ಇಡೀ ಕುಟುಂಬ ಶೃಂಗೇರಿ ಸಂಸ್ಥಾನಕ್ಕೆ ಆಭಾರಿ, ದೇವೇಗೌಡ ಕಣ್ಣೀರು
ಹಾಸನ: ಇಂದು ಬೆಳಗ್ಗಿನಿಂದಲೂ ವಿವಿಧ ದೇವಾಲಯಗಳಿಗೆ ಭೇಟಿ ನೀಡಿರುವ ಹೆಚ್ ಡಿ ದೇವೇಗೌಡರ ಕುಟುಂಬ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಈಶ್ವರ ದೇಗುಲದ ಕುಂಭಾಭಿಷೇಕದಲ್ಲಿ ಭಾಗಿಯಾಗಿದೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಚನ್ನಮ್ಮ, ಹೆಚ್ ಡಿ ರೇವಣ್ಣ, ಭವಾನಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಸೇರಿ ಕುಟುಂಬ ಸಮೇತರಾಗಿ ದೇವಾಲಯದ ದರ್ಶನ ಮಾಡಿದ್ದಾರೆ. ಶೃಂಗೇರಿ ಮಠದ ವಿಧುಶೇಖರ ಸ್ವಾಮಿಜೀ ಅವರು ನರಸಿಂಹಸ್ವಾಮಿ ದೇವರ ನೂತನ ದೇಗುಲದ ಉದ್ಘಾಟನೆ ನೆರವೇರಿಸಿದ್ದಾರೆ. ಹೆಚ್ ಡಿಡಿ ಕಣ್ಣೀರು: ದೇಗುಲ […]
ಹಾಸನ: ಇಂದು ಬೆಳಗ್ಗಿನಿಂದಲೂ ವಿವಿಧ ದೇವಾಲಯಗಳಿಗೆ ಭೇಟಿ ನೀಡಿರುವ ಹೆಚ್ ಡಿ ದೇವೇಗೌಡರ ಕುಟುಂಬ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಈಶ್ವರ ದೇಗುಲದ ಕುಂಭಾಭಿಷೇಕದಲ್ಲಿ ಭಾಗಿಯಾಗಿದೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಚನ್ನಮ್ಮ, ಹೆಚ್ ಡಿ ರೇವಣ್ಣ, ಭವಾನಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಸೇರಿ ಕುಟುಂಬ ಸಮೇತರಾಗಿ ದೇವಾಲಯದ ದರ್ಶನ ಮಾಡಿದ್ದಾರೆ. ಶೃಂಗೇರಿ ಮಠದ ವಿಧುಶೇಖರ ಸ್ವಾಮಿಜೀ ಅವರು ನರಸಿಂಹಸ್ವಾಮಿ ದೇವರ ನೂತನ ದೇಗುಲದ ಉದ್ಘಾಟನೆ ನೆರವೇರಿಸಿದ್ದಾರೆ.
ಹೆಚ್ ಡಿಡಿ ಕಣ್ಣೀರು: ದೇಗುಲ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು ನಾವು ಸಾಕಷ್ಟು ಕಷ್ಟ ಅನುಭವಿಸಿದ್ದೇವೆ, ಆದ್ರೆ ಏನೇ ಕಷ್ಟ ಆದ್ರೂ ನಾವು ಗುರುಗಳನ್ನ ಬಿಡಲಿಲ್ಲ. ಏನೇ ನೋವು ನಲಿವು ಬಂದರೂ ನಿಮ್ಮ ಆಶೀರ್ವಾದದಿಂದಲೇ ಎಲ್ಲವನ್ನೂ ಶ್ರದ್ಧೆ ಭಕ್ತಿಯಿಂದ ಸ್ವೀಕಾರ ಮಾಡಿದ್ದೇವೆ. ನಾನು ಯಾರನ್ನು ಮೆಚ್ಚಿಸಬೇಕಿಲ್ಲ. ಏನೇ ಕಷ್ಟ ಬಂದರೂ ನಿಮ್ಮನ್ನು ಬಿಟ್ಟು ಎಲ್ಲೂ ಹೋಗಲ್ಲ ಎಂದು ತಮ್ಮ ರಾಜಕೀಯ ಜೀವನದ ಕಷ್ಟದ ದಿನಗಳನ್ನ ನೆನೆದು ದೇವೇಗೌಡರು ಕಣ್ಣೀರು ಹಾಕಿದರು.
ವೇದಿಕೆಯ ಮೇಲೆ ವಿಧುಶೇಖರ್ ಭಾರತೀ ತೀರ್ಥರು ಆಸೀನರಾಗಿದ್ದರು. ವೇದಿಕೆ ಕೆಳಗೆ ಕುಳಿತಿದ್ದ ದೇವೇಗೌಡರು ಮಾತನಾಡುತ್ತಾ ಕಣ್ಣೀರಿಟ್ಟರು. ನಮ್ಮ ಇಡೀ ಕುಟುಂಬ ನಿಮ್ಮ ಸಂಸ್ಥಾನಕ್ಕೆ ಆಭಾರಿಯಾಗಿದೆ. ದೊಡ್ಡವರ ದರ್ಶನಕ್ಕೆ ಬರುತ್ತೇನೆ ಎಂದು ಭಾವಿಸಿರಲಿಲ್ಲ ಎಂದು ಸ್ವಾಮಿಜೀಯವರ ಕುರಿತು ಮಾತನಾಡುತ್ತ ಗದ್ಗದಿತರಾದರು.
Published On - 2:28 pm, Thu, 14 November 19