‘ಸುಧಾಕರ್​ ಆ ಹೆಣ್ಣುಮಕ್ಕಳನ್ನೂ ಸೇರಿಸಿ ಹೀಗೆಲ್ಲಾ ಹೇಳಿದರಲ್ಲಾ.. ಪಾಪ ಅವ್ರು ಗಂಡನ ಹತ್ತಿರ ಹೋಗಿ ಬೈಸಿಕೊಳ್ಳಬೇಕು’

ಸಚಿವ ಸುಧಾಕರ್​ ತಮ್ಮ ಪಕ್ಷದವರೇ ಆದ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರಂಥ ಒಳ್ಳೇಯವರನ್ನೂ ಸೇರಿಸಿ ಹೇಳಿದ್ದಾರಲ್ರಿ ಎಂದು ಎಲ್ಲಾ 224 ಶಾಸಕರ ಬಗ್ಗೆ ತನಿಖೆಯಾಗಲಿ ಎಂಬ ಸಚಿವ ಡಾ.ಸುಧಾಕರ್ ಹೇಳಿಕೆ ವಿಚಾರವಾಗಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಲೇವಡಿ ಮಾಡಿದ್ದಾರೆ.

‘ಸುಧಾಕರ್​ ಆ ಹೆಣ್ಣುಮಕ್ಕಳನ್ನೂ ಸೇರಿಸಿ ಹೀಗೆಲ್ಲಾ ಹೇಳಿದರಲ್ಲಾ.. ಪಾಪ ಅವ್ರು ಗಂಡನ ಹತ್ತಿರ ಹೋಗಿ ಬೈಸಿಕೊಳ್ಳಬೇಕು’
ಹೆಚ್.ಡಿ. ರೇವಣ್ಣ
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Mar 25, 2021 | 6:01 PM

ಹಾಸನ: ಸಚಿವ ಸುಧಾಕರ್​ ತಮ್ಮ ಪಕ್ಷದವರೇ ಆದ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರಂಥ ಒಳ್ಳೇಯವರನ್ನೂ ಸೇರಿಸಿ ಹೇಳಿದ್ದಾರಲ್ರಿ.. ಎಂದು ಎಲ್ಲಾ 224 ಶಾಸಕರ ಬಗ್ಗೆ ತನಿಖೆಯಾಗಲಿ ಎಂಬ ಸಚಿವ ಡಾ.ಸುಧಾಕರ್ ಹೇಳಿಕೆ ವಿಚಾರವಾಗಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಲೇವಡಿ ಮಾಡಿದ್ದಾರೆ. ಸಚಿವ ಸಂಪುಟದ ಸಚಿವರೇ ಸಿಎಂ ಹಾಗೂ ಸ್ಪೀಕರ್​ ಅವರನ್ನ ಸೇರಿಸಿ ಹೀಗೆಲ್ಲಾ ಹೇಳಿದ್ರೆ ಹೇಗೆ? ಎಂದು ನಗುತ್ತಾ ಪ್ರಶ್ನೆ ಹಾಕಿದರು. ಬೇಕಿದ್ರೇ ವಿರೋಧ ಪಕ್ಷಗಳನ್ನ ಟೀಕೆ ಮಾಡಲಿ. ನಮ್ಮ ಬಗ್ಗೆ ಮಾತನಾಡಲಿ. ಆದರೆ, ಯಡಿಯೂರಪ್ಪ ಅವರಂಥ ಒಳ್ಳೇಯವರನ್ನು ಸೇರಿಸಿ ಹೀಗೆ ಹೇಳಿದ್ರೆ ಹೇಗೆ? ಎಂದು ನಗೆಯಾಡಿದ್ದಾರೆ.

ಮಂತ್ರಿಗಳಾಗಿ ಹೀಗೆಲ್ಲಾ ಹೇಳೋದು ಸರಿಯಲ್ಲ. ಇಂತಹ ಸಂದರ್ಭದಲ್ಲಿ ಸಿಎಂ ಹಾಗು ಸ್ಪೀಕರ್ ಮಧ್ಯ ಪ್ರವೇಶ ಮಾಡಬೇಕು. ಪಾಪ ಆ ಹೆಣ್ಣುಮಕ್ಕಳನ್ನೂ ಸೇರಿಸಿ ಸುಧಾಕರ್​ ಹೀಗೆಲ್ಲಾ ಹೇಳಿದ್ರಲ್ಲಾ. ಪಾಪ ಅವರೆಲ್ಲಾ ತಮ್ಮ ಗಂಡನ ಹತ್ರ ಹೋಗಿ ಬೈಸಿಕೊಳ್ಳಬೇಕು ಎಂದು ಹೆಚ್.ಡಿ.ರೇವಣ್ಣ ಲೇವಡಿ ಮಾಡಿದರು.

‘ಮೋದಿ ಹೆಚ್​ಡಿಕೆ ಸರ್ಕಾರವನ್ನ 10 ಪರ್ಸೆಂಟ್​ ಸರ್ಕಾರ ಅಂದಿದ್ದರು.. ಈಗ 25 ಪರ್ಸೆಂಟ್ ಇಲ್ಲದೆ ಕೆಲಸ ಮಾಡ್ತಿಲ್ಲ’ ಹೆಚ್​ಡಿಕೆ ಸರ್ಕಾರವನ್ನ 10 ಪರ್ಸೆಂಟ್​ ಸರ್ಕಾರ ಅಂದಿದ್ದರು. ಪ್ರಧಾನಿ ಮೋದಿ 10 ಪರ್ಸೆಂಟ್​ ಸರ್ಕಾರ ಎಂದು ಹೇಳಿದ್ದರು. ಈ ಸರ್ಕಾರದಲ್ಲಿ 25 ಪರ್ಸೆಂಟ್ ಇಲ್ಲದೆ ಕೆಲಸ ಮಾಡುತ್ತಿಲ್ಲ ಎಂದು ಮಾಜಿ ಸಚಿವ ಹೆಚ್​.ಡಿ.ರೇವಣ್ಣ ವಾಗ್ದಾಳಿ ನಡೆಸಿದರು.

ಅಧಿಕಾರಿಗಳು 25 ಪರ್ಸೆಂಟ್ ಇಲ್ಲದೇ ಕೆಲಸ ಮಾಡುತ್ತಿಲ್ಲ. ಯಡಿಯೂರಪ್ಪನವರೇ ಅಧಿಕಾರಿಗಳು ವಸೂಲಿ ಮಾಡ್ತಿದ್ದಾರೆ. ಯಾರ ಹೆಸರಲ್ಲಿ ಅಧಿಕಾರಿಗಳು ವಸೂಲಿ ಮಾಡ್ತಿದ್ದಾರೆ ಕೇಳಿ. ಈ ರಾಜ್ಯದಲ್ಲಿ ಆಡಳಿತ ಇದೆಯಾ, ಸರ್ಕಾರ ಇದೆಯಾ? ಯಾರೂ ಹೇಳೋರಿಲ್ಲ ಕೇಳೋರಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ದಾಖಲೆ ಬೇಕಿದ್ದರೆ ಕೇಳಿ ಕೊಡುತ್ತೇವೆ ಎಂದು H.D.ರೇವಣ್ಣ ಆರೋಪಿಸಿದರು. ಇಷ್ಟು ಕೀಳುಮಟ್ಟಕ್ಕೆ ಇಳಿಯಬಾರದು ಒಳ್ಳೇದಾಗಲ್ಲ. ನಿಮ್ಮ ಮಕ್ಕಳು ಮರಿಗಳಿಗೆ ಒಳ್ಳೆಯದಾಗಲ್ಲ ಎಂದು ರೇವಣ್ಣ ಹೇಳಿದರು.

ನಾನೂ 40 ವರ್ಷ ರಾಜಕಾರಣವನ್ನು ಮಾಡಿದ್ದೇನೆ. ಇಷ್ಟೊಂದು ಲೂಟಿ ಒಳ್ಳೆಯದಲ್ಲ.. ಕೂಡಲೆ ತಡೆಗಟ್ಟಿ. ಈ ರಾಜ್ಯ ಲೂಟಿಕೋರರ ಕೈ ಸೇರಿದೆ ಎಂದು ವಾಗ್ದಾಳಿ ನಡೆಸಿದರು. ನಮ್ಮ ಜಿಲ್ಲೆಯಲ್ಲಿ ಏನೇನು ನಡೆಯುತ್ತಿದೆ ನನಗೆ ಗೊತ್ತಿದೆ. ಕೆಲ ಅಧಿಕಾರಿಗಳು ಜೈಲಿಗೆ ಹೋಗ್ತಾರೆ ಎಂದು ರೇವಣ್ಣ ಎಚ್ಚರಿಕೆ ಸಹ ನೀಡಿದರು.

‘ಅದರ ಬಗ್ಗೆ ನಾನು ಮಾತಾಡಲು ಹೋಗಲ್ಲ, ಅಸಹ್ಯವಾಗುತ್ತೆ’ ಇತ್ತ, ಸಚಿವ ಡಾ.ಕೆ.ಸುಧಾಕರ್​ರ ಏಕಪತ್ನಿ ವ್ರತಸ್ಥ ಹೇಳಿಕೆ ವಿಚಾರವಾಗಿ ಅದರ ಬಗ್ಗೆ ನಾನು ಮಾತಾಡಲು ಹೋಗಲ್ಲ, ಅಸಹ್ಯವಾಗುತ್ತೆ ಎಂದು ತುಮಕೂರು ಜಿಲ್ಲೆಯ ಭೀಮಸಂದ್ರದಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದ್ದಾರೆ. ಬಿಜೆಪಿಯವರು ಹೇಳಿಕೆಗಳಿಗೂ ನಡವಳಿಕೆಗೆ ಭಾರಿ ವ್ಯತ್ಯಾಸವಿದೆ. ಹೀಗೆ ಮಾತಾಡುವ ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ ಎಂದು ಭೀಮಸಂದ್ರದಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಖಾರವಾಗಿ ಮಾತನಾಡಿದರು.

ಇದನ್ನೂ ಓದಿ: ಖಾಸಗಿ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದ ಮಂಡ್ಯದ ನಿವಾಸಿ ಕೊರೊನಾಗೆ ಬಲಿ

Published On - 5:21 pm, Thu, 25 March 21