ಅಮೃತ್ಸರದ ಸಂಯೋಜಿತ ಅವಳಿ ಸೋಹ್ನಾ ಮತ್ತು ಮೋಹ್ನಾಗೆ ಸಿಕ್ಕಿತು ಸರ್ಕಾರಿ ಕೆಲಸ
ನಮಗೆ ಕೆಲಸದ ಬಗ್ಗೆ ತುಂಬಾ ಖುಷಿಯಾಗಿದೆ ಮತ್ತು ಡಿಸೆಂಬರ್ 20 ರಂದು ಸೇರಿದ್ದೇವೆ. ಅವಕಾಶಕ್ಕಾಗಿ ಪಂಜಾಬ್ ಸರ್ಕಾರ ಮತ್ತು ನಮಗೆ ಶಿಕ್ಷಣ ನೀಡಿದ ಪಿಂಗಲ್ವಾರಾ ಸಂಸ್ಥೆಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಅವರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ದೆಹಲಿ: ಅಮೃತ್ಸರದ ಸಂಯೋಜಿತ ಅವಳಿಗಳಾದ ಸೋಹ್ನಾ(Sohna) ಮತ್ತು ಮೋಹ್ನಾಗೆ (Mohna) ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (PSPCL) ನಲ್ಲಿ ಉದ್ಯೋಗ ಲಭಿಸಿದೆ. 19ರ ಹರೆಯದ ಸೋಹ್ನಾ ಡಿಸೆಂಬರ್ 20 ರಂದು ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಮೋಹ್ನಾ ಜೊತೆಗೆ PSPCL ನಲ್ಲಿ ವಿದ್ಯುತ್ ಉಪಕರಣಗಳನ್ನು ನೋಡಿಕೊಳ್ಳುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ನಮಗೆ ಕೆಲಸದ ಬಗ್ಗೆ ತುಂಬಾ ಸಂತೋಷವಾಗಿದೆ ಮತ್ತು ಡಿಸೆಂಬರ್ 20 ರಂದು ಸೇರಿದ್ದೇವೆ. ಅವಕಾಶಕ್ಕಾಗಿ ನಾವು ಪಂಜಾಬ್ ಸರ್ಕಾರ ಮತ್ತು ಪಿಂಗಲ್ವಾರಾ ಸಂಸ್ಥೆಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ,” ಎಂದು ಈ ಅವಳಿಗಳು ಹೇಳಿದ್ದಾರೆ. ಇಲ್ಲಿನ ವಿದ್ಯುತ್ ಉಪಕರಣಗಳನ್ನು ನೋಡಿಕೊಳ್ಳಲು ಸೋಹ್ನಾ, ಮೋಹ್ನಾ ನಮಗೆ ಸಹಾಯ ಮಾಡುತ್ತಾರೆ. ಸೋಹ್ನಾಗೆ ಕೆಲಸ ಸಿಕ್ಕಿತು ಮತ್ತು ಮೋಹ್ನಾ ಜೊತೆಗೆ ಸಹಾಯ ಮಾಡುತ್ತಾರೆ” ಎಂದು ಪಿಎಸ್‌ಪಿಸಿಎಲ್‌ನ ಸಬ್‌ಸ್ಟೇಷನ್ ಜೂನಿಯರ್ ಎಂಜಿನಿಯರ್ ರವೀಂದರ್ ಕುಮಾರ್ ಹೇಳಿದರು. ಈ ಕ್ಷೇತ್ರದಲ್ಲಿ ಅನುಭವವಿದ್ದ ಕಾರಣ ಅವರನ್ನು ನೇಮಿಸಿಕೊಳ್ಳಲಾಗಿದೆ ಎಂದು ಕುಮಾರ್ ಹೇಳಿದರು. ಈ ಅವಕಾಶವನ್ನು ಒದಗಿಸಿದ್ದಕ್ಕಾಗಿ ಅವಳಿಗಳು ಪಂಜಾಬ್ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು.
ನಮಗೆ ಕೆಲಸದ ಬಗ್ಗೆ ತುಂಬಾ ಖುಷಿಯಾಗಿದೆ ಮತ್ತು ಡಿಸೆಂಬರ್ 20 ರಂದು ಸೇರಿದ್ದೇವೆ. ಅವಕಾಶಕ್ಕಾಗಿ ಪಂಜಾಬ್ ಸರ್ಕಾರ ಮತ್ತು ನಮಗೆ ಶಿಕ್ಷಣ ನೀಡಿದ ಪಿಂಗಲ್ವಾರಾ ಸಂಸ್ಥೆಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಅವರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಈ ಅವಳಿಗಳು ಜೂನ್ 14, 2003 ರಂದು ನವದೆಹಲಿಯಲ್ಲಿ ಎರಡು ಹೃದಯಗಳು, ತೋಳುಗಳು, ಮೂತ್ರಪಿಂಡಗಳು ಮತ್ತು ಬೆನ್ನುಹುರಿಗಳೊಂದಿಗೆ ಜನಿಸಿದರು. ಆದರೆ ಯಕೃತ್ತು, ಪಿತ್ತಕೋಶ ಮತ್ತು ಕಾಲುಗಳು ಇಬ್ಬರಿಗೂ ಒಂದೇ. ಜನನದ ನಂತರ, ಸೋಹ್ನಾ ಮತ್ತು ಮೋಹ್ನಾ ಅವರನ್ನು ಅವರ ಪೋಷಕರು ಕೈಬಿಟ್ಟಿದ್ದು ಅವರನ್ನು ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಗೆ ಕರೆದೊಯ್ಯಲಾಯಿತು. ಶಸ್ತ್ರಚಿಕಿತ್ಸೆಯು ಮಾರಣಾಂತಿಕ ತೊಡಕುಗಳನ್ನು ಉಂಟುಮಾಡಬಹುದು ಎಂದು ಏಮ್ಸ್ ನ ವೈದ್ಯರು ಅವರನ್ನು ಬೇರ್ಪಡಿಸುವುದು ಬೇಡ ಎಂದು ನಿರ್ಧರಿಸಿದ್ದರು.
ಇದನ್ನೂ ಓದಿ: PM Modi in Varanasi ಗೋವುಗಳ ಬಗ್ಗೆ ಗೇಲಿ ಮಾಡುವವರು ಕೋಟಿಗಟ್ಟಲೆ ಜನರ ಜೀವನೋಪಾಯವೇ ಅವು ಎಂಬುದನ್ನು ಮರೆಯುತ್ತಾರೆ: ಮೋದಿ