AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಎರಡನೇ ಅಲೆಯ ನಡುವೆ ಹಾವೇರಿಯಲ್ಲಿ ಅದ್ದೂರಿಯಾಗಿ ನಡೆದ ಶರೀಫ ಶಿವಯೋಗಿಗಳ ರಥೋತ್ಸವ

ಶಿಶುವಿನಹಾಳ ಜಗತ್ತಿಗೆ ಸಾಮರಸ್ಯದ ಸಂದೇಶ ಸಾರಿದ ಸಂತ ಶಿಶುವಿನಹಾಳ ಶರೀಫರ ಜನ್ಮಸ್ಥಳ. ಶರೀಫರು ಐಕ್ಯರಾಗಿರುವ ಸ್ಥಳವನ್ನು ಶರೀಫಗಿರಿ ಅಂತಾ ಕರೆಯಲಾಗುತ್ತದೆ. ತತ್ವಪದಗಳ ಮೂಲಕ ಶಿಶುವಿನಹಾಳ ಶರೀಫರು ಜಗತ್ತಿಗೆ ಸಾಮರಸ್ಯದ ಸಂದೇಶ ಸಾರಿದವರು.

ಕೊರೊನಾ ಎರಡನೇ ಅಲೆಯ ನಡುವೆ ಹಾವೇರಿಯಲ್ಲಿ ಅದ್ದೂರಿಯಾಗಿ ನಡೆದ ಶರೀಫ ಶಿವಯೋಗಿಗಳ ರಥೋತ್ಸವ
ಶರೀಫ ಶಿವಯೋಗಿಗಳ ರಥೋತ್ಸವ
Follow us
sandhya thejappa
|

Updated on: Mar 25, 2021 | 4:53 PM

ಹಾವೇರಿ: ಈಗ ಎಲ್ಲೆಲ್ಲೂ ಕೊರೊನಾ ಎರಡನೇ ಅಲೆಯ ಅಬ್ಬರ ಶುರುವಾಗಿದೆ. ಆದರೆ ಕೊರೊನಾ ಅಬ್ಬರದ ನಡುವೆಯೂ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳದ ಶರೀಫ ಶಿವಯೋಗಿಗಳ ಜಾತ್ರೆ ಅದ್ದೂರಿಯಾಗಿ ನಡೆಯಿತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರು ಕೊರೊನಾ ಅಲೆಯ ಅಬ್ಬರ ಮರೆತು ಜಾತ್ರೆಯನ್ನು ಸಂಭ್ರಮವಾಗಿ ಆಚರಿಸಿದರು.

ಗುರುಶಿಷ್ಯ ಪರಂಪರೆಯ ಪ್ರತೀಕ ಶಿಶುವಿನಹಾಳ ಜಗತ್ತಿಗೆ ಸಾಮರಸ್ಯದ ಸಂದೇಶ ಸಾರಿದ ಸಂತ ಶಿಶುವಿನಹಾಳ ಶರೀಫರ ಜನ್ಮಸ್ಥಳ. ಶರೀಫರು ಐಕ್ಯರಾಗಿರುವ ಸ್ಥಳವನ್ನು ಶರೀಫಗಿರಿ ಅಂತಾ ಕರೆಯಲಾಗುತ್ತದೆ. ತತ್ವಪದಗಳ ಮೂಲಕ ಶಿಶುವಿನಹಾಳ ಶರೀಫರು ಜಗತ್ತಿಗೆ ಸಾಮರಸ್ಯದ ಸಂದೇಶ ಸಾರಿದವರು. ಶರೀಫರು ಮುಸ್ಲಿಂ ಧರ್ಮದವರಾದರೂ ಶರೀಫರ ಗುರುಗಳಾದ ಗುರುಗೋವಿಂದ ಭಟ್ಟರು ಬ್ರಾಹ್ಮಣ ಸಮುದಾಯದವರು. ಇಬ್ಬರೂ ಯಾವುದೇ ಜಾತಿ ಬೇಧವಿಲ್ಲದೆ ಜಗತ್ತಿಗೆ ಸಾಮರಸ್ಯ ಸಂದೇಶದ ಮೂಲಕ ನಾವೆಲ್ಲರೂ ಒಂದು ಎಂಬುದನ್ನ ಸಾರಿದ್ದರು. ಹೀಗಾಗಿ ಪ್ರತಿವರ್ಷ ಶರೀಫಗಿರಿಯಲ್ಲಿ ಗುರುಶಿಷ್ಯ ಪರಂಪರೆಯ ಪ್ರತೀಕವಾಗಿ ರಥೋತ್ಸವ ನಡೆಸಲಾಗುತ್ತದೆ. ರಥದಲ್ಲಿ ಗುರುಶಿಷ್ಯರ ಬೆಳ್ಳಿಯ ಮೂರ್ತಿಗಳನ್ನಿಟ್ಟು ರಥೋತ್ಸವ ನಡೆಸಲಾಗುತ್ತದೆ. ಜಾತ್ರೆಗೆ ಬಂದ ಭಕ್ತರು ರಥವನ್ನು ಎಳೆದು ರಥೋತ್ಸವದ ಸಂಭ್ರಮ ಆಚರಿಸುತ್ತಾರೆ. ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ತಮ್ಮ ಭಕ್ತಿ ಸಮರ್ಪಿಸುತ್ತಾರೆ.

ರಥೋತ್ಸವದ ವೇಳೆ ನೆರೆದಿದ್ದ ಸಾವಿರಾರು ಭಕ್ತರು

ದೈಹಿಕ ಅಂತರ ಕಾಪಾಡದ ಭಕ್ತರು ರಥೋತ್ಸವದ ಹಿನ್ನೆಲೆಯಲ್ಲಿ ಶರೀಫಗಿರಿಗೆ ಆಗಮಿಸುವ ಸಾವಿರಾರು ಭಕ್ತರು ಶಿಶುವಿನಹಾಳ ಶರೀಫರು ಮತ್ತು ಗುರುಗೋವಿಂದ ಭಟ್ಟರ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ಸಕ್ಕರೆ ಊದಿಸಿ ಭಕ್ತಿಗೆ ಪಾತ್ರರಾಗುತ್ತಾರೆ. ಹಾವೇರಿ, ಧಾರವಾಡ, ಗದಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ತಮ್ಮ ಭಕ್ತಿ ಸಮರ್ಪಿಸಿದರು. ಭಕ್ತರು ಸರದಿ ಸಾಲಿನಲ್ಲಿ ನಿಂತು ಶರೀಫರ ಕರ್ತೃಗದ್ದುಗೆಗೆ ಪೂಜೆ ಸಲ್ಲಿಸಿ ಪುನೀತರಾದರು. ರಥೋತ್ಸವದ ವೇಳೆ ಭಕ್ತರು ಶರೀಫರು ಮತ್ತು ಗುರುಗೋವಿಂದ ಭಟ್ಟರ ತತ್ವಪದಗಳನ್ನು ಮೆಲುಕು ಹಾಕಿದರು. ರಥೋತ್ಸವಕ್ಕೆ ಡೊಳ್ಳು ಕುಣಿತದ ಸದ್ದು ಮತ್ತಷ್ಟು ಸಾಥ್ ನೀಡಿತು. ಆದರೆ ರಥೋತ್ಸವಕ್ಕೆ ಬಂದಿದ್ದ ಸಾವಿರಾರು ಸಂಖ್ಯೆಯ ಭಕ್ತರ ಪೈಕಿ ಬೆರಳೆಣಿಕೆಯಷ್ಟು ಜನರು ಮಾತ್ರ ಮಾಸ್ಕ್ ಧರಿಸಿದರೆ, ಬಹುತೇಕರು ಮಾಸ್ಕ್ ಧರಿಸದೆ ಕೊರೊನಾ ಬಗ್ಗೆ ಮೈಮರೆತಿದ್ದರು. ದೈಹಿಕ ಅಂತರವಂತೂ ಸಂಪೂರ್ಣ ಮಾಯವಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಕೊರೊನಾ ಎರಡನೇ ಅಲೆಯ ಅಬ್ಬರದ ನಡುವೆಯೂ ರಥೋತ್ಸವವನ್ನು ಸಂಭ್ರಮವಾಗಿ ಆಚರಿಸಿದರು.

ಆನೆಯಿಂದ ಆಶೀರ್ವಾದ ಪಡೆಯುತ್ತಿರುವ ಭಕ್ತರು

ಇದನ್ನೂ ಓದಿ

‘ಚಂದ್ರಲೋಕಕ್ಕೆ ಪ್ರವಾಸ.. ಮನೆಗೊಂದು ಸಣ್ಣ ಹೆಲಿಕಾಪ್ಟರ್​’ -ತಮಿಳುನಾಡಿನ ಅಭ್ಯರ್ಥಿಯ ಚುನಾವಣಾ ಪ್ರಣಾಳಿಕೆಗಳಿವು ; ಇದರಲ್ಲಿದೆ ಒಂದು ​ಟ್ವಿಸ್ಟ್

ಫಲಾನುಭವಿಗಳ ನಿಖರ ಪತ್ತೆಗೆ ಹೊಸ ಉಪಾಯ; ಧಾರವಾಡದಲ್ಲಿ ಹೊಸ ದಾರಿ ಕಂಡುಕೊಂಡ ಗ್ರಾಮ ಲೆಕ್ಕಾಧಿಕಾರಿ

ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ
17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ
ಜಾತಿಗಣತಿಗಾಗಿ ಕಾಂಗ್ರೆಸ್ ಪಕ್ಷ ಕೇಂದ್ರವನ್ನು ಆಗ್ರಹಿಸುತಿತ್ತು: ಶಿವಕುಮಾರ್
ಜಾತಿಗಣತಿಗಾಗಿ ಕಾಂಗ್ರೆಸ್ ಪಕ್ಷ ಕೇಂದ್ರವನ್ನು ಆಗ್ರಹಿಸುತಿತ್ತು: ಶಿವಕುಮಾರ್