ಮಂಗಳೂರು ಪಾಲಿಕೆ ಬಿಜೆಪಿ ಮಡಿಲಿಗೆ, ಖಾತೆ ತೆರೆಯದ ಜೆಡಿಎಸ್
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಬಿಜೆಪಿ ಮಡಿಲಿಗೆ ಬಿದ್ದಿದೆ. ಒಟ್ಟು 60 ವಾರ್ಡ್‌ಗಳ ಪೈಕಿ 44ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇನ್ನು ಕಾಂಗ್ರೆಸ್ 14, 2 ವಾರ್ಡ್‌ಗಳಲ್ಲಿ ಎಸ್ಡಿಪಿಐಗೆ ಗೆಲುವು ಕಂಡಿದೆ. ಜೆಡಿಎಸ್ ಯಾವುದೇ ಸ್ಥಾನ ಗಳಿಸುವಲ್ಲಿ ವಿಫಲವಾಗಿದೆ. ಕೋಲಾರ ನಗರಸಭೆ ಫಲಿತಾಂಶ ಅತಂತ್ರ: ಕೋಲಾರ ನಗರಸಭೆ ಚುನಾವಣೆ ಫಲಿತಾಂಶ ಅತಂತ್ರವಾಗಿದೆ.35 ವಾರ್ಡ್‌ಗಳ ಪೈಕಿ 12 ವಾರ್ಡ್‌ಗಳಲ್ಲಿ ಕಾಂಗ್ರೆಸ್, 8 ವಾರ್ಡ್‌ಗಳಲ್ಲಿ ಜೆಡಿಎಸ್, 3 ವಾರ್ಡ್‌ಗಳಲ್ಲಿ ಬಿಜೆಪಿ ಮತ್ತು 12 ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳ ಗೆಲುವು ಸಾಧಿಸಿದ್ದಾರೆ. […]
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಬಿಜೆಪಿ ಮಡಿಲಿಗೆ ಬಿದ್ದಿದೆ. ಒಟ್ಟು 60 ವಾರ್ಡ್‌ಗಳ ಪೈಕಿ 44ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇನ್ನು ಕಾಂಗ್ರೆಸ್ 14, 2 ವಾರ್ಡ್‌ಗಳಲ್ಲಿ ಎಸ್ಡಿಪಿಐಗೆ ಗೆಲುವು ಕಂಡಿದೆ. ಜೆಡಿಎಸ್ ಯಾವುದೇ ಸ್ಥಾನ ಗಳಿಸುವಲ್ಲಿ ವಿಫಲವಾಗಿದೆ. ಕೋಲಾರ ನಗರಸಭೆ ಫಲಿತಾಂಶ ಅತಂತ್ರ: ಕೋಲಾರ ನಗರಸಭೆ ಚುನಾವಣೆ ಫಲಿತಾಂಶ ಅತಂತ್ರವಾಗಿದೆ.35 ವಾರ್ಡ್‌ಗಳ ಪೈಕಿ 12 ವಾರ್ಡ್‌ಗಳಲ್ಲಿ ಕಾಂಗ್ರೆಸ್, 8 ವಾರ್ಡ್‌ಗಳಲ್ಲಿ ಜೆಡಿಎಸ್, 3 ವಾರ್ಡ್‌ಗಳಲ್ಲಿ ಬಿಜೆಪಿ ಮತ್ತು 12 ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳ ಗೆಲುವು ಸಾಧಿಸಿದ್ದಾರೆ.
ಇನ್ನು, ಮುಳಬಾಗಿಲು ನಗರಸಭೆ ಚುನಾವಣೆ ಫಲಿತಾಂಶವೂ ಅತಂತ್ರಗೊಂಡಿದೆ. 31 ವಾರ್ಡ್‌ಗಳ ಕೋಲಾರ ಜಿಲ್ಲೆ ಮುಳಬಾಗಿಲು ನಗರಸಭೆ 10 ವಾರ್ಡ್‌ಗಳಲ್ಲಿ ಜೆಡಿಎಸ್, 7 ವಾರ್ಡ್‌ಗಳಲ್ಲಿ ಕಾಂಗ್ರೆಸ್, 2 ವಾರ್ಡ್‌ಗಳಲ್ಲಿ ಬಿಜೆಪಿ, 12ರಲ್ಲಿ ಪಕ್ಷೇತರರು ಗೆಲುವು ಕಂಡಿದ್ದಾರೆ.
Published On - 12:21 pm, Thu, 14 November 19