ಮನೆಗೆ ನುಗ್ಗಿ ಯುವತಿಯ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಆರೋಪ.. ಆಟೋ ಚಾಲಕನ ಮೇಲೆ ಯುವತಿ ತಾಯಿಯಿಂದ ದೂರು
ಆರೋಪಿ ಅನಿಲ್‌ರಾಜ್ ಯುವತಿ ತಾಯಿಗೆ ಪರಿಚಯವಿದ್ದ. ಯುವತಿ ತಾಯಿ ಕೆಲಸಕ್ಕೆ ಹೋದಾಗ ಅಕ್ಕಿ ಕೊಡುವ ನೆಪದಲ್ಲಿ ಮನೆಗೆ ಬಂದ ಅನಿಲ್, ಯುವತಿಗೆ ಚಾಕು ತೋರಿಸಿ ಧಮ್ಕಿ ಹಾಕಿ ಯುವತಿಯನ್ನು ವಿವಸ್ತ್ರಗೊಳಿಸಿ ವಿಡಿಯೋ ಮಾಡಿಕೊಂಡಿದ್ದ. ಬಳಿಕ 25 ಲಕ್ಷ ರೂ. ನೀಡುವಂತೆ ಯುವತಿ ಮತ್ತು ಆಕೆಯ ತಾಯಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಈಗ ಯುವತಿ ತಾಯಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.
ಹುಬ್ಬಳ್ಳಿ: ಕಳೆದೊಂದು ವಾರದಿಂದ ಹುಬ್ಬಳ್ಳಿ-ಧಾರವಾಡದಲ್ಲಿ ಒಂದು ಗ್ಯಾಂಗ್ನಿಂದ ಯುವಕರಿಗೆ ಆತಂಕ ಶುರುವಾಗಿದೆ. ಅದ್ರಲ್ಲೂ ಶ್ರೀಮಂತ ಉದ್ಯಮಿಗಳ ಮಕ್ಕಳನ್ನ ಟಾರ್ಗೆಟ್ ಮಾಡೋ ಗ್ಯಾಂಗ್, ಅವರನ್ನ ಬಲೆಗೆ ಬೀಳಿಸಿ ಇನ್ನಿಲ್ಲದ ಕಾಟ ಕೊಡ್ತಿದೆ. ಈಗ ಅಂತಹದೇ ಮತ್ತೊಂದು ಘಟನೆ ಮರುಕಳಿಸಿದೆ. ಯುವತಿಯ ನಗ್ನ ವಿಡಿಯೋ ಇಟ್ಟುಕೊಂಡು 25 ಲಕ್ಷ ರೂ. ನೀಡುವಂತೆ ಆಟೋ ಚಾಲಕನೊಬ್ಬ ಯುವತಿಯನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಹಣ ನೀಡದಿದ್ರೆ ವಿಡಿಯೋ ವೈರಲ್ ಮಾಡುವ ಬೆದರಿಕೆ ಹಾಕಿದ್ದಾನಂತೆ. ಹೀಗಾಗಿ ಆರೋಪಿ ಆಟೋ ಚಾಲಕ ಅನಿಲ್‌ರಾಜ್ ವಿರುದ್ಧ ಯುವತಿಯ ತಾಯಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿ ಅನಿಲ್‌ರಾಜ್ ಯುವತಿ ತಾಯಿಗೆ ಪರಿಚಯವಿದ್ದ. ಯುವತಿ ತಾಯಿ ಕೆಲಸಕ್ಕೆ ಹೋದಾಗ ಅಕ್ಕಿ ಕೊಡುವ ನೆಪದಲ್ಲಿ ಮನೆಗೆ ಬಂದ ಅನಿಲ್, ಯುವತಿಗೆ ಚಾಕು ತೋರಿಸಿ ಧಮ್ಕಿ ಹಾಕಿ ಯುವತಿಯನ್ನು ವಿವಸ್ತ್ರಗೊಳಿಸಿ ವಿಡಿಯೋ ಮಾಡಿಕೊಂಡಿದ್ದ. ಬಳಿಕ 25 ಲಕ್ಷ ರೂ. ನೀಡುವಂತೆ ಯುವತಿ ಮತ್ತು ಆಕೆಯ ತಾಯಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಈಗ ಯುವತಿ ತಾಯಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ತಲೆ ಎತ್ತಿದೆ ಭಯಾನಕ ಗ್ಯಾಂಗ್ ಇನ್ನು ಕಳೆದೊಂದು ವಾರದಿಂದ ಹುಬ್ಬಳ್ಳಿ-ಧಾರವಾಡದಲ್ಲಿ ಗ್ಯಾಂಗ್ವೊಂದು ಯುವಕರಿಗೆ ಕಾಟ ಕೊಡುತ್ತಿದೆ. ಮೊದಲಿಗೆ ಫೇಸ್ಬುಕ್ ಅಕೌಂಟ್ಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ, ಅವರ ಜೊತೆ ಸ್ನೇಹ ಬೆಳೆಸ್ತಾರೆ. ಸುಂದರ ಯುವತಿಯರ ಅಕೌಂಟ್ ಮೂಲಕ ರಿಕ್ವೆಸ್ಟ್ ಕಳುಹಿಸಿ, ವಿಡಿಯೋ ಕಾಲ್ನಲ್ಲಿ ಬೆತ್ತಲಾಗುವಂತೆ ಮಾಡುತ್ತಾರೆ. ಅವರು ಹೇಳಿದ ಹಾಗೆ ಕೇಳಿ ಬೆತ್ತಲಾದ್ರೆ, ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡು, ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡ್ತಾರೆ. ಒಂದು ವೇಳೆ ಹಣ ಕೊಡದಿದ್ರೆ, ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡ್ತೀವಿ ಅಂತಾ ಬೆದರಿಸ್ತಾರೆ. ಈ ಗ್ಯಾಂಗ್ ಹುಬ್ಬಳ್ಳಿ-ಧಾರವಾಡದ ಏಳೆಂಟು ಜನರಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಿಂಸೆ ನೀಡಿದೆ.
ಫೇಸ್ಬುಕ್ ಪ್ರೊಫೈಲ್ ಚೆಕ್ ಮಾಡಿ ಶ್ರೀಮಂತರು ಅಂತಾ ಗೊತ್ತಾದ್ರೆ ಬೆಂಬಿಡದೆ ಕಾಡ್ತಾರೆ. ಅವರ ವಿಡಿಯೋ ಕಾಲ್ ರಿಸೀವ್ ಮಾಡಿ, 10 ಸೆಕೆಂಡ್ ಮಾತನಾಡಿದ್ರೂ ಸಾಕಂತೆ. ಅದನ್ನೇ ಮಾರ್ಫಿಂಗ್ ಮಾಡಿ ಬ್ಲ್ಯಾಕ್‌ಮೇಲ್ ಮಾಡ್ತಾರಂತೆ. ಈ ಬೆತ್ತಲೆ ಗ್ಯಾಂಗ್ ಹೊರ ರಾಜ್ಯದಿಂದ ಈ ಕೆಲಸ ಮಾಡ್ತಿದೆ ಅಂತಾ ಗೊತ್ತಾಗಿದ್ದು, ಸೈಬರ್ ಪೊಲೀಸರು ಅವರ ಬೆನ್ನು ಬಿದ್ದಿದ್ದಾರೆ.
ಇದನ್ನೂ ಓದಿ: ನಗ್ನ ವಿಡಿಯೋ ತೋರಿಸಿ ಉದ್ಯಮಿಗೆ ಬ್ಲ್ಯಾಕ್‌ಮೇಲ್ ಆರೋಪ: ಮಹಿಳೆ ಬಂಧನ
Published On - 3:45 pm, Thu, 25 March 21