ಪಂಜಾಬ್: ಸಂಯೋಜಿತ ಅವಳಿಗಳ ಮತದಾನದ ಗೌಪ್ಯತೆ ಖಚಿತಪಡಿಸಿಕೊಳ್ಳಲು ವಿಶೇಷ ವ್ಯವಸ್ಥೆ ಮಾಡಿದ ಚುನಾವಣಾ ಆಯೋಗ
ಚುನಾವಣಾ ಆಯೋಗವು ಅಮೃತಸರ ಮೂಲದ ಸಂಯೋಜಿತ ಅವಳಿಗಳಾದ ಸೋಹ್ನಾ ಸಿಂಗ್ ಮತ್ತು ಮೋಹ್ನಾ ಸಿಂಗ್ ಅವರಿಗೆ ವಿಶೇಷ ವ್ಯವಸ್ಥೆಗಳನ್ನು ಮಾಡಿದೆ.
ಚಂಡೀಗಢ: ಭಾನುವಾರ ಆರಂಭವಾದ ಒಂದೇ ಹಂತದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ(Punjab polls) ಮತ ಚಲಾಯಿಸುವಾಗ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು (Election Commision)ಅಮೃತಸರ ಮೂಲದ ಸಂಯೋಜಿತ ಅವಳಿಗಳಾದ ಸೋಹ್ನಾ ಸಿಂಗ್ ಮತ್ತು ಮೋಹ್ನಾ ಸಿಂಗ್ ಅವರಿಗೆ ವಿಶೇಷ ವ್ಯವಸ್ಥೆಗಳನ್ನು ಮಾಡಿದೆ. ಪಂಜಾಬ್‌ನ ಮುಖ್ಯ ಚುನಾವಣಾಧಿಕಾರಿ ಎಸ್ ಕರುಣಾ ರಾಜು ಅವರು ಸೋಹ್ನಾ ಮತ್ತು ಮೋಹ್ನಾ ಅವರನ್ನು ಪ್ರತ್ಯೇಕ ಮತದಾರರೆಂದು ಚುನಾವಣಾ ಆಯೋಗ ಪರಿಗಣಿಸಿದೆ ಮತ್ತು ಇಬ್ಬರಿಗೂ ವೈಯಕ್ತಿಕ ಮತದಾನದ ಹಕ್ಕು ನೀಡಲು ನಿರ್ಧರಿಸಿದೆ ಎಂದು ಹೇಳಿದ್ದರು. ಇದನ್ನು “ವಿಶಿಷ್ಟ ಪ್ರಕರಣ” ಎಂದು ಕರೆದಿರುವ ಚುನಾವಣಾ ಆಯೋಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಗೌರವ್ ಕುಮಾರ್ “ಮತದಾನದ ಸರಿಯಾದ ವೀಡಿಯೊಗ್ರಫಿ ಮಾಡಲು ಚುನಾವಣಾ ಆಯೋಗ ನಮಗೆ ತಿಳಿಸಿತ್ತು. ಅವರು ಅಂಗವಿಕಲ ಮತದಾರರ ಐಕಾನ್ ಗಳು. ಅವರು ಸಂಯೋಜಿತರಾಗಿದ್ದಾರೆ ಆದರೆ ಇಬ್ಬರು ಪ್ರತ್ಯೇಕ ಮತದಾರರು. ಚುನಾವಣಾಧಿಕಾರಿಯಿಂದ ವ್ಯವಸ್ಥೆ ಮಾಡಲಾಗಿತ್ತು ಮತ್ತು ಮತದಾನದ ಗೌಪ್ಯತೆಯನ್ನು ಕಾಪಾಡಲು ಅವರಿಗೆ ಸನ್‌ಗ್ಲಾಸ್‌ಗಳನ್ನು ಸಹ ನೀಡಲಾಯಿತು. ಅಮೃತಸರದ ಪಿಂಗಲ್ವಾರ ಎಂಬ ಚಾರಿಟಬಲ್ ಸೊಸೈಟಿಯಲ್ಲಿ ಬೆಳೆದ ಸೊಹ್ನಾ-ಮೊಹ್ನಾ ಅವರಿಗೆ ಎರಡು ಹೃದಯಗಳು, ಎರಡು ಜೋಡಿ ತೋಳುಗಳು, ಮೂತ್ರಪಿಂಡಗಳು ಮತ್ತು ಬೆನ್ನುಹುರಿಗಳಿವೆ, ಆದರೆ ಒಂದೇ ಯಕೃತ್ತು, ಪಿತ್ತಕೋಶ, ಪ್ಲೀಹ ಮತ್ತು ಒಂದು ಜೋಡಿ ಕಾಲುಗಳಿವೆ. ಅವರಿಗೆ ಒಂದೇ ದೇಹದಲ್ಲಿ ಎರಡು ಮೆದುಳುಗಳಿವೆ. ಅವರ ಜನನದ ಸಮಯದಲ್ಲಿ, ಸೋಹ್ನಾ ಮತ್ತು ಮೋಹ್ನಾ ದೀರ್ಘಕಾಲ ಬದುಕಬಹುದೇ ಎಂದು ವೈದ್ಯರು ಅನುಮಾನಿಸಿದರು. ಜೂನ್ 14, 2003 ರಂದು ನವದೆಹಲಿಯ ಸುಚೇತಾ ಕೃಪ್ಲಾನಿ ಆಸ್ಪತ್ರೆಯಲ್ಲಿ ಜನಿಸಿದ ಅವರನ್ನು ಹೆತ್ತವರು ಕೈಬಿಟ್ಟಿದ್ದರು. ನಂತರ ಅವರನ್ನು ಏಮ್ಸ್ ಗೆ ಸ್ಥಳಾಂತರಿಸಲಾಯಿತು, ಅಲ್ಲಿ ವೈದ್ಯರು ಅವರನ್ನು ಬೇರ್ಪಡಿಸದಿರಲು ನಿರ್ಧರಿಸಿದರು. ಅವಳಿಗಳು ಐಟಿಐ ಡಿಪ್ಲೊಮಾ (ಎಲೆಕ್ಟ್ರಿಕಲ್) ಪಡೆದಿದ್ದು, ಪ್ರಸ್ತುತ ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ನಿಯಮಿತ ಟಿ ಮೇಟ್ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಅತಿ ಹೆಚ್ಚು ಸಂಖ್ಯೆಯ ಅವಳಿ ಮಕ್ಕಳು ಹುಟ್ಟುವ ಭಾರತದ ಗ್ರಾಮ ಯಾವುದು ಗೊತ್ತಾ?! ಕುತೂಹಲಕಾರಿ ಮಾಹಿತಿ ಇಲ್ಲಿದೆ
ಇದನ್ನೂ ಓದಿ: ಅಮೃತ್ಸರದ ಸಂಯೋಜಿತ ಅವಳಿ ಸೋಹ್ನಾ ಮತ್ತು ಮೋಹ್ನಾಗೆ ಸಿಕ್ಕಿತು ಸರ್ಕಾರಿ ಕೆಲಸ