ಎಸ್ಎಸ್ಎಲ್​ಸಿ ಪರೀಕ್ಷೆ ದಿನಾಂಕ ಪ್ರಕಟ ಬೆನ್ನಲ್ಲೇ ಶುರುವಾಯ್ತು ಸಚಿವರಗಳ ಮಧ್ಯ ಸಮರ

| Updated By: sandhya thejappa

Updated on: Jun 29, 2021 | 8:45 AM

ಸುರೇಶ್ ಕುಮಾರ್​ರವರು ತಾಂತ್ರಿಕ ಕಮಿಟಿ ಸಲಹೆಯನ್ನು ಏಕೆ ಪಡೆದಿಲ್ಲವೆಂದು ಗೊತ್ತಿಲ್ಲ. ಈ ಬಗ್ಗೆ ತಿಳಿದುಕೊಳ್ಳುತ್ತೇನೆ. ತಾಂತ್ರಿಕ ಸಲಹಾ ಸಮಿತಿ ಜತೆ ಚರ್ಚಿಸುತ್ತೇನೆ. ನಂತರ ನನ್ನ ಸಲಹೆ ಬಗ್ಗೆ ಸುರೇಶ್ ಕುಮಾರ್ ಜೊತೆ ಚರ್ಚೆ ಮಾಡುತ್ತೇನೆ ಎಂದು ಸುಧಾಕರ್ ತಿಳಿಸಿದ್ದಾರೆ.

ಎಸ್ಎಸ್ಎಲ್​ಸಿ ಪರೀಕ್ಷೆ ದಿನಾಂಕ ಪ್ರಕಟ ಬೆನ್ನಲ್ಲೇ ಶುರುವಾಯ್ತು ಸಚಿವರಗಳ ಮಧ್ಯ ಸಮರ
ಸಚಿವ ಡಾ.ಕೆ.ಸುಧಾಕರ್, ಸಚಿವ ಸುರೇಶ್ ಕುಮಾರ್
Follow us on

ಬೆಂಗಳೂರು: ಜುಲೈ 19 ಮತ್ತು 22 ರಂದು ಎಸ್ಎಸ್ಎಲ್​ಸಿ ಪರೀಕ್ಷೆ ನಡೆಸುವುದಾಗಿ ನಿನ್ನೆ (ಜೂನ್ 28) ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಪರೀಕ್ಷೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ಸಚಿವರಗಳ ಮಧ್ಯ ಸಮರ ಶುರುವಾಗಿದೆ. ಎಸ್ಎಸ್ಎಲ್​ಸಿ ಪರೀಕ್ಷೆಗೆ ಮಾಹಿತಿನೇ ಕೇಳಿಲ್ಲ ಅಂತ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸುರೇಶ್ ಕುಮಾರ್ ವಿರುದ್ಧ ಗರಂ ಆಗಿದ್ದಾರೆ. ಎಸ್ಎಸ್ಎಲ್​ಸಿ ಪರೀಕ್ಷೆ ನಿರ್ಧಾರದ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಹೇಳುತ್ತಿರುವ ಸುಧಾಕರ್, ಪರೀಕ್ಷೆ ವಿಚಾರಕ್ಕೆ ನಾನು ಏನೂ ಹೇಳುವುದಕ್ಕೆ ಆಗಲ್ಲ. ಆರೋಗ್ಯ ಇಲಾಖೆ ಜತೆ ಚರ್ಚಿಸುತ್ತೇನೆಂದು ಹೇಳಿದ್ದರು. ಆದರೆ ಅವರು ಅದ್ಯಾವ ಸಮಿತಿಗೆ ಹೇಳಿದ್ದಾರೆಂದು ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಸುರೇಶ್ ಕುಮಾರ್​ರವರು ತಾಂತ್ರಿಕ ಕಮಿಟಿ ಸಲಹೆಯನ್ನು ಏಕೆ ಪಡೆದಿಲ್ಲವೆಂದು ಗೊತ್ತಿಲ್ಲ. ಈ ಬಗ್ಗೆ ತಿಳಿದುಕೊಳ್ಳುತ್ತೇನೆ. ತಾಂತ್ರಿಕ ಸಲಹಾ ಸಮಿತಿ ಜತೆ ಚರ್ಚಿಸುತ್ತೇನೆ. ನಂತರ ನನ್ನ ಸಲಹೆ ಬಗ್ಗೆ ಸುರೇಶ್ ಕುಮಾರ್ ಜೊತೆ ಚರ್ಚೆ ಮಾಡುತ್ತೇನೆ ಎಂದು ಸುಧಾಕರ್ ತಿಳಿಸಿದ್ದಾರೆ.

ಸುಧಾಕರ್ ಹೇಳಿಕೆಗೆ ಸುರೇಶ್ ಕುಮಾರ್ ಪ್ರತಿಕ್ರಿಯೆ
ಆರೋಗ್ಯ ಇಲಾಖೆ ಸಲಹೆಯಂತೆ ಪರೀಕ್ಷೆ ದಿನಾಂಕವನ್ನು ಘೋಷಣೆ ಮಾಡಿದ್ದೀವಿ. ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗಳ ಸಮ್ಮುಖದಲ್ಲಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆ ಆಯುಕ್ತರು ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆರೋಗ್ಯ ಇಲಾಖೆ ನೀಡಿರುವ ಎಸ್.ಓ.ಪಿ ಅನುಸರಣೆಗೆ ಬೇಕಾದ ಸಿದ್ಧತೆ ಕುರಿತು ಚರ್ಚೆ ನಡೆಸಿದ್ದಾರೆ. ಈ ಕುರಿತು ಡಿಸಿಗಳೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ಮೌಖಿಕ ಒಪ್ಪಿಗೆ ಪಡೆದು ಪರೀಕ್ಷೆ ದಿನಾಂಕ ಪ್ರಕಟ ಮಾಡಲಾಗಿದೆ. ಆರೋಗ್ಯ ಇಲಾಖೆ ಸಿದ್ಧಪಡಿಸಿರುವ ಗೈಡ್ ಲೈನ್ಸ್ ಪ್ರಕಾರವೇ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ತಾಂತ್ರಿಕ ಸಲಹಾ ತಜ್ಞರ ಸಮಿತಿಯಿಂದ ಸಲಹೆ ಇಲ್ಲ
ಎಸ್ಎಸ್ಎಲ್​ಸಿ ಪರೀಕ್ಷೆಗೆ ಕೊವಿಡ್ ತಾಂತ್ರಿಕ ಸಲಹಾ ತಜ್ಞರ ಸಮಿತಿ ಸಲಹೆ ನೀಡಿಲ್ಲ. ಸಲಹಾ ಸಮಿತಿ ಶಾಲಾರಂಭಕ್ಕೆ ಮಾತ್ರ ಸಲಹೆ ನೀಡಿತ್ತು. ಮಕ್ಕಳ ಕಲಿಕೆ ಹಾಗೂ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಶಾಲೆ ಆರಂಭಿಸಿ ಅಂತಾ ಸಮಿತಿ ಸಲಹೆ ನೀಡಿತ್ತು. ಡಾ.ದೇವಿ ಶೆಟ್ಟಿ ನೇತೃತ್ವದ ಸಮಿಯಿಯಿಂದ ಜುಲೈ 22 ರಂದು ಸಿಎಂಗೆ ವರದಿ ಸಲ್ಲಿಕೆಯಾಗಿತ್ತು. ವರದಿಯಲ್ಲಿ ಕೇವಲ ಶಾಲೆಗಳ ಆರಂಭಕ್ಕೆ ಮಾತ್ರ ಸಲಹೆ ನೀಡಲಾಗಿತ್ತು. ಆದರೆ ಎಸ್ಎಸ್ಎಲ್​ಸಿ ಅಥವಾ ಯಾವುದೇ ಬೇರೆ ಪರೀಕ್ಷೆಗಳ ಬಗ್ಗೆ ಯಾವುದೇ ಸಲಹೆ ಅಥವಾ ಸೂಚನೆಗಳನ್ನು ವರದಿಯಲ್ಲಿ ನೀಡಿಲ್ಲ.

ಇದನ್ನೂ ಓದಿ

School Reopening: ಶಿಕ್ಷಣದ ಜತೆ ಮಕ್ಕಳ ಜೀವವೂ ಮುಖ್ಯ, ಶಾಲೆ ಆರಂಭಕ್ಕೆ ಆತುರ ಬೇಡ – ಆರೋಗ್ಯ ಸಚಿವ ಡಾ.ಸುಧಾಕರ್

ರಾಜ್ಯದಲ್ಲಿ ಶಾಲೆಗಳ ಪುನರಾರಂಭ ಯಾವಾಗ? ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?

(K Sudhakar is upset over the announcement of SSLC exam date)

Published On - 8:36 am, Tue, 29 June 21