ಕಲಬುರಗಿ: ಮನೆಯ ಮೇಲ್ಛಾವಣಿ ಕುಸಿದು ವೃದ್ಧೆ ಸಾವು

| Updated By: ವಿವೇಕ ಬಿರಾದಾರ

Updated on: Jul 09, 2022 | 4:30 PM

ಮನೆಯ ಗೋಡೆ  ಮತ್ತು ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ವೃದ್ದೆ ಸಾವನ್ನಪ್ಪಿರುವ ಘಟನೆ  ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ನಡೆದಿದೆ.

ಕಲಬುರಗಿ: ಮನೆಯ ಮೇಲ್ಛಾವಣಿ ಕುಸಿದು ವೃದ್ಧೆ ಸಾವು
ಕಲಬುರಗಿ ಮನೆ ಕುಸಿತ
Follow us on

ಕಲಬುರಗಿ: ಮನೆಯ (House) ಗೋಡೆ  ಮತ್ತು ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ವೃದ್ಧೆ (old Woman) ಸಾವನ್ನಪ್ಪಿರುವ ಘಟನೆ  ಕಲಬುರಗಿ (Klaburagi) ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ನಡೆದಿದೆ. ಆರೀಫಾ ಬೇಗಂ(65) ಮೃತ ದುರ್ದೈವಿ. ರಾತ್ರಿ ಮನೆಯಲ್ಲಿ ಮಲಗಿದ್ದಾಗ ಮೇಲ್ಚಾವಣಿ ಕುಸಿದ ಪರಿಣಾಮ ವೃದ್ದೆ ಗಾಯಗೊಂಡಿದ್ದಳು. ಕೂಡಲೆ ವೃದ್ದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ವೃದ್ದೆ ಸಾವನ್ನಪ್ಪಿದ್ದಾಳೆ. ಚಿತ್ತಾಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಜಿಲ್ಲೆಯಾದ್ಯಂತ ಎರಡು ದಿನ ‌ವರುಣನ ಆರ್ಭಟ ಜೋರಾದ  ಹಿನ್ನೆಲೆ ಗ್ರಾಮಸ್ಥರು 2 ದಿನಗಳ ಕಾಲ ಮಳೆ ಇದೆ ಯಾರು ಹೊರಗಡೆ ಬರಬೇಡಿ ಎಂದು ಕಮಲಾಪೂರ ತಾಲೂಕಿನ ಅಂಬಲಗಾ ಗ್ರಾಮದಲ್ಲಿ ಡಂಗುರ ಸಾರಿದ್ದಾರೆ. ಮಕ್ಕಳನ್ನು ಹೊರಗಡೆ ಬಿಡಬೇಡಿ, ರೈತರು ಕೂಡಾ ಜಮೀನಿಗೆ ಹೋಗಬೇಡಿ ಅಂತ ಜಿಲ್ಲಾಡಳಿತ ಸೂಚನೆ ಮೇರೆಗೆ
ಡಂಗುರದ ಮೂಲಕ ಗ್ರಾಮಸ್ಥರಿಗೆ ಸೂಚನೆ ನೀಡಿದ್ದಾರೆ.

ಭಾರಿ ಮಳೆಯಿಂದ ಕಾಲು ಜಾರಿ ಬಾವಿಗೆಬಿದ್ದು ರೈತ ಸಾವು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಕೃಷಿ ಕೆಲಸಕ್ಕೆ ಹೋಗಿದ್ದಾಗ ಮಳೆಯಿಂದ  ರೈತ ಕಾಲುಜಾರಿ ತೋಟದ ಬಾವಿಗೆಬಿದ್ದು ಸಾವನ್ನಪ್ಪಿರುವ ಘಟನೆ ಹೊಸನಗರ ತಾಲೂಕಿನ ದೊಡ್ಡಬಿಳಗೋಡು ಗ್ರಾಮದಲ್ಲಿ  ನಡೆದಿದೆ. ಜಿ.ಕೆ.ಗಣಪತಿ(75) ಮೃತ ರೈತ. ರಿಪ್ಪನ್​ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಸನಗರ ತಾಲೂಕಿನಲ್ಲಿ ಕಳೆದ ಐದಾರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಕುಮುಧ್ವತಿ, ಶರ್ಮೀಣ್ಯಾವತಿ ನದಿಗಳು ತುಂಬಿ ಹರಿಯುತ್ತಿವೆ.

ಉಕ್ಕಿ ಹರಿಯುವ ಕಾವೇರಿ ನದಿಯಲ್ಲಿ ಸಿಲುಕಿದ ಬೋಟ್

ಕೊಡಗು: ಉಕ್ಕಿ ಹರಿಯುವ ಕಾವೇರಿ ನದಿಯಲ್ಲಿ ಬೋಟ್ ಸಿಲುಕಿದ್ದು, ಬೋಟ್​​ನಲ್ಲಿದ್ದವರನ್ನು ರ್ಯಾಫ್ಟಿಂಗ್  ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ದುಬಾರೆಯಲ್ಲಿ ನಡೆದಿದೆ. ಬೋಟ್​​ನಲ್ಲಿ ದುಬಾರೆ ಆನೆ ಕ್ಯಾಂಪ್​ನಿಂದ 10ಕ್ಕೂ ಹೆಚ್ಚು ಹಾಡಿ ಜನರು ತುಂಬಿ ಹರಿಯುತ್ತಿದ್ದ ಕಾವೇರಿ ನದಿಯಲ್ಲಿ ತೆರಳುತ್ತಿದ್ದರು. ನದಿಯ ಮಧ್ಯದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಬೋಟ್​​ ಕೆಟ್ಟು ನಿಂತಿದೆ. ಈ ವೆಳೆ ಬೋಟ್​​ನಲ್ಲಿದ್ದವರು ಮರದ ಕೊಂಬೆ ಹಿಡಿದು ಪರದಾಡಿದ್ದಾರೆ.

Published On - 2:25 pm, Sat, 9 July 22