Karnataka CM Swearing In Ceremony: ಯಾರಾಗ್ತಾರೆ ಕರ್ನಾಟಕ ಸಿಎಂ: ಮೇ 18ಕ್ಕೆ ಪ್ರಮಾಣ ವಚನ, ಸ್ಥಳ, ಸಮಯ ಇತ್ಯಾದಿ ವಿವರ ಇಲ್ಲಿದೆ?
Karnataka CM Oath Taking Date: ಕರ್ನಾಟಕದಲ್ಲಿ ಬಹುಮತ ಗಳಿಸಿರುವ ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಎಂಬುದರ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಆದರೆ ಗುರುವಾರ ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election) ಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಒಟ್ಟು 135 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿರುವ ಕಾಂಗ್ರೆಸ್‌ಗೆ ಸದ್ಯ ಸಿಎಂ ಯಾರನ್ನ ಮಾಡಬೇಕು ಎಂಬ ತಲೆಬಿಸಿ ಆಗಿದೆ. ಇದೆಲ್ಲದರ ಮಧ್ಯೆ ಗುರುವಾರ (ಮೇ 18) ಪ್ರಮಾಣ ವಚನ ಸಮಾರಂಭ (oath ceremony) ನಡೆಯಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಒಂದೆಡೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮತ್ತೊಂದೆಡೆ ಸಿದ್ದರಾಮಯ್ಯ ಅವರು ಸಿಎಂ ಹುದ್ದೆಯ ರೇಸ್ನಲ್ಲಿದ್ದಾರೆ. ಸಿಎಂ ಆಯ್ಕೆಗಾಗಿ ಎಐಸಿಸಿ ,ಮೂವರು ವೀಕ್ಷಕರನ್ನು ಸಹ ನೇಮಿಸಲಾಗಿದೆ.
ಪ್ರಮಾಣ ವಚನ ಸಮಾರಂಭ ಎಲ್ಲಿ ಮತ್ತು ಯಾವಾಗ?
ಕಳೆದ ಬಾರಿ ಸಿದ್ಧರಾಮಯ್ಯ ಅವರು ಸಿಎಂ ಆಗಿ ಪ್ರಮಾಣ ವಚನವನ್ನು ಕಂಠೀರವ ಸ್ಟೇಡಿಯಂನಲ್ಲಿ ಅಪಾರ ಜನಸ್ತೋಮ ಮತ್ತು ತಮ್ಮ ಕಟ್ಟಾ ಅಭಿಮಾನಿಗಳ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಬಾರಿ ಕಾಂಗ್ರೆಸ್ ಪಕ್ಷವು 135 ಸ್ಥಾನಗಳನ್ನು ಹೊಂದುವ ಮೂಲಕ ಅಪಾರ ಜನ ಬೆಂಬಲ ಗಳಿಸಿದೆ. ಈ ಹಿನ್ನೆಲೆ ಪಕ್ಷದ ನಾಯಕರು ಹುಮ್ಮಸ್ಸಿನಲ್ಲಿದ್ದಾರೆ. ಜೊತೆಗೆ ಅಭಿಮಾನಿಗಳು ಸಹ ಹರ್ಷಗೊಂಡಿದ್ದು, ಹಾಗಾಗಿ ಈ ಬಾರಿ ಪ್ರಮಾಣ ವಚನ ಸ್ವೀಕಾರ ಸಮಾರಂಭ, ರಾಜ್ಯಭವನದಲ್ಲಾಗಲಿ, ವಿಧಾನಸೌಧ ಎದುರಾಗಲಿ ನಡೆಯುವುದು ಸದ್ಯವಾಗದಿರಬಹುದು. ಬಾರಿ ಸಂಖ್ಯೆಯ ಪ್ರಮಾಣ ವಚನ ಸ್ವೀಕರಿಸಿಬೇಕೇಂಬ ಉಮ್ಮೇದಿಗೆ ಬಿದ್ದರೆ ಮತ್ತೆ ಅದು ಕಂಠೀರವ ಸ್ಟೇಡಿಯಂ ಅಂಗಗಳವೇ ಆಗಬಹುದು. ಅಥವಾ ಬೇರೆ ಸ್ಥಳದಲ್ಲಿಯೂ ಆಗಬಹುದು. ಪ್ರಮಾಣ ವಚನ ಸಮಾರಂಭದ ಸಮಯ ನಿಗದಿ ಆಗಿಲ್ಲ.
ಪಕ್ಷವು ಭಾರಿ ಬಹುಮತ ಪಡೆಯಲು ತಮ್ಮ ಕೊಡುಗೆಯನ್ನು ಮುಂದಿಟ್ಟುಕೊಂಡು ಉಭಯ ನಾಯಕರು ತಾವೇ ಸಿಎಂ ಆಗಬೇಕು ಎಂಬ ಹಟಕ್ಕೆ ಬಿದ್ದಿದ್ದಾರೆ. ಹೀಗಾಗಿ ಇದು ನಾಡಿನ ಮುಂದಿನ ದೊರೆಯ ಆಯ್ಕೆಯನ್ನು ಕಗ್ಗಂಟು ಮಾಡಿದೆ. ಈ ಹಿನ್ನೆಲೆ ಶಾಂಗ್ರಿಲಾ ಹೋಟೆಲ್ನಲ್ಲಿ ಭಾನುವಾರ ಸಂಜೆ ಶಾಸಕಾಂಗ ಸಭೆ ಕೂಡ ಕರೆಯಲಾಗಿತ್ತು. ತಡರಾತ್ರಿವರೆಗೂ ಸಭೆ ನಡೆದಿದ್ದು, ಶಾಸಕರ ಅಭಿಪ್ರಾಯ ಸಂಗ್ರಹಿಸಲಾಗಿದೆ.
ಸಿಎಂ ಆಯ್ಕೆ ಎಐಸಿಸಿ ಅಧ್ಯಕ್ಷರ ನಿರ್ಧಾರಕ್ಕೆ
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಆಯ್ಕೆಯನ್ನು ಎಐಸಿಸಿ (AICC) ಅಧ್ಯಕ್ಷರ ನಿರ್ಧಾರಕ್ಕೆ ಬಿಡಲು ಶಾಸಕಾಂಗ ಪಕ್ಷವು ಸರ್ವಾನುಮತದಿಂದ ನಿನ್ನೆ ಸಭೆಯಲ್ಲಿ ನಿರ್ಧರಿಸಲಾಗಿದೆ. ಇಷ್ಟು ದಿನ ಒಗ್ಗಟ್ಟಿನಿಂದ ಕೆಲಸ ಮಾಡಿಕೊಂಡು ಬಂದಿದ್ದೇವೆ. ಈಗ ಅಧಿಕಾರಕ್ಕಾಗಿ ಗೊಂದಲ ಮಾಡಿಕೊಳ್ಳುವುದು ಬೇಡ. ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹಿಸೋಣ. ಉಳಿದಿದ್ದನ್ನು ಹೈಕಮಾಂಡ್ಗೆ ಬಿಡೋಣ ಎಂದು ವೀಕ್ಷಕರು ಹೇಳಿದ್ದರು.
ಇದನ್ನೂ ಓದಿ: ಸಿಎಂ ಕುರ್ಚಿ ಫೈಟ್: ತಡರಾತ್ರಿ ವರೆಗೂ ನಡೆದ ಶಾಸಕಾಂಗ ಸಭೆಯಲ್ಲಿ ಅಂತಿಮವಾಗಿ ಏನು ತೀರ್ಮಾನವಾಯ್ತು? ಇಲ್ಲಿದೆ ವಿವರ
ಡಿಕೆ ಶಿವಕುಮಾರ್ ಪಟ್ಟು ಏನು?
ಈ ಬಾರಿ ಇಡೀ ಒಕ್ಕಲಿಗ ಸಮುದಾಯ ನನ್ನ ಬೆನ್ನಿಗೆ ನಿಂತಿದೆ ಅನ್ನೋದು ಡಿ.ಕೆ ಶಿವಕುಮಾರ್ ಅವರ ವಾದವಾಗಿದೆ. ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನಗಳು ಬಂದಿವೆ.. ಶೇಕಡಾ 5ರಷ್ಟು ಒಕ್ಕಲಿಗರ ಹೆಚ್ಚುವರಿ ವೋಟು ಕಾಂಗ್ರೆಸ್‌ಗೆ ಬಂದಿದೆ. ಒಕ್ಕಲಿಗರು ಸಿಎಂ ಆಗುವ ಅವಕಾಶ ಇರುವುದಕ್ಕೆ ಹೆಚ್ಚುವರಿ ಮತ ಬಂದಿದೆ. ಹೀಗಾಗಿ ನನಗೇ ಸಿಎಂ ಸ್ಥಾನ ಕೊಡಬೇಕು ಎಂದು ಡಿಕೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒತ್ತಾಯಿಸಿದ್ದಾರೆ.
ಸಿದ್ಧರಾಮಯ್ಯ ವಾದವೇನು?
ಸಿದ್ದರಾಮಯ್ಯ ಮೊದಲು ಶಾಸಕರ ಅಭಿಪ್ರಾಯ ಸಂಗ್ರಹವಾಗಲಿ. ಶಾಸಕರು ಯಾರ ಪರ ನಿಲ್ಲುತ್ತಾರೋ ಅವರಿಗೆ ಸಿಎಂ ಸ್ಥಾನ ನೀಡಬೇಕು. ಹೈಕಮಾಂಡ್ ತೀರ್ಮಾನಕ್ಕೆ ಬಂದಲು ಶಾಸಕರು ತೀರ್ಮಾನಿಸಲು ಅನ್ನೋದು ಸಿದ್ದು ವಾದ. ಸಿದ್ದರಾಮಯ್ಯ ಈ ಹಿಂದೆ ಕೂಡ ಮುಂದಿನ ಮುಖ್ಯಮಂತ್ರಿಯನ್ನು ಪಕ್ಷದ ಶಾಸಕರು ಮತ್ತು ಹೈಕಮಾಂಡ್ ತೀರ್ಮಾನಿಸುತ್ತಾರೆ ಎಂದಿದ್ರು. ಇದೀಗ ಡಿಕೆ ಕೂಡ ಮುಂದಿನ ಸಿಎಂ ಯಾರು ಅನ್ನೋದನ್ನು ಶಾಸಕಾಂಗ ಪಕ್ಷದ ಸಭೆ ಮತ್ತು ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ.
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:27 pm, Mon, 15 May 23