ಗ್ರಾಮ ಪಂಚಾಯತ್ ಸದಸ್ಯ ಬದುಕಿ ಬರಲೆಂದು ಗ್ರಾಮಸ್ಥರಿಂದ ದೀರ್ಘದಂಡ ನಮಸ್ಕಾರ: ಆದರೆ ವಿಧಿಯಾಟವೇ ಬೇರೆಯಾಗಿತ್ತು

| Updated By: ವಿವೇಕ ಬಿರಾದಾರ

Updated on: Aug 31, 2022 | 8:18 PM

ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದ ಬಳಿ ಬೈಕ್​ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗ್ರಾಮ ಪಂಚಾಯಿತಿ ಸದಸ್ಯ ಪರಮೇಶ್ವರ(35) ಸಾವನ್ನಪ್ಪಿದ್ದಾರೆ.

ಗ್ರಾಮ ಪಂಚಾಯತ್ ಸದಸ್ಯ ಬದುಕಿ ಬರಲೆಂದು ಗ್ರಾಮಸ್ಥರಿಂದ ದೀರ್ಘದಂಡ ನಮಸ್ಕಾರ: ಆದರೆ ವಿಧಿಯಾಟವೇ ಬೇರೆಯಾಗಿತ್ತು
ಗ್ರಾಮಸ್ಥರಿಂದ ದೀರ್ಘದಂಡ ನಮಸ್ಕಾರ
Follow us on

ಕಲಬುರಗಿ: ಸಾಮಾನ್ಯವಾಗಿ ತಮ್ಮ ಬೇಡಿಕೆಗಳನ್ನು ಇಡೇರಿಸಿಕೊಳ್ಳಲು ಭಕ್ತರು ದೀರ್ಘದಂಡ ನಮಸ್ಕಾರ ಹಾಕುತ್ತಾರೆ. ಆದರೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದ ಜನರು ಓರ್ವ ವ್ಯಕ್ತಿಗಾಗಿ ದೀರ್ಘದಂಡ ನಮಸ್ಕಾರ ಹಾಕಿ ಬೇಡಿಕೊಂಡಿದ್ದಾರೆ. ಹೌದು ಮಣ್ಣೂರ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಪರಮೇಶ್ವರ(35) ರಿಗೆ ನಿನ್ನೆ (ಆ 30) ಗ್ರಾಮದ ಹೊರವಲಯದಲ್ಲಿ ಬೈಕ್ ಅಪಘಾತವಾಗಿತ್ತು.

ಇದರಿಂದ ಗಂಭೀರ ಗಾಯಗೊಂಡಿದ್ದ ಪರಮೇಶ್ವರ ಅವರನ್ನು ಕೂಡಲೆ ಮಹಾರಾಷ್ಟ್ರದ ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮುಂಜಾನೆ ಗ್ರಾಮಸ್ಥರು, ಪರಮೇಶ್ವರ ಬದುಕಿ ಬರಲಿ ಅಂತ ಶೇಷಗಿರಿ ಗ್ರಾಮದಿಂದ ಮಣ್ಣೂರು ಯಲ್ಲಮ್ಮದೇವಿ ದೇವಸ್ಥಾನದ ವರಗೆ ದೀರ್ಘದಂಡ ನಮಸ್ಕಾರ ಹಾಕಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಪರಮೇಶ್ವರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ