ ತೊಂದರೆ ಆಗಬಹುದು. ಹಾಗಾಗಿ, ಲಕ್ಷಣ ಕಂಡುಬಂದ ಕೂಡಲೇ ಕೊವಿಡ್-19 ಪರೀಕ್ಷೆ ಮಾಡಿಸಿಕೊಳ್ಳುವುದು ಮತ್ತು ಹೋಮ್ ಐಸೋಲೇಷನ್​ಗೆ ಒಳಗಾಗುವುದು ಒಳ್ಳೆಯದು.

ಇದನ್ನೂ ಓದಿ: Corona Vaccine: ಕೊರೊನಾ ಲಸಿಕೆಯನ್ನು ಕೈಗೆ ಏಕೆ ನೀಡಲಾಗುತ್ತದೆ? ಸೊಂಟಕ್ಕೆ ಏಕಿಲ್ಲ? ಇಲ್ಲಿದೆ ಸಂಪೂರ್ಣ ವಿವರ

18-44 Vaccination in Karnataka: ಮೇ 22ರಿಂದಲೇ 18 ರಿಂದ 44 ವರ್ಷದವರಿಗೆ ಕೊವಿಡ್ ಲಸಿಕೆ; ಕೊವಿಡ್ ಸೇನಾನಿಗಳಿಗೆ ಮೊದಲ ಆದ್ಯತೆ

Published On - 3:45 pm, Sun, 23 May 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ