ಅಸೆಂಬ್ಲಿ ಉಪಚುನಾವಣೆಗೆ JDS ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ HK ಕುಮಾರಸ್ವಾಮಿ

|

Updated on: Nov 14, 2019 | 2:50 PM

ಬೆಂಗಳೂರು: ಹದಿನೈದು ಶಾಸಕರ ಅನರ್ಹತೆಯಿಂದಾಗಿ ಡಿಸೆಂಬರ್ 5ರಂದು ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ JDS ರಾಜ್ಯಾಧ್ಯಕ್ಷ H K ಕುಮಾರಸ್ವಾಮಿ ಪಟ್ಟಿ ಬಿಡುಗಡೆ ಮಾಡಿದರು. 15 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಪಟ್ಟಿ ಹೀಗಿದೆ: ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ-ದೇವರಾಜು ಯಶವಂತಪುರ ವಿಧಾನಸಭಾ ಕ್ಷೇತ್ರ-ಜವರಾಯಿಗೌಡ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ-ಮಲ್ಲಿಕಾರ್ಜುನ ಹಲಗೇರಿ ಯಲ್ಲಾಪುರ […]

ಅಸೆಂಬ್ಲಿ ಉಪಚುನಾವಣೆಗೆ JDS ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ HK ಕುಮಾರಸ್ವಾಮಿ
Follow us on

ಬೆಂಗಳೂರು: ಹದಿನೈದು ಶಾಸಕರ ಅನರ್ಹತೆಯಿಂದಾಗಿ ಡಿಸೆಂಬರ್ 5ರಂದು ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ JDS ರಾಜ್ಯಾಧ್ಯಕ್ಷ H K ಕುಮಾರಸ್ವಾಮಿ ಪಟ್ಟಿ ಬಿಡುಗಡೆ ಮಾಡಿದರು.

15 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಪಟ್ಟಿ ಹೀಗಿದೆ:

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ-ದೇವರಾಜು
ಯಶವಂತಪುರ ವಿಧಾನಸಭಾ ಕ್ಷೇತ್ರ-ಜವರಾಯಿಗೌಡ
ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ-ಮಲ್ಲಿಕಾರ್ಜುನ ಹಲಗೇರಿ
ಯಲ್ಲಾಪುರ ವಿಧಾನಸಭಾ ಕ್ಷೇತ್ರ-ಚೈತ್ರಾಗೌಡ
ಹಿರೇಕೆರೂರು ವಿಧಾನಸಭಾ ಕ್ಷೇತ್ರ-ಆಂಜನಪ್ಪ ಜಟ್ಟೆಪ್ಪ
ವಿಜಯನಗರ ವಿಧಾನಸಭಾ ಕ್ಷೇತ್ರ-ಎನ್.ಎಂ.ನಬಿ
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ-ಕೆಪಿ‌ ಬಚ್ಚೇಗೌಡ
ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ-ಕೃಷ್ಣಮೂರ್ತಿ
ಹುಣಸೂರು ವಿಧಾನಸಭಾ ಕ್ಷೇತ್ರ-ಸಿ. ಸೋಮಶೇಖರ್
ಶಿವಾಜಿನಗರ ವಿಧಾನಸಭಾ ಕ್ಷೇತ್ರ-ತನ್ವೀರ್ ಅಹ್ಮದ್

ಸುಪ್ರೀಂ ತೀರ್ಪಿನ ಬಳಿಕ ಎಚ್ಡಿ ದೇವೇಗೌಡರು ನಿನ್ನೆ ನೀಡಿರುವ ಹೇಳಿಕೆ‌ ಬಗ್ಗೆ ಸಾಕಷ್ಟು ಚರ್ಚೆ ನಡೀತಿದೆ. ಯಡಿಯೂರಪ್ಪ ಅವರಿಗೆ ಸಿಎಂ ಮತ್ತು ಸಿದ್ದರಾಮಯ್ಯ ಅವರಿಗೆ ವಿಪಕ್ಷ ನಾಯಕ ಸ್ಥಾನ ಮೂರೂವರೆ ವರ್ಷ ಅಬಾಧಿತ ಎಂದಿರುವುದಕ್ಕೆ ಬೇರೆ ಅರ್ಥ ಬೇಡ. ಅದು ಅವರ ರಾಜಕೀಯದ ಒಳನೋಟ ಇರಬಹುದು. ಹಾಗಂತ, ನಾವು ಬಿಜೆಪಿಗೆ ಸೆರೆಂಡರ್ ಆಗಿದ್ದೇವೆ ಅಂತಾ ಅಲ್ಲ. ಅವರ ಜತೆ ಕೈ ಜೋಡಿಸುವ ಪ್ರಶ್ನೆಯೇ ಪ್ರಶ್ನೆ ಇಲ್ಲ ಎಂದು ಹೆಚ್​ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಉಪ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ: ಯಾವುದೇ ರಾಷ್ಟ್ರೀಯ ಪಕ್ಷಗಳ ಜತೆ ಕೈ ಜೋಡಿಸಲ್ಲ.‌ ಡಿ. 10ರಂದು ಹೊರಬರುವ ಉಪ ಚುನಾವಣೆಯ ಫಲಿತಾಂಶದ ಬಳಿಕ ಹೊಸ ರಾಜಕೀಯ ಆಟ ಶುರು ಆಗುತ್ತೆ. 7ಸ್ಥಾನ ದಾಟಿದರೆ ಮಾತ್ರ ಯಡಿಯೂರಪ್ಪ ಸರಕಾರ ಬಹುಮತ ಗಳಿಸುತ್ತದೆ ಎಚ್ಡಿಕೆ ಸೂಕ್ಷ್ಮವಾಗಿ ಹೇಳಿದರು.

ನನಗೆ ಬಿಜೆಪಿ ಮೇಲಾಗಲಿ, ಕಾಂಗ್ರೆಸ್ ಮೇಲಾಗಲಿ ವ್ಯಾಮೋಹ ಇಲ್ಲ: ಸುಧಾಕರ್, ಯೋಗೇಶ್ವರ್ ನನ್ನ ಸರಕಾರ ತೆಗೆದವರು. ಈಗ ನನ್ನ ಭೇಟಿ ಮಾಡಲು ಓಡಾಡುತ್ತಿದ್ದಾರೆ. ಇದೆಲ್ಲ ಉಪ ಚುನಾವಣೆ ಕಾರಣಕ್ಕೆ ಅಂತ ನಂಗೂ ಗೊತ್ತಿದೆ. ಯಡಿಯೂರಪ್ಪ ಶ್ರಮ ಪಟ್ಟು ಸಿಎಂ ಆಗಿದ್ದಾರೆ. ಆದ್ರೆ, ಈಗ ಬರೇ ಜಾಹೀರಾತು ಕೊಡ್ತಿದಾರೆ ಎಂದೂ ಎಚ್ಡಿಕೆ ವ್ಯಂಗ್ಯವಾಡಿದರು.

Published On - 1:49 pm, Thu, 14 November 19