ಸೈಕಲ್‌ಗೆ ಮಾಡಿದ ಅವಮಾನ ಇಡೀ ರಾಷ್ಟ್ರಕ್ಕೆ ಮಾಡಿದ ಅವಮಾನ: ಮೋದಿ ಹೇಳಿಕೆಗೆ ಅಖಿಲೇಶ್ ತಿರುಗೇಟು
ಸೈಕಲ್ ರೈತರನ್ನು ಅವರ ಹೊಲಗಳಿಗೆ ಸಂಪರ್ಕಿಸುತ್ತದೆ, ಸಮೃದ್ಧಿಯ ಅಡಿಪಾಯವನ್ನು ಹಾಕುತ್ತದೆ. ಸೈಕಲ್ ನಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತದೆ, ಸಾಮಾಜಿಕ ನಿರ್ಬಂಧಗಳನ್ನು ಮೀರಿದೆ, ಅದು ಹಣದುಬ್ಬರದ ಪ್ರಭಾವವಿಲ್ಲದೆ ಮುನ್ನಡೆಯುತ್ತದೆ. ಸೈಕಲ್ ಸಾಮಾನ್ಯರ ಸವಾರಿ, ಗ್ರಾಮೀಣ ಭಾರತದ ಹೆಮ್ಮೆ ಎಂದು ಅಖಿಲೇಶ್ ಟ್ವೀಟ್
ದೆಹಲಿ: ಉತ್ತರಪ್ರದೇಶದಲ್ಲಿ (Uttar Pradesh)ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ(Narendra Modi) “ಭಯೋತ್ಪಾದಕರು ಸೈಕಲ್‌ಗಳನ್ನು ಆಯ್ಕೆ ಮಾಡುತ್ತಾರೆ” ಎಂಬ ಹೇಳಿಕೆಗೆ ಅಖಿಲೇಶ್ ಯಾದವ್ (Akhilesh Yadav) ತಿರುಗೇಟು ನೀಡಿದ್ದು, “ಸೈಕಲ್‌ಗೆ ಮಾಡಿದ ಅವಮಾನ ಇಡೀ ರಾಷ್ಟ್ರಕ್ಕೆ ಮಾಡಿದ ಅವಮಾನ” ಎಂದು ಹೇಳಿದ್ದಾರೆ. “ಸಾಮಾನ್ಯರ ಸವಾರಿ” ಮತ್ತು ಹಳ್ಳಿಗಳ ಹೆಮ್ಮೆಯಾಗಿದೆ ನಮ್ಮ ಪಕ್ಷದ ಚಿಹ್ನೆ ಸೈಕಲ್ ಎಂದು ಅಖಿಲೇಶ್ ಹೇಳಿದ್ದಾರೆ. “ಸೈಕಲ್ ರೈತರನ್ನು ಅವರ ಹೊಲಗಳಿಗೆ ಸಂಪರ್ಕಿಸುತ್ತದೆ, ಸಮೃದ್ಧಿಯ ಅಡಿಪಾಯವನ್ನು ಹಾಕುತ್ತದೆ. ಸೈಕಲ್ ನಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತದೆ, ಸಾಮಾಜಿಕ ನಿರ್ಬಂಧಗಳನ್ನು ಮೀರಿದೆ, ಅದು ಹಣದುಬ್ಬರದ ಪ್ರಭಾವಕ್ಕೊಳಗಾಗದೆ ಮುನ್ನಡೆಯುತ್ತದೆ. ಸೈಕಲ್ ಸಾಮಾನ್ಯರ ಸವಾರಿ, ಗ್ರಾಮೀಣ ಭಾರತದ ಹೆಮ್ಮೆ. ಸೈಕಲ್‌ಗೆ ಮಾಡಿದ ಅವಮಾನ ಇಡೀ ರಾಷ್ಟ್ರಕ್ಕೆ ಮಾಡಿದ ಅವಮಾನ ಎಂದು ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದು, ಈ ಟ್ವೀಟ್ ಜತೆಗೆ ಶಾಲಾ ಬಾಲಕನೊಬ್ಬ ಸೈಕಲ್ ಮೇಲೆ ಸವಾರಿ ಮಾಡುತ್ತಿದ್ದು, ಆಟಿಕೆ ವಿಮಾನವನ್ನು ನೋಡಿ ನಗುತ್ತಿರುವ ಚಿತ್ರವಿದೆ. 2008ರ ಅಹಮದಾಬಾದ್ ಸರಣಿ ಸ್ಫೋಟದಲ್ಲಿ ಶುಕ್ರವಾರದಂದು 49 ಮಂದಿ ದೋಷಿಗಳೆಂದು ತೀರ್ಪು ನೀಡಲಾಗಿತ್ತು. ಸಮಾಜವಾದಿ ಪಕ್ಷದ ಚುನಾವಣಾ ಚಿಹ್ನೆಯಾದ ಸೈಕಲ್ನ್ನು ಭಯೋತ್ಪಾದಕರೊಂದಿಗೆ ಕನೆಕ್ಟ್ ಮಾಡುವ ಮೂಲಕ ಪ್ರಧಾನಿ ಮೋದಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. “ಇಂದು ನಾನು ಇದನ್ನು ಯಾಕೆ ಉಲ್ಲೇಖಿಸುತ್ತಿದ್ದೇನೆ ಎಂದರೆ ಕೆಲವು ರಾಜಕೀಯ ಪಕ್ಷಗಳು ಭಯೋತ್ಪಾದಕರ ಬಗ್ಗೆ ಮೃದುವಾಗಿ ನಡೆದುಕೊಂಡಿವೆ. ಸ್ಫೋಟಗಳನ್ನು ಎರಡು ರೀತಿಯಲ್ಲಿ ಕಾರ್ಯಗತಗೊಳಿಸಲಾಗಿದೆ. ಮೊದಲನೆಯದು ನಗರದಲ್ಲಿ 50-60 ಸ್ಥಳಗಳಲ್ಲಿ, ಮತ್ತು ನಂತರ ಎರಡು ಗಂಟೆಗಳ ನಂತರ ಆಸ್ಪತ್ರೆಯಲ್ಲಿ ಒಂದು ವಾಹನದಲ್ಲಿ ಬಾಂಬ್ ಸ್ಫೋಟವಾಯಿತು. ಅಲ್ಲಿಗೆ ಸಂಬಂಧಿಕರು, ಅಧಿಕಾರಿಗಳು ಮತ್ತು ಮುಖಂಡರು ಅಲ್ಲಿಗೆ ಹೋಗುತ್ತಾರೆ, ಅಲ್ಲಿ ಹಲವಾರು ಜನರು ಸತ್ತರು, ”ಎಂದು ಹರ್ದೋಯ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಿಎಂ ಮೋದಿ ಹೇಳಿದರು.
खेत और किसान को जोड़ कर उसकी समृद्धि की नींव रखती है, हमारी साइकल,
सामाजिक बंधनों को तोड़ बिटिया को स्कूल छोड़ती है, हमारी साइकल
महंगाई का उसपर असर नहीं, वो सरपट दौड़ती है, हमारी साइकल,
साइकल आम जनों का विमान है, ग्रामीण भारत का अभिमान है, साइकल का अपमान पूरे देश का अपमान है। pic.twitter.com/Nf1Bq2XtjE
— Akhilesh Yadav (@yadavakhilesh) February 20, 2022
ಮೊದಲು ನಡೆದ ಸ್ಫೋಟಗಳಲ್ಲಿ ಬಾಂಬ್‌ಗಳನ್ನು ಸೈಕಲ್‌ಗಳಲ್ಲಿ ಇರಿಸಲಾಗಿತ್ತು. ಅವರು (ಭಯೋತ್ಪಾದಕರು) ಏಕೆ ಸೈಕಲ್‌ಗಳನ್ನು ಆರಿಸಿಕೊಂಡರು ಎಂದು ನಾನು ಆಶ್ಚರ್ಯ ಪಡುತ್ತೇನೆ” ಎಂದು ಪ್ರಧಾನಿ ಟೀಕಿಸಿದ್ದರು.
2006 (ವಾರಣಾಸಿ) ಮತ್ತು ಅಯೋಧ್ಯೆ ಮತ್ತು ಲಕ್ನೋ (2007) ಸ್ಫೋಟಗಳಲ್ಲಿ ಆರೋಪಿಗಳ ವಿರುದ್ಧದ ಪ್ರಕರಣಗಳನ್ನು ಸಮಾಜವಾದಿ ಪಕ್ಷ ಹಿಂಪಡೆದಿದೆ ಎಂದು ಅವರು ಆರೋಪಿಸಿದರು.
“ಉತ್ತರ ಪ್ರದೇಶಯಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದ 14 ಪ್ರಕರಣಗಳಲ್ಲಿ ಸಮಾಜವಾದಿ ಸರ್ಕಾರವು ಅನೇಕ ಭಯೋತ್ಪಾದಕರ ವಿರುದ್ಧದ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವಂತೆ ಆದೇಶಿಸಿದೆ. ಈ ಜನರು ಸ್ಫೋಟಗಳಲ್ಲಿ ತೊಡಗಿದ್ದರು ಮತ್ತು ಸಮಾಜವಾದಿ ಸರ್ಕಾರವು ಈ ಭಯೋತ್ಪಾದಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅವಕಾಶ ನೀಡಲಿಲ್ಲ”. ಅದು ಸಮಾಜವಾದಿ ಪಕ್ಷದ “ರಿಟರ್ನ್ ಗಿಫ್ಟ್” ಆಗಿತ್ತು ಎಂದಿದ್ದಾರೆ ಮೋದಿ.
ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದಿಂದ ಆಡಳಿತಾರೂಢ ಬಿಜೆಪಿಯು ಕಠಿಣ ಸವಾಲನ್ನು ಎದುರಿಸುತ್ತಿರುವ ಮೂರನೇ ಸುತ್ತಿನ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶ ಮತದಾನ ಮಾಡಿದ ದಿನದಂದು ಪ್ರಧಾನಿ ಪ್ರಚಾರ ನಡೆಸುತ್ತಿದ್ದರು.ಚುನಾವಣಾ ಫಲಿತಾಂಶಗಳು ಮಾರ್ಚ್ 10 ರಂದು ಪ್ರಕಟಗೊಳ್ಳಲಿವೆ.
ಇದನ್ನೂ ಓದಿ:ಬಿಜೆಪಿ ಹೊರತು ಇನ್ಯಾವುದೇ ಪಕ್ಷ ಸರ್ಕಾರ ರಚಿಸಿದರೂ ಜನರ ಬದುಕಲ್ಲಿ ಮೂಡದು ಬೆಳಕು: ಪ್ರಧಾನಿ ಮೋದಿ
Published On - 10:23 am, Mon, 21 February 22