Punjab Election 2022 ಫಿರೋಜ್‌ಪುರದಲ್ಲಿ ಬಿಜೆಪಿ-ಆಮ್ ಆದ್ಮಿ ಪಕ್ಷ ನಡುವೆ ಘರ್ಷಣೆ: ಎಎಪಿ ಕಾರ್ಯಕರ್ತನಿಗೆ ಗಾಯ
ಬೆಂಬಲಿಗ ಸುರ್ಜಿತ್ ಸಿಂಗ್ ಮೇಲಿನ ದಾಳಿಯ ವಿರುದ್ಧ ಪ್ರತಿಭಟನೆಗೆ ನೇತೃತ್ವ ನೀಡಿದ, ಫಿರೋಜ್‌ಪುರ ಅರ್ಬನ್ ಎಎಪಿ ನಾಮನಿರ್ದೇಶಿತ ರಣಬೀರ್ ಸಿಂಗ್ ಭುಲ್ಲರ್ "ನಮ್ಮ ರಾಜಕೀಯ ಪ್ರತಿಸ್ಪರ್ಧಿಗಳು ಬೂತ್‌ಗಳನ್ನು ವಶಪಡಿಸಿಕೊಳ್ಳಲು ಬಯಸಿದ್ದರು...
ಅಮೃತಸರ: ಫಿರೋಜ್‌ಪುರ ನಗರ (Ferozepur Urban)ವಿಧಾನಸಭಾ ಕ್ಷೇತ್ರದ ಗಡಿ ಗ್ರಾಮವಾದ ಜಲ್ಲೋ ಕೀ ಎಂಬಲ್ಲಿ ಭಾನುವಾರ ಆಮ್ ಆದ್ಮಿ ಪಕ್ಷ (Aam Aadmi Party) ಮತ್ತು ಬಿಜೆಪಿ (BJP) ಬೆಂಬಲಿಗರ ನಡುವಿನ ಘರ್ಷಣೆಯಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತ ಗಾಯಗೊಂಡಿದ್ದಾರೆ. ಸ್ಥಳಕ್ಕಾಗಮಿಸಿದ ಫಿರೋಜ್‌ಪುರ ಎಸ್‌ಎಸ್‌ಪಿ ನರೇಂದ್ರ ಭಾರ್ಗವ್, ಪರಿಸ್ಥಿತಿ ವಿಪರೀತ ಮಟ್ಟಕ್ಕೆ ಹೋಗದಂತೆ ತಡೆದಿದ್ದಾರೆ. ಗ್ರಾಮದಲ್ಲಿ ಸುಮಾರು ಅರ್ಧ ಗಂಟೆ ಮತದಾನ ಸ್ಥಗಿತಗೊಂಡಿತ್ತು. ಬೆಂಬಲಿಗ ಸುರ್ಜಿತ್ ಸಿಂಗ್ ಮೇಲಿನ ದಾಳಿಯ ವಿರುದ್ಧ ಪ್ರತಿಭಟನೆಗೆ ನೇತೃತ್ವ ನೀಡಿದ, ಫಿರೋಜ್‌ಪುರ ಅರ್ಬನ್ ಎಎಪಿ ನಾಮನಿರ್ದೇಶಿತ ರಣಬೀರ್ ಸಿಂಗ್ ಭುಲ್ಲರ್ “ನಮ್ಮ ರಾಜಕೀಯ ಪ್ರತಿಸ್ಪರ್ಧಿಗಳು ಬೂತ್‌ಗಳನ್ನು ವಶಪಡಿಸಿಕೊಳ್ಳಲು ಬಯಸಿದ್ದರು ಮತ್ತು ಎಎಪಿ ಬೆಂಬಲಿಗರನ್ನು ಹೆದರಿಸಲು ಪ್ರಯತ್ನಿಸಿದರು ಎಂದಿದ್ದಾರೆ. ಜಿಲ್ಲಾಧಿಕಾರಿ ಗಿರೀಶ್ ದಯಾಳನ್ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ. “ನಮ್ಮ ಕಣ್ಗಾವಲು ತಂಡವು ಬಿಜೆಪಿ ನಾಮನಿರ್ದೇಶಿತ ರಾಣಾ ಗುರ್ಮಿತ್ ಸಿಂಗ್ ಸೋಧಿ ಅವರೊಂದಿಗಿದೆ. ಆದ್ದರಿಂದ ಎಎಪಿ ಹೊರಿಸಿದ ಆರೋಪಗಳನ್ನು ಪರಿಶೀಲಿಸಲು ತಂಡದ ವಿಡಿಯೊ ರೆಕಾರ್ಡಿಂಗ್ ಅನ್ನು ಪರಿಶೀಲಿಸಲಾಗುತ್ತದೆ. ಏನಾದರೂ ತಪ್ಪಾಗಿದ್ದರೆ, ಕಾನೂನು ತನ್ನದೇ ಆದ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ದಯಾಳನ್ ಹೇಳಿದ್ದಾರೆ. ಪಂಜಾಬ್ ಆಡಳಿತಾರೂಢ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ-ಪಿಎಲ್‌ಸಿ-ಎಸ್‌ಎಡಿ (ಸಂಯುಕ್ತ) ನಡುವೆ ಕಠಿಣ ಪೈಪೋಟಿಗೆ ಸಾಕ್ಷಿಯಾಗಿದೆ. ಕಳೆದ ವರ್ಷ ಕಾಂಗ್ರೆಸ್ ತೊರೆದ ಕ್ಯಾಪ್ಟನ್ ಅಮರಿಂದರ್ ಸಿಂಗ್, ಬಿಜೆಪಿಯೊಂದಿಗೆ ಕೈಜೋಡಿಸಿರುವ ತಮ್ಮದೇ ಪಕ್ಷವಾದ ಪಂಜಾಬ್ ಲೋಕ ಕಾಂಗ್ರೆಸ್ (PLC)ನ್ನು ರಚಿಸಿದ್ದರು.
2.14 ಕೋಟಿ ಮತದಾರರು ಇಂದು ಪಂಜಾಬ್ ವಿಧಾನಸಭಾ ಸ್ಥಾನಗಳಿಗೆ ಸ್ಪರ್ಧಿಸುತ್ತಿರುವ 1,304 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ. ಪಂಜಾಬ್‌ನಲ್ಲಿ ಒಂದೇ ಹಂತದ ಮತದಾನವು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ.
ಇದಕ್ಕೂ ಮುನ್ನ ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಖರಾರ್‌ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಅವರು ಚಮಕೌರ್ ಸಾಹಿಬ್ ಮತ್ತು ಭದೌರ್ ಕ್ಷೇತ್ರಗಳಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದಾರೆ. ಏತನ್ಮಧ್ಯೆ, ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಕ್ಯಾಪ್ಟನ್ ಅಮರಿಂದರ್ ಸಿಂಗ್, ಚನ್ನಿ ಅವರು ನಟಿಸುವಂತೆ ‘ಮಾಂತ್ರಿಕ’ ಅಲ್ಲ ಎಂದು ಹೇಳಿದರು.
“ಕೇವಲ 3 ತಿಂಗಳಲ್ಲಿ ಪಂಜಾಬ್‌ನಲ್ಲಿ ಅವರು ಮಾಡಿದ ಎಲ್ಲಾ ‘ಪವಾಡಗಳು’ ವಾಸ್ತವವಾಗಿ ಪಂಜಾಬ್ ಸಿಎಂ ಆಗಿ ನನ್ನ ಕಠಿಣ ಪರಿಶ್ರಮ” ಎಂದು ಕ್ಯಾಪ್ಟನ್ ಹೇಳಿದರು. “ಚನ್ನಿ ಮತ್ತು ನವಜೋತ್ ಸಿಂಗ್ ಸಿಧು ಇಬ್ಬರೂ ನಿಷ್ಪ್ರಯೋಜಕರು ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಪಂಜಾಬ್: ಸಂಯೋಜಿತ ಅವಳಿಗಳ ಮತದಾನದ ಗೌಪ್ಯತೆ ಖಚಿತಪಡಿಸಿಕೊಳ್ಳಲು ವಿಶೇಷ ವ್ಯವಸ್ಥೆ ಮಾಡಿದ ಚುನಾವಣಾ ಆಯೋಗ