Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಹೊರತು ಇನ್ಯಾವುದೇ ಪಕ್ಷ ಸರ್ಕಾರ ರಚಿಸಿದರೂ ಜನರ ಬದುಕಲ್ಲಿ ಮೂಡದು ಬೆಳಕು: ಪ್ರಧಾನಿ ಮೋದಿ

ಈ ಹಿಂದೆ ಉತ್ತರ ಪ್ರದೇಶದಲ್ಲಿ 2012ರಿಂದ 2017ರವರೆಗೆ ಸಮಾಜವಾದಿ ಪಕ್ಷ ಅಧಿಕಾರದಲ್ಲಿತ್ತು. ಕೇಂದ್ರದಲ್ಲಿ 2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಖಿಲೇಶ್ ಯಾದವ್ ಸರ್ಕಾರ ಯಾವುದಕ್ಕೂ ಸಹಕಾರ ನೀಡುತ್ತಿರಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

ಬಿಜೆಪಿ ಹೊರತು ಇನ್ಯಾವುದೇ ಪಕ್ಷ ಸರ್ಕಾರ ರಚಿಸಿದರೂ ಜನರ ಬದುಕಲ್ಲಿ ಮೂಡದು ಬೆಳಕು: ಪ್ರಧಾನಿ ಮೋದಿ
ಪ್ರಧಾನಿ ಮೋದಿ
Follow us
TV9 Web
| Updated By: Lakshmi Hegde

Updated on:Feb 20, 2022 | 6:09 PM

ಇಂದು ಉತ್ತರ ಪ್ರದೇಶದಲ್ಲಿ ಮೂರನೇ ಹಂತದ ಮತದಾನ ನಡೆಯುತ್ತಿದ್ದು, ನಾಲ್ಕನೇ ಹಂತದ ಮತದಾನಕ್ಕಾಗಿ ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಚುನಾವಣಾ ಪ್ರಚಾರ ನಡೆಸಿದರು. ಉತ್ತರ ಪ್ರದೇಶದ ಹಾರ್ಡೋಯಿಯಲ್ಲಿ ರ್ಯಾಲಿ ನಡೆಸಿದ ಅವರು, ಸಮಾಜವಾದಿ ಪಕ್ಷ, ಅಖಿಲೇಶ್​ ಯಾದವ್ ವಿರುದ್ಧ ಕಟು ವಾಗ್ದಾಲಿ ನಡೆಸಿದರು. 2008ರಲ್ಲಿ ನಡೆದ ಅಹ್ಮದಾಬಾದ್ ಸ್ಫೋಟದ 38 ಅಪರಾಧಿಗಳಿಗೆ ಗುಜರಾತ್​ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿದ್ದನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಇದೇ ಉತ್ತರ ಪ್ರದೇಶದಲ್ಲಿ ಕೂಡ ಹಲವು ಭಯೋತ್ಪಾದಕ ದಾಳಿಗಳಾಗಿವೆ. ರಾಜ್ಯದಲ್ಲಿ ವಿವಿಧೆಡೆ ಉಗ್ರರು ಬಾಂಬ್​ ಸ್ಫೋಟಿಸಿದ್ದರು. ಆದರೆ ಅವರ ವಿರುದ್ಧ ಹಿಂದಿನ ಸಮಾಜವಾದಿ ಪಕ್ಷ ವಿಚಾರಣೆಯನ್ನು ಕೂಡ ನಡೆಸಲು ಬಿಡಲಿಲ್ಲ ಎಂದು ಆರೋಪ ಮಾಡಿದರು.

2007ರಲ್ಲಿ ಲಖನೌ ಮತ್ತು ಅಯೋಧ್ಯೆಯ ಕೋರ್ಟ್​ ಆವರಣಗಳಲ್ಲಿ ಬಾಂಬ್​ ಸ್ಫೋಟಗೊಂಡಿತು. ಹೀಗೆ ಸ್ಫೋಟದ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ ಉಗ್ರ ತಾರೀಕ್​ ಕಜ್ಮಿ ಎಂಬಾತನ ವಿರುದ್ಧ ಪ್ರಕರಣಗಳನ್ನು ಎಸ್​ಪಿ ಸರ್ಕಾರ ಹಿಂಪಡೆಯಿತು. ಆದರೆ ಕೋರ್ಟ್ ಸರ್ಕಾರದ ಯೋಜನೆಯನ್ನು ಹಾಳುಮಾಡಿತು ಮತ್ತು ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಅಷ್ಟೇ ಅಲ್ಲ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್​ ನಾಯಕರು ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್​​ನನ್ನು ಲಾಡೆನ್​ ಜಿ ಎಂದು ಸಂಬೋಧಿಸಿದ್ದರು ಎಂಬುದನ್ನೂ ಪ್ರಧಾನಿ ನೆನಪಿಸಿದರು.

ಈ ಹಿಂದೆ ಉತ್ತರ ಪ್ರದೇಶದಲ್ಲಿ 2012ರಿಂದ 2017ರವರೆಗೆ ಸಮಾಜವಾದಿ ಪಕ್ಷ ಅಧಿಕಾರದಲ್ಲಿತ್ತು. ಕೇಂದ್ರದಲ್ಲಿ 2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಖಿಲೇಶ್ ಯಾದವ್ ಸರ್ಕಾರ ಯಾವುದಕ್ಕೂ ಸಹಕಾರ ನೀಡುತ್ತಿರಲಿಲ್ಲ. ಉತ್ತರ ಪ್ರದೇಶ ಅಭಿವೃದ್ಧಿ ಮಾಡುವ ಆಸೆ ಹೊತ್ತಿದ್ದ ನಮಗೆ ಈ ಪರಿವಾರವಾದಿಗಳು (ವಂಶ ರಾಜಕಾರಣ ಮಾಡುವವರು) ಸಹಾಯ ಮಾಡಲಿಲ್ಲ ಎಂದು ಹೇಳಿದ ಪ್ರಧಾನಿ ಮೋದಿ, ಮಾಫಿಯಾಗಳನ್ನು ರಕ್ಷಿಸುವವರು ಉತ್ತರ ಪ್ರದೇಶದ ಆಡಳಿತದ ಚುಕ್ಕಾಣಿ ಹಿಡಿದಿದ್ದ ಸಂದರ್ಭದಲ್ಲಿ ಭೂಕಬಳಿಕೆ ಸಾಮಾನ್ಯವಾಗಿತ್ತು. ಜನ ಸಾಮಾನ್ಯರ ಭೂಮಿಗಳನ್ನು ಇವರು ಅತಿಕ್ರಮಣ ಮಾಡಿಕೊಂಡಿದ್ದರು. ಆದರೆ ನಮ್ಮ ಡಬಲ್​ ಎಂಜಿನ್​ ಸರ್ಕಾರ ಬಂದ ಮೇಲೆ ಇದಕ್ಕೆಲ್ಲ ಫುಲ್​ ಸ್ಟಾಪ್​ ಬಿತ್ತು ಎಂದು ಹೇಳಿದರು.

ಬಿಜೆಪಿ ಹೊರತು ಇನ್ಯಾವುದೇ ಪಕ್ಷ ಉತ್ತರ ಪ್ರದೇಶದಲ್ಲಿ ಸರ್ಕಾರ ರಚನೆ ಮಾಡಿದರೂ, ಜನರ ಬದುಕಲ್ಲಿ ಬೆಳಕು ತರುವುದಿಲ್ಲ ಎಂದು ಹೇಳಿದ ಪ್ರಧಾನಿ ಮೋದಿ, ಹರ್ಡೋಯಿ ಜನರು ಎರಡು ಬಾರಿ ಹೋಳಿ ಹಬ್ಬ ಆಚರಣೆ ಮಾಡಲು ಸಿದ್ಧತೆ ನಡೆಸಿಕೊಳ್ಳಿ ಎಂದು ಕರೆ ನೀಡಿದರು. ಮೊದಲ ಬಾರಿ ಹೋಳಿ ಮಾರ್ಚ್​ 10ರಂದು. ಅಂದು ಬಿಜೆಪಿ ಗೆಲುವನ್ನು ಹೋಳಿ ಎಂದು ಸಂಭ್ರಮಿಸಬಹುದು. ಮತಗಟ್ಟೆಗಳಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಿ ಎಂದೂ ಹೇಳಿದರು.

ಇದನ್ನೂ ಓದಿ: Punjab Election 2022 ಫಿರೋಜ್‌ಪುರದಲ್ಲಿ ಬಿಜೆಪಿ-ಆಮ್ ಆದ್ಮಿ ಪಕ್ಷ ನಡುವೆ ಘರ್ಷಣೆ: ಎಎಪಿ ಕಾರ್ಯಕರ್ತನಿಗೆ ಗಾಯ

Published On - 6:09 pm, Sun, 20 February 22

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್