ದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (NGMA) ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜನಶಕ್ತಿ ಕಲಾಕೃತಿಗಳನ್ನು ಪ್ರದರ್ಶಿಸಿದ (Janashakthi Artwork Exhibition) ಕೆಲವು ಕಲಾವಿದರನ್ನು ಭೇಟಿಯಾಗಿದ್ದರು. ಅವರಲ್ಲಿ ಕರ್ನಾಟಕದ ಜಿಆರ್ ಈರಣ್ಣ ಕೂಡ ಒಬ್ಬರು. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಈರಣ್ಣ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ನಾನು ಅದೃಷ್ಟ ಮಾಡಿದ್ದೇನೆ ಎಂದಿದ್ದಾರೆ.
ಒಬ್ಬ ಕಲಾವಿದನಿಗೆ ಪ್ರಧಾನಿಯನ್ನು ಖುದ್ದಾಗಿ ಭೇಟಿಯಾಗುವುದು ತುಂಬಾ ವಿಶೇಷದ ಸಂದರ್ಭವಾಗಿದೆ. ಕಲಾವಿದರ ಆಲೋಚನೆಗಳು ಮತ್ತು ಕಲಾವಿದರ ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳಲು ಮೋದಿ ಪ್ರಯತ್ನಿಸುತ್ತಿದ್ದಾರೆ. ನಾನು ಏನು ಮಾಡುತ್ತಿದ್ದೇನೆ ಎಂಬುದರ ಬಗ್ಗೆ ಅವರು ತುಂಬಾ ತಿಳಿದಿದ್ದರು ಮತ್ತು ಬಹಳ ಪ್ರಸ್ತುತವಾದ ಪ್ರಶ್ನೆಗಳನ್ನು ಕೇಳಿದರು ಎಂದು ಈರಣ್ಣ ಹೇಳಿದರು.
Here are some more glimpses from Jana Shakti exhibition at @ngma_delhi. pic.twitter.com/Cz9WmOuLK0
— Narendra Modi (@narendramodi) May 14, 2023
ಕರ್ನಾಟಕದ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ 1970 ರಲ್ಲಿ ಜನಿಸಿದ ಈರಣ್ಣ ಅವರು ಕರ್ನಾಟಕದ ಕಲಬುರಗಿ ಜಿಲ್ಲೆಯವರು. ಸದ್ಯ ಇವರು ತಮ್ಮ ಪತ್ನಿ ಪೂಜಾರೊಂದಿಗೆ ದೆಹಲಿಯಲ್ಲಿ ನೆಲೆಸಿದ್ದಾರೆ. ಈರಣ್ಣ ಅವರು ಲಂಡನ್‌ನ ವಿಂಬಲ್ಡನ್ ಸ್ಕೂಲ್ ಆಫ್ ಆರ್ಟ್ ವಿಭಾಗದಲ್ಲಿ ಪದವೀಧರರಾಗಿದ್ದಾರೆ. ಇವರು ತಮ್ಮ ಕಲಾಕೃತಿಗಳನ್ನು ನ್ಯೂಯಾರ್ಕ್, ಕ್ಯಾಲಿಫೋರ್ನಿಯಾ, ಲಂಡನ್, ಮ್ಯೂನಿಚ್ ಮತ್ತು ಭಾರತದ ನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ವಿವಿಧ ಪ್ರದರ್ಶನಗಳಲ್ಲಿ ಪ್ರದರ್ಶಿಸಿದ್ದಾರೆ.
ಇದನ್ನೂ ಓದಿ: ಮನ್ ಕಿ ಬಾತ್ ವಿಷಯಗಳನ್ನು ಆಧರಿಸಿದ ‘ಜನಶಕ್ತಿ’ ಕಲಾಕೃತಿ ಪ್ರದರ್ಶನ ವೀಕ್ಷಿಸಿದ ಪ್ರಧಾನಿ ಮೋದಿ
Visited Jana Shakti at @ngma_delhi. This is an exhibition of wonderful works of art based on some of the themes in the #MannKiBaat episodes. I compliment all the artists who have enriched the exhibition with their creativity. pic.twitter.com/HOrLDDzM2r
— Narendra Modi (@narendramodi) May 14, 2023
ಈರಣ್ಣ ಅವರು ವರ್ಣಚಿತ್ರಗಳು ಮತ್ತು ಶಿಲ್ಪಕಲೆಗಳಿಗೆ ಪ್ರಸಿದ್ಧರಾಗಿದ್ದಾರೆ. ಅದರ ಮೂಲಕ ಅವರು ಸಾಮಾಜಿಕ-ರಾಜಕೀಯ ಮತ್ತು ಸಾಂಸ್ಕೃತಿಕ ಸಮಸ್ಯೆಗಳನ್ನು ವಿವಿಧ ಸಮಸ್ಯೆಗಳನ್ನು ಚಿತ್ರಿಸುತ್ತಾರೆ. ಇದರಲ್ಲಿ ನೀರಿನ ಸಂರಕ್ಷಣೆ, ಕೃಷಿ, ಯೋಗ ಮತ್ತು ಆಯುರ್ವೇದದಂತಹ ವಿಷಯಗಳು ಒಳಗೊಂಡಿವೆ. ಈ ಬಗ್ಗೆ ನರೇಂದ್ರ ಮೋದಿಯವರು ಮನ್ ಕಿ ಬಾತ್‌ನಲ್ಲಿ ಪ್ರಸ್ತಾಪಿಸಿದ್ದರು.
ಕಲಾವಿದೆ ಮಾಧವಿ ಪಾರೇಖ್, ಅತುಲ್ ದೋಡಿಯಾ, ಪದ್ಮಶ್ರೀ ಪುರಸ್ಕೃತ ಪರೇಶ್ ಮೈತಿ, ಸಮಕಾಲೀನ ಕಲಾವಿದ ಈರಣ್ಣ ಜಿಆರ್ ಮತ್ತು ಜಗನ್ನಾಥ ಪಾಂಡಾ ಸೇರಿದಂತೆ ಹಲವಾರು ಕಲಾವಿದರ ಕಲಾಕೃತಿಗಳನ್ನು ಪ್ರದರ್ಶನ ಮಾಡಲಾಯಿತು. ಪ್ರದರ್ಶನವನ್ನು ತಮ್ಮ ಸೃಜನಶೀಲತೆಯಿಂದ ಶ್ರೀಮಂತಗೊಳಿಸಿದ ಎಲ್ಲಾ ಕಲಾವಿದರನ್ನು ಮೋದಿಯವರು ಅಭಿನಂದಿಸಿದ್ದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ