ಕಲಬುರಗಿ: ಮಾತಾ ಮಾಣಿಕೇಶ್ವರಿ ಕಾಲೋನಿ ನಿವಾಸಿ ಸಂತೋಷ್ ಚೌಹಾಣ್, ಮಾರ್ಚ್ 11ರಿಂದ ನಾಪತ್ತೆಯಾಗಿದ್ದು, ಅಪಹರಣ (Kidnap) ಆಗಿರುವ ಶಂಕೆ ವ್ಯಕ್ತವಾಗಿದೆ. ಸಂತೋಷ್ ಪಿಯುಸಿ ವಿದ್ಯಾರ್ಥಿ. ಮಾರ್ಚ್ 11ರಂದು ಸೈಕಲ್ (Cycle) ವಿಚಾರಕ್ಕೆ ಗಲಾಟೆಯಾಗಿತ್ತು. ಗಲಾಟೆಯಾದಾಗಿನಿಂದ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ. ಗಲಾಟೆಯಾದ ಕೆಲ ಹೊತ್ತಿನಲ್ಲಿಯೇ ಸಂತೋಷ್ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲೇಜಿಗೆ ಹೋಗುವುದಕ್ಕೆಂದು ಸಂತೋಷ್ ಸ್ನೇಹಿತನ ಬಳಿ ಸೈಕಲ್ ಖರಿದಿಸಿದ್ದ. ಸ್ನೇಹಿತನ ಬಳಿಕ ಮೂರು ಸಾವಿರಕ್ಕೆ ಸೈಕಲ್ ಖರೀದಿ ಮಾಡಿದ್ದ. ಆಸೈಕಲ್ ಮೇಲೆ ಸಂತೋಷ್ ಕಾಲೇಜಿಗೆ ತೆರಳಿದ್ದ. ಆದರೆ ಇದು ತಮ್ಮ ಸೈಕಲ್ ಕದ್ದಿದ್ದೀಯಾ ಅಂತ ಸಂತೋಷ ಜೊತೆ ಕೆಲವರು ಗಲಾಟೆ ಮಾಡಿದ್ದರಂತೆ. ಗಲಾಟೆ ಮಾಡಿ ಸೈಕಲ್ ಕಸಿದುಕೊಂಡು ಹೋಗಿದ್ದರಂತೆ. ಅದೇ ದಿನ ರಾತ್ರಿಯಿಂದ ಸಂತೋಷ್ ನಾಪತ್ತೆಯಾಗಿದ್ದಾನೆ.
ಸಂತೋಷ್ನನ್ನು ಯಾರೋ ಅಪಹರಣ ಮಾಡಿದ್ದಾರೆ ಅಂತ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ
ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎನ್‌ಸಿಬಿ ಅಧಿಕಾರಿಗಳ ದಾಳಿ; ಡ್ರಗ್ಸ್ ಸಾಗಾಟಕ್ಕೆ ಯತ್ನಿಸಿದ ಆರೋಪಿಗಳು ಅರೆಸ್ಟ್:
ಬೆಂಗಳೂರಿನ ಕೊರಿಯರ್ ಸೆಂಟರ್ ಮೇಲೆ ಎನ್‌ಸಿಬಿ ಅಧಿಕಾರಿಗಳ ದಾಳಿ ನಡೆಸಿ 1 ಕೆ.ಜಿ 970 ಗ್ರಾಂ ಸ್ಯೂಡೋಫೆಡ್ರಿನ್ ಮಾದಕವಸ್ತು ಜಪ್ತಿ ಮಾಡಿದ್ದಾರೆ. ದಾಳಿಯಲ್ಲಿ ಓರ್ವ ಭಾರತೀಯ ಹಾಗೂ ಓರ್ವ ಆಫ್ರಿಕಾ ಪ್ರಜೆ ಬಂಧನಕ್ಕೊಳಗಾಗಿದ್ದಾರೆ. ಬಂಧಿತರು ನ್ಯೂಜಿಲೆಂಡ್‌ಗೆ ಡ್ರಗ್ಸ್ ಸಾಗಾಟಕ್ಕೆ ಯತ್ನಿಸಿದ್ದರು. ಮಾ.11ರಂದು ಖಚಿತ ಮಾಹಿತಿ ಮೇರೆಗೆ ಎನ್‌ಸಿಬಿ ದಾಳಿ ನಡೆಸಿದೆ.
ಸಿಎಂ ಆಗಮನದ ವೇಳೆ ಪ್ರತಿಭಟನೆ ನಡೆಸಲು ತೀರ್ಮಾನ:
ಮಂಡ್ಯದಲ್ಲಿ ಅಧಿಕಾರಿಯಿಂದ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ವಿರುದ್ಧ ಆರೋಪ ಕೇಳಿಬಂದಿದೆ. ವೈರಮುಡಿ ಉತ್ಸವಕ್ಕೆ ನಾಳೆ ಮುಖ್ಯಮಂತ್ರಿ ಆಗಮಿಸುತ್ತಿರುವ ಹಿನ್ನೆಲೆ ಅಧಿಕಾರಿಗಳು ಅಂಗಡಿಗಳನ್ನ ಬಲವಂತವಾಗಿ ಮುಚ್ಚಿಸಲು ಮುಂದಾಗಿದ್ದಾರೆ. ಅಂಗಡಿ ಮುಚ್ಚಲು ನಿರಾಕರಿಸಿದ್ದಕ್ಕೆ ದಿಲೀಪ್ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಘಟನೆ ಖಂಡಿಸಿ ನಾಳೆ ಸಿಎಂ ಆಗಮನದ ವೇಳೆ ಪ್ರತಿಭಟನೆ ನಡೆಸಲು ರೈತ ಸಂಘದ ಕಾರ್ಯಕರ್ತರು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ
ಅಮ್ಮನಿಗಾಗಿ ಔಷಧ ಹುಡುಕುತ್ತಿದ್ದ ಯುವತಿಯನ್ನು ಕೊಂದ ರಷ್ಯಾ ಪಡೆ; ಗಡಿದಾಟುವ ಮೊದಲು ಜೀವವೇ ಹೋಯ್ತು
Published On - 12:59 pm, Sun, 13 March 22