ನೀವಿನ್ನು ಅನರ್ಹರಲ್ಲ; ನೀವೆಲ್ಲಾ ಭಾವಿ ಶಾಸಕರು, ಭಾವಿ ಸಚಿವರು: BSY

ನೀವಿನ್ನು ಅನರ್ಹರಲ್ಲ; ನೀವೆಲ್ಲಾ ಭಾವಿ ಶಾಸಕರು, ಭಾವಿ ಸಚಿವರು:  BSY

ಬೆಂಗಳೂರು: ರಾಜ್ಯ ಬಿಜೆಪಿಯ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಅನರ್ಹ ಶಾಸಕರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು. ಈ ವೇಳೆ ಒಬ್ಬೊಬ್ಬೊರಾಗಿ ಅನರ್ಹರನ್ನು ಪಕ್ಷಕ್ಕೆ ಬರಮಾಡಿಕೊಂಡ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ನಾವು ನಿಮಗೆ ಕೊಟ್ಟ ಭರವಸೆಯನ್ನು ಪಾಲಿಸುತ್ತೇವೆ. ನಾವು ನಿಮಗೆ ನಂಬಿಕೆ, ವಿಶ್ವಾಸದ್ರೋಹ ಮಾಡುವುದಿಲ್ಲ ಎಂದು ಭರವಸೆ ನೀಡಿದರು.

ನಾವು ನಿಮಗೆ (ಅನರ್ಹರಿಗೆ) ನಂಬಿಕೆ, ವಿಶ್ವಾಸದ್ರೋಹ ಮಾಡುವುದಿಲ್ಲ: ಸಿಎಂ ಯಡಿಯೂರಪ್ಪ ಕೇಂದ್ರದ ಬಿಜೆಪಿ ನಾಯಕತ್ವ ನಿಮ್ಮ ಜೊತೆಗಿರಲಿದೆ. ನೀವು ಯಾರೂ ಆತಂಕ ಪಡುವ ಅಗತ್ಯವಿಲ್ಲ. ಬಿಜೆಪಿ ಕಾರ್ಯಕರ್ತರು ನಿಮ್ಮ ಜತೆ ಹೊಂದಿಕೊಳ್ಳುತ್ತಾರೆ. ಯಾರಿಗೂ, ಯಾವುದೇ ಆತಂಕ ಬೇಡ ಎಂದು ಹೇಳಿದ್ದೇನೆ. ಭಾವಿ ಶಾಸಕರು, ಭಾವಿ ಸಚಿವರಿಗೆ ನನ್ನ ಅಭಿನಂದನೆಗಳು ಎಂದು ಅನರ್ಹ ಶಾಸಕರು ಬಿಜೆಪಿ ಸೇರ್ಪಡೆ ಬಳಿಕ ಸಿಎಂ ಭಾಷಣದಲ್ಲಿ ತಿಳಿಸಿದರು.

Published On - 11:46 am, Thu, 14 November 19

Click on your DTH Provider to Add TV9 Kannada