ಲಸಿಕೆ ನೀಡುವುದಕ್ಕೆ ಹೊಸ ಮಾರ್ಗ ಕಂಡುಕೊಂಡ ಕಲಬುರಗಿ ಆರೋಗ್ಯ ಇಲಾಖೆ

|

Updated on: Mar 25, 2021 | 5:31 PM

ದೇಶದಲ್ಲಿ ಕಿಲ್ಲರ್ ಕೊರೊನಾ ಮೊದಲು ಆತಂಕವನ್ನು ಸೃಷ್ಟಿಸಿದ್ದೆ ಕಲಬುರಗಿ ಜಿಲ್ಲೆಯಲ್ಲಿ. ಮೊದಲ ಬಲಿ ಪಡೆದು ವರ್ಷವಾದ ಬಳಿಕ ಇದೀಗ ಮತ್ತೆ ಜಿಲ್ಲೆಯಲ್ಲಿ ಎರಡನೇ ಅಲೆಯ ಅಬ್ಬರ ಜೋರಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದೆ.

ಲಸಿಕೆ ನೀಡುವುದಕ್ಕೆ ಹೊಸ ಮಾರ್ಗ ಕಂಡುಕೊಂಡ ಕಲಬುರಗಿ ಆರೋಗ್ಯ ಇಲಾಖೆ
ಕೊರೊನ ಲಸಿಕೆ
Follow us on

ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನಡುವೆ ಅನೇಕರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಹೀಗಾಗಿ ಜಿಲ್ಲಾ ಆರೋಗ್ಯ ಇಲಾಖೆ ಹೊಸ ಐಡಿಯಾವೊಂದನ್ನು ಮಾಡಿದೆ. ಲಸಿಕೆ ಹಾಕಿಸಿಕೊಳ್ಳಲು ಇಚ್ಛೆಯುಳ್ಳವರ ಮನೆ ಬಾಗಿಲಿಗೆ ವಾಹನವನ್ನು ಕಳಿಸುವ ವ್ಯವಸ್ಥೆ ಪ್ರಾರಂಭಿಸಿದೆ. ಗ್ರಾಮ ಪಂಚಾಯತಿಯಿಂದ ಗ್ರಾಮೀಣ ಭಾಗದಲ್ಲಿ ಲಸಿಕೆ ಹಾಕಿಸಿಕೊಳ್ಳುವವರನ್ನು ಕರೆ ತರಲು ವಾಹನ ವ್ಯವಸ್ಥೆ ಮಾಡಲಾಗುತ್ತಿದೆ.

ದೇಶದಲ್ಲಿ ಕಿಲ್ಲರ್ ಕೊರೊನಾ ಮೊದಲು ಆತಂಕವನ್ನು ಸೃಷ್ಟಿಸಿದ್ದೆ ಕಲಬುರಗಿ ಜಿಲ್ಲೆಯಲ್ಲಿ. ಮೊದಲ ಬಲಿ ಪಡೆದು ವರ್ಷವಾದ ಬಳಿಕ ಇದೀಗ ಮತ್ತೆ ಜಿಲ್ಲೆಯಲ್ಲಿ ಎರಡನೇ ಅಲೆಯ ಅಬ್ಬರ ಜೋರಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದೆ. ಇದರಿಂದ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ತಲೆಬಿಸಿ ಹೆಚ್ಚಿಸಿದೆ. ಜನರು ಕೊರೊನಾವನ್ನು ನಿರ್ಲಕ್ಷ್ಯ ವಹಿಸುತ್ತಿರುವುದು ಮತ್ತು ಮಹಾರಾಷ್ಟ್ರದಿಂದ ಅನೇಕರು ಜಿಲ್ಲೆಗೆ ಬರುತ್ತಿರುವುದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದೆಡೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೇ ಮತ್ತೊಂದೆಡೆ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಹೇಳಿಕೊಳ್ಳುವಷ್ಟು ಇಲ್ಲಾ. ಜಿಲ್ಲೆಯಲ್ಲಿ 1.97 ಲಕ್ಷ ವೃದ್ದರಿದ್ದಾರೆ. ಆದರೆ ಇಲ್ಲಿಯವರಗೆ ಲಸಿಕೆ ಹಾಕಿಸಿಕೊಂಡಿದ್ದು ಮಾತ್ರ ಕೇವಲ ಹದಿನೈದು ಸಾವಿರ ವೃದ್ದರು ಮಾತ್ರ. ಮತ್ತೊಂದಡೆ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಹೊರತುಪಡಿಸಿದರೆ, ಬಹುತೇಕ ಬೇರೆ ಇಲಾಖೆಯ ಸಿಬ್ಬಂದಿ ಕೂಡಾ ಲಸಿಕೆ ಹಾಕಿಸಿಕೊಂಡಿಲ್ಲಾ. ಇನ್ನು ಗ್ರಾಮೀಣ ಭಾಗದಲ್ಲಿ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಕೂಡಾ ಕಡಿಮೆಯಿದೆ. ಇದಕ್ಕೆ ಕಾರಣ ಗ್ರಾಮದಿಂದ ಆರೋಗ್ಯ ಕೇಂದ್ರಗಳಿಗೆ ಹೋಗಿ, ಅಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕು. ಆದರೆ ಅನೇಕ ಕಡೆ ಸರಿಯಾದ ವಾಹನದ ವ್ಯವಸ್ಥೆಯಿಲ್ಲಾ. ಹೀಗಾಗಿ ಹೆಚ್ಚಿನ ಜನರು ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಹಾಕಿಸಿಕೊಳ್ಳುತ್ತಿಲ್ಲಾ. ಇದನ್ನು ಮನಗಂಡಿರುವ ಕಲಬುರಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಇದೀಗ ಹೊಸದೊಂದು ಐಡಿಯಾ ಮಾಡಿದೆ.

ಲಸಿಕೆ ಪಡೆಯುತ್ತಿರುವ ಮಹಿಳೆ

ಮಕ್ಕಳಿಗೆ ಮನವಿ ಮಾಡಿದ ಜಿಲ್ಲಾಧಿಕಾರಿ
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಿಂದ ಇದೀಗ ಲಸಿಕೆ ಹಾಕಿಸಿಕೊಳ್ಳಲು ಹೋಗುವವರಿಗೆ ವಾಹನದ ವ್ಯವಸ್ಥೆ ಮಾಡಲಾಗಿದೆ. ಲಸಿಕೆ ಹಾಕಿಸಿಕೊಳ್ಳುವವರನ್ನು ಮನೆಯಿಂದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಲಸಿಕೆ ಹಾಕಿದ ನಂತರ ಅವರನ್ನು ಮತ್ತೆ ಮನೆಗೆ ಮರಳಿ ತಂದು ಬಿಡಲಾಗುತ್ತದೆ. ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ನಲವತ್ತೈದು ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ಮುಂದಾದರೆ ಅವರಿಗೆ ವಾಹನದ ವ್ಯವಸ್ಥೆಯನ್ನು ಇದೀಗ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಿಂದ ಇದೀಗ ವಾಹನದ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗೆ ಹೆತ್ತವರು ಲಸಿಕೆ ಹಾಕಿಸುತ್ತಾರೆ. ಆ ಮೂಲಕ ಹೆತ್ತವರು ತಮ್ಮ ಜವಬ್ದಾರಿಯನ್ನು ನಿರ್ವಹಿಸುತ್ತಾರೆ. ಮನೆಯಲ್ಲಿ ವೃದ್ದರಿದ್ದರೆ ಅವರಿಗೆ ಲಸಿಕೆ ಹಾಕಿಸಿಕೊಳ್ಳಲು ಪ್ರೇರೆಪಿಸಬೇಕೆಂದು ಮಕ್ಕಳಲ್ಲಿ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ

‘ಸುಧಾಕರ್​ ಆ ಹೆಣ್ಣುಮಕ್ಕಳನ್ನೂ ಸೇರಿಸಿ ಹೀಗೆಲ್ಲಾ ಹೇಳಿದರಲ್ಲಾ.. ಪಾಪ ಅವ್ರು ಗಂಡನ ಹತ್ತಿರ ಹೋಗಿ ಬೈಸಿಕೊಳ್ಳಬೇಕು’

ಕೊರೊನಾ ಎರಡನೇ ಅಲೆಯ ನಡುವೆ ಹಾವೇರಿಯಲ್ಲಿ ಅದ್ದೂರಿಯಾಗಿ ನಡೆದ ಶರೀಫ ಶಿವಯೋಗಿಗಳ ರಥೋತ್ಸವ