ಖಾಸಗಿ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದ ಮಂಡ್ಯದ ನಿವಾಸಿ ಕೊರೊನಾಗೆ ಬಲಿ

ಜಿಲ್ಲೆಯ ಹೆಚ್.ಮಲ್ಲಿಗೆರೆ ಗ್ರಾಮದಲ್ಲಿ ಕೊರೊನಾ ಮಹಾಮಾರಿ ವ್ಯಕ್ತಿಯೊಬ್ಬರ ಬಲಿ ಪಡೆದಿದೆ. ಕೊರೊನಾದಿಂದ ಗ್ರಾಮದ ನಿವಾಸಿ ಎಂ.ಜೆ.ಮಧುಸೂದನ್(33) ಅಸುನೀಗಿದ್ದಾರೆ. ಮಧುಸೂದನ್​ ಖಾಸಗಿ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಖಾಸಗಿ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದ ಮಂಡ್ಯದ ನಿವಾಸಿ ಕೊರೊನಾಗೆ ಬಲಿ
ಪ್ರಾತಿನಿಧಿಕ ಚಿತ್ರ
Follow us
KUSHAL V
|

Updated on:Mar 25, 2021 | 6:16 PM

ಮಂಡ್ಯ: ಜಿಲ್ಲೆಯ ಹೆಚ್.ಮಲ್ಲಿಗೆರೆ ಗ್ರಾಮದಲ್ಲಿ ಕೊರೊನಾ ಮಹಾಮಾರಿ ವ್ಯಕ್ತಿಯೊಬ್ಬರ ಬಲಿ ಪಡೆದಿದೆ. ಕೊರೊನಾದಿಂದ ಗ್ರಾಮದ ನಿವಾಸಿ ಎಂ.ಜೆ.ಮಧುಸೂಧನ್(33) ಅಸುನೀಗಿದ್ದಾರೆ. ಮಧುಸೂದನ್​ ಖಾಸಗಿ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. 2 ದಿನದ ಹಿಂದೆ ಮಧುಸೂದನ್​ಗೆ ತಮ್ಮ ತಾಯಿಯಿಂದ ಸೋಂಕು ಹರಡಿರುವುದು ದೃಢಪಟ್ಟಿತ್ತು. ಈ ನಡುವೆ, ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಯುವಕ ಇಂದು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಇದೀಗ, ಮೃತನ ಸಂಪರ್ಕದಲ್ಲಿದ್ದ ಮೂವರಿಗೆ ಕೊರೊನಾ ದೃಢವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಹೆದ್ದಾರಿಯಲ್ಲಿ​​ ಕಾರು ಡಿಕ್ಕಿಯಾಗಿ ಪಾದಚಾರಿ ದುರ್ಮರಣ ಹೆದ್ದಾರಿಯಲ್ಲಿ​​ ಕಾರು ಡಿಕ್ಕಿಯಾಗಿ ಪಾದಚಾರಿ ದುರ್ಮರಣ ಹೊಂದಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಕಾರು ಡಿಕ್ಕಿಯಾಗಿ ಪಾದಚಾರಿ ದಾಸಪ್ಪ (38) ಸಾವನ್ನಪ್ಪಿದ್ದಾರೆ. ಬೈಂದೂರು ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಾಗಿದೆ.

ದಾಸಪ್ಪಗೆ ಮಾರುತಿ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇನ್ನು, ಘಟನೆ ಬಳಿಕ ವಾಹನ ಚಾಲಕ ಪರಾರಿಯಾಗಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ದಾಸಪ್ಪರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಹಿನ್ನಲೆಯಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರಕದೆ ದಾಸಪ್ಪ ಅಸುನೀಗಿದ್ದಾರೆ.

ಇದೀಗ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸ್ಥಳೀಯ ಯುವಕರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮುತ್ತಿಗೆ ಸಹ ಹಾಕಿದರು.

ಹೆಜ್ಜೇನು ದಾಳಿಯಿಂದ ಇಬ್ಬರು ವೈದ್ಯರಿಗೆ ಗಾಯ ಹೆಜ್ಜೇನು ದಾಳಿಯಿಂದ ಇಬ್ಬರು ವೈದ್ಯರಿಗೆ ಗಾಯಗಳಾಗಿರುವ ಘಟನೆ ಗದಗ ನಗರದ‌ ಜಿಮ್ಸ್ ಕಾಲೇಜ್ ಆವರಣದಲ್ಲಿ ವರದಿಯಾಗಿದೆ. ಪರೀಕ್ಷಾ ಕರ್ತವ್ಯಕ್ಕೆ ಬಂದಿದ್ದ ಇಬ್ಬರು ವೈದ್ಯರಿಗೆ ಗಾಯಗಳಾಗಿದೆ. ಹೈದರಾಬಾದ್​ನ ಇಬ್ಬರು ವೈದ್ಯರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳು ವೈದ್ಯರಿಗೆ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

VIJ FIRE 1

ಆಕಸ್ಮಿಕ ಬೆಂಕಿಯಿಂದ ಗುಡಿಸಲು ಭಸ್ಮ

VIJ FIRE 2

ಸಾಲ ಮರು ಪಾವತಿಸಲು ಇಟ್ಟಿದ್ದ 5 ಲಕ್ಷ ನಗದು ಸಹ ಬೆಂಕಿಗಾಹುತಿ

ನಾಗಬೇನಾಳ ಬಳಿ ಆಕಸ್ಮಿಕ ಬೆಂಕಿಯಿಂದ ಗುಡಿಸಲು ಭಸ್ಮ ನಾಗಬೇನಾಳ ಬಳಿ ಆಕಸ್ಮಿಕ ಬೆಂಕಿಯಿಂದ ಗುಡಿಸಲು ಭಸ್ಮವಾಗಿದೆ, ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಗಬೇನಾಳದಲ್ಲಿ ನಡೆದಿದೆ. ಖೇಮಪ್ಪ ಲಮಾಣಿ ಎಂಬುವವರ ಗುಡಿಸಲು ಬೆಂಕಿಗಾಹುತಿಯಾಗಿದೆ. ದುರದೃಷ್ಟದ ಸಂಗತಿಯೆಂದರೆ, ಅಗ್ನಿ ಅವಘಡದಲ್ಲಿ ಸಾಲ ಮರು ಪಾವತಿಸಲು ಇಟ್ಟಿದ್ದ 5 ಲಕ್ಷ ನಗದು ಸಹ ಬೆಂಕಿಗಾಹುತಿಯಾಗಿದೆ. ಇದಲ್ಲದೆ, 50 ಗ್ರಾಂ ಚಿನ್ನಾಭರಣ, ಬೆಳ್ಳಿ ಆಭರಣ, ವಸ್ತುಗಳು ಭಸ್ಮವಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದವರ ಸೆರೆ ಬೆಂಗಳೂರಿನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದವರ ಅರೆಸ್ಟ್​ ಆಗಿದ್ದಾರೆ. ಬಸವನಗುಡಿ ಠಾಣೆ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನವಾಗಿದೆ. APS ಕಾಲೇಜು ರಸ್ತೆಯಲ್ಲಿ ಸಿಮ್ಜಾದ್ ಪಾಷಾ, ನಾಗಣ್ಣ ಅರೆಸ್ಟ್​ ಆಗಿದ್ದಾರೆ. ಜೊತೆಗೆ, ಬಂಧಿತರು ಸ್ಕಾರ್ಪಿಯೊ ಕಾರಿನಲ್ಲಿ ತಂದಿದ್ದ 35.5 ಕೆಜಿ ಗಾಂಜಾನ ಜಪ್ತಿ ಮಾಡಲಾಗಿದೆ.

ಬಂಧಿತರ ವಿರುದ್ಧ ಎನ್​ಡಿಪಿಎಸ್ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ. ಕಾರ್ಯಾಚರಣೆ ನಡೆಸಿದ ಪೊಲೀಸ್​ ತಂಡಕ್ಕೆ 30 ಸಾವಿರ ರೂ. ಬಹುಮಾನ ಘೋಷಣೆಯಾಗಿದೆ. ಬೆಂಗಳೂರು ಪೊಲೀಸ್ ಆಯುಕ್ತರಿಂದ ಬಹುಮಾನ ಘೋಷಣೆಯಾಗಿದೆ.

ಇದನ್ನೂ ಓದಿ: Corona Cases and Lockdown News Live: ಕೊರೊನಾ ಸೋಂಕಿನ ಕುರಿತು ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆಯಾ? 

Published On - 4:43 pm, Thu, 25 March 21