Punjab, UP Assembly Election 2022 Voting Live Updates: ಪಂಜಾಬ್​​-ಉತ್ತರ ಪ್ರದೇಶ ಚುನಾವಣೆ; ಪಂಜಾಬ್​ನಲ್ಲಿ ಸಂಜೆ 5ಗಂಟೆವರೆಗೆ ಶೇ.63.44ರಷ್ಟು ಮತ ಚಲಾವಣೆ

TV9 Web
| Updated By: Lakshmi Hegde

Updated on:May 05, 2022 | 6:01 PM

ಉತ್ತರ ಪ್ರದೇಶದಲ್ಲಿ ಇಂದು ಮೂರನೇ ಹಂತದ ಮತದಾನ.16 ಜಿಲ್ಲೆಗಳ 59 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. 627 ಅಭ್ಯರ್ಥಿಗಳು ಕಣದಲ್ಲಿದ್ದು, 2.15 ಕೋಟಿ ಜನರು ಮತ ಹಾಕಲಿದ್ದಾರೆ.

Punjab, UP Assembly Election 2022 Voting Live Updates: ಪಂಜಾಬ್​​-ಉತ್ತರ ಪ್ರದೇಶ ಚುನಾವಣೆ; ಪಂಜಾಬ್​ನಲ್ಲಿ ಸಂಜೆ 5ಗಂಟೆವರೆಗೆ ಶೇ.63.44ರಷ್ಟು ಮತ ಚಲಾವಣೆ
ಪಂಜಾಬ್​​ನ ಜಲಂಧರ್​​ನಲ್ಲಿ ಮತದಾನಕ್ಕೆ ಕ್ಯೂ ನಿಂತಿರುವುದು

LIVE NEWS & UPDATES

  • 05 May 2022 06:01 PM (IST)

    SRH ಗೆ DC ಹುಡುಗರ ಸವಾಲು

  • 20 Feb 2022 06:18 PM (IST)

    ಉತ್ತರ ಪ್ರದೇಶದಲ್ಲಿ ಸಂಜೆ 5ಗಂಟೆ ಹೊತ್ತಿಗೆ ಶೇ.57.44ರಷ್ಟು ಮತದಾನ

    ಉತ್ತರ ಪ್ರದೇಶದಲ್ಲಿ 16 ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರನೇ ಹಂತದ ಮತದಾನ ನಡೆದಿದ್ದು, ಸಂಜೆ 5ಗಂಟೆ ಹೊತ್ತಿಗೆ 57.44ರಷ್ಟು ಮತದಾನ ಆಗಿದೆ.

  • 20 Feb 2022 06:14 PM (IST)

    ಪಂಜಾಬ್​​ನಲ್ಲಿ ಸಂಜೆ 5ಗಂಟೆವರೆಗೆ ಶೇ.63.44ರಷ್ಟು ಮತದಾನ

    ಪಂಜಾಬ್ ವಿಧಾನಸಭೆ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಒಟ್ಟು 117 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಸಂಜೆ 5ಗಂಟೆವರೆಗೆ ಶೇ.63.44ರಷ್ಟು ಮತದಾನ ಆಗಿದೆ.

  • 20 Feb 2022 05:10 PM (IST)

    ಇವಿಎಂ ದುರಸ್ತಿಗೆ ಆಗ್ರಹ

    ದೇರಾಬಸ್ಸಿ ವಿಧಾನಸಭಾ ಕ್ಷೇತ್ರದ ಬೂತ್​ ನಂಬರ್​ 292ರಲ್ಲಿ ಕಳೆದ ಒಂದು ಗಂಟೆಯಿಂದಲೂ ಇವಿಎಂ ಕೆಲಸ ಮಾಡುತ್ತಿಲ್ಲವೆಂದು ಆಮ್​ ಆದ್ಮಿ ಪಕ್ಷದ ನಾಯಕ ರಾಘವ್​ ಚಂದಾ ಆರೋಪ ಮಾಡಿದ್ದಾರೆ.

  • 20 Feb 2022 04:28 PM (IST)

    ಹಳ್ಳಿಗೆ ಹೋಗಿ ತಾಯಿಯ ಆಶೀರ್ವಾದ ಪಡೆದ ಆಪ್​ ಸಿಎಂ ಅಭ್ಯರ್ಥಿ ಭಗವಂತ್​ ಮನ್​

    ಪಂಜಾಬ್​ನಲ್ಲಿ ಆಮ್​ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್​ ಮನ್​ ಅವರು ಇಂದು ಸತುಜ್​​ನಲ್ಲಿರುವ ಹಳ್ಳಿಗೆ ಭೇಟಿ ನೀಡಿ, ತಮ್ಮ ತಾಯಿ ಹರ್ಪಲ್​ ಕೌರ್​​ ಆಶೀರ್ವಾದ ಪಡೆದರು.  ಬಳಿಕ ಮಾತನಾಡಿದ ಅವರು, ಪಂಜಾಬ್​ನಲ್ಲಿ ಮತ್ತೊಮ್ಮೆ ಕಾಂಗ್ರೆಸ್​ ಸರ್ಕಾರ ರಚನೆ ಮಾಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ಭಗವಂತ್ ಮನ್​ ತಾಯಿ, ದೇವರ ದಯೆಯಿಂದ ಎಲ್ಲರೂ ನನ್ನ ಮಗನನ್ನು ಪ್ರೀತಿಸುತ್ತಾರೆ. ನಮ್ಮ ಪಾಲಿಗೆ ಈಗಾಗಲೇ ಅವನು ಮುಖ್ಯಮಂತ್ರಿಯಾಗಿದ್ದಾನೆ ಎಂದು ಹೇಳಿದರು.

  • 20 Feb 2022 04:23 PM (IST)

    ಮಧ್ಯಾಹ್ನ 3ಗಂಟೆವರೆಗೆ ಪಂಜಾಬ್​ ಮತ್ತು ಉತ್ತರಪ್ರದೇಶದಲ್ಲಿ ಆದ ಮತದಾನವೆಷ್ಟು?

    ಪಂಜಾಬ್​ ಮತ್ತು ಉತ್ತರ ಪ್ರದೇಶದಲ್ಲಿ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 3ಗಂಟೆವರೆಗೆ ಉತ್ತರ ಪ್ರದೇಶದಲ್ಲಿ ಶೇ.48.81 ಮತ್ತು ಪಂಜಾಬ್​​ನಲ್ಲಿ ಶೇ.49.81ರಷ್ಟು ಮತ ಚಲಾವಣೆಯಾಗಿದೆ.
  • 20 Feb 2022 02:53 PM (IST)

    ಮಧ್ಯಾಹ್ನ 1 ಗಂಟೆವರೆಗೆ ಪಂಜಾಬ್​ನಲ್ಲಿ ಶೇ.34 ಮತ್ತು ಯುಪಿಯಲ್ಲಿ ಶೇ.35ರಷ್ಟು ಮತದಾನ

    ಉತ್ತರ ಪ್ರದೇಶದಲ್ಲಿ ಇಂದು ಮೂರನೇ ಹಂತದ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆ ಹೊತ್ತಿಗೆ ಶೇ.35.8ರಷ್ಟು ಮತದಾನ ಆಗಿದೆ. ಹಾಗೇ, ಪಂಜಾಬ್​ನಲ್ಲಿ ಮಧ್ಯಾಹ್ನ 1 ಗಂಟೆವರೆಗೆ ಶೇ.34.1ರಷ್ಟು ಮತದಾನ ಆಗಿದೆ.

  • 20 Feb 2022 02:37 PM (IST)

    ಇವಿಎಂನಲ್ಲಿ ಸೈಕಲ್​ ಗುರುತು ಇಲ್ಲವೆಂದು ಸಮಾಜವಾದಿ ಪಕ್ಷದಿಂದ ಚುನಾವಣಾ ಆಯೋಗಕ್ಕೆ ದೂರು

    ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಮಧ್ಯೆ ಸಮಾಜವಾದಿ ಪಕ್ಷ ಒಂದೇ ಸಮ ವಿವಿಧ ದೂರುಗಳನ್ನು ನೀಡುತ್ತಲೇ ಇದೆ. ಫರುಖಾಬಾದ್​​ನ ಅಮೃತ್​​ಪುರ ವಿಧಾನಸಭಾ ಕ್ಷೇತ್ರದ ಬೂತ್​ ನಂಬರ್​ 38ರಲ್ಲಿರುವ ಇವಿಎಂನಲ್ಲಿ ಸಮಾಜವಾದಿ ಪಕ್ಷದ ಸೈಕಲ್​ ಗುರುತು​ ಇಲ್ಲ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಹಾಗೇ, ಕಯಮ್​ಗಂಜ್​ ವಿಧಾನಸಭೆ ಕ್ಷೇತ್ರದ ಬೂತ್​ ಸಂಕ್ಯೆ 416ರಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರಿಗೆ ಮತಚಲಾಯಿಸಲು ಮತಗಟ್ಟೆ ಅಧಿಕಾರಿಗಳು ಬಿಡುತ್ತಿಲ್ಲ ಎಂದೂ ಆರೋಪ ಮಾಡಿದೆ.

  • 20 Feb 2022 02:20 PM (IST)

    ಖರಾರ್​​ನಲ್ಲಿ ಮತಚಲಾಯಿಸಿದ ಪಂಜಾಬ್​ ಸಿಎಂ ಛನ್ನಿ

    ಪಂಜಾಬ್​ ಮುಖ್ಯಮಂತ್ರಿ ಚರಣಜಿತ್​ ಸಿಂಗ್ ಛನ್ನಿಯವರು ಖರಾರ್​​ನ ಮತಗಟ್ಟೆಯೊಂದರಲ್ಲಿ ಮತಚಲಾಯಿಸಿದರು. ಛನ್ನಿ ಚಮ್ಕೌರ್​ ಸಾಹೀಬ್​ ಮತ್ತು ಭಾದೌರ್​ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

  • 20 Feb 2022 02:16 PM (IST)

    ಮೊಗಾ ಮತಗಟ್ಟೆಗೆ ಭೇಟಿ ಕೊಡದಂತೆ ನಟ ಸೋನು ಸೂದ್​ಗೆ ಚುನಾವಣಾ ಆಯೋಗದಿಂದ ನಿರ್ಬಂಧ

    ಮೊಗಾ ಜಿಲ್ಲೆಯ ಚುನಾವಣಾ ಕೇಂದ್ರಗಳಿಗೆ ಹೋಗದಂತೆ ನಟ ಸೋನು ಸೂದ್​​ಗೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ. ಮೊಗಾ ವಿಧಾನಸಭಾ ಕ್ಷೇತ್ರದಿಂದ ಸೋನು ಸೂದ್​ ಸಹೋದರಿ ಮಾಳವಿಕಾ ಸೂದ್​ ಕಾಂಗ್ರೆಸ್​​ನಿಂದ ಸ್ಪರ್ಧಿಸುತ್ತಿದ್ದಾರೆ. ಸೋನು ಸೂದ್ ಅಲ್ಲಿಗೆ ಹೋದರೆ ಮತದಾರರ ಮೇಲೆ ಪ್ರಭಾವ ಬೀರಿದಂತೆ ಆಗುತ್ತದೆ ಎಂದು ಶಿರೋಮಣಿ ಅಕಾಲಿ ದಳ್​ ದೂರು ನೀಡಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ನಿರ್ಧಾರ ಪ್ರಕಟಿಸಿದೆ.

  • 20 Feb 2022 01:04 PM (IST)

    ಅಜ್ನಾರ್​​ ಮತಗಟ್ಟೆಯೊಂದರಲ್ಲಿ ಕುಡುಕರ ಕಾಟ; ಆಪ್​ ವಕ್ತಾರನಿಂದ ಆರೋಪ

    ಅಜ್ನಾಲಾ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 59 ನ್ನು ಕೆಲವು ದುಷ್ಕರ್ಮಿಗಳು ವಶಪಡಿಸಿಕೊಂಡಿದ್ದಾರೆ. ಮದ್ಯ ಸೇವಿಸಿಕೊಂಡು ಬಂದು ಹೊರಗಡೆ ಗಲಾಟೆ ಮಾಡುತ್ತಿದ್ದಾರೆ ಎಂದು ಆಪ್​ ವಕ್ತಾರ ರಾಘವ್​ ಚಂದಾ ತಿಳಿಸಿದ್ದಾರೆ. ಅಲ್ಲದೆ, ಅಟ್ಟಾರಿ, ಸನೌರ್​​ಗಳಲ್ಲಿ ಇವಿಎಂಗಳು ಕಾರ್ಯನಿರ್ವಹಿಸುತ್ತಿಲ್ಲ. ಕೂಡಲೇ ದುರಸ್ತಿ ಮಾಡಬೇಕು ಎಂದೂ ಆಗ್ರಹಿಸಿದ್ದಾರೆ.

  • 20 Feb 2022 12:32 PM (IST)

    ಕಾನ್ಪುರದಲ್ಲಿ ಮತದಾರರಿಗೆ ಉಚಿತ ಉಪಾಹಾರ ನೀಡುತ್ತಿರುವ ಉದ್ಯಮಿ

    ಮತದಾನ ನಡೆಯುತ್ತಿರುವ ಕಾನ್ಪುರದಲ್ಲಿ ಉದ್ಯಮಿಯೊಬ್ಬರು ವಿಭಿನ್ನ ಕ್ರಮ ಕೈಗೊಂಡಿದ್ದಾರೆ. ಸಾಮಾಜಿಕ ಕಾರ್ಯಕರ್ತರೂ ಆಗಿರುವ ರಾಜೇಶ್​ ಭಲ್ಲಾ, ಯಾರೆಲ್ಲ ಬಂದು ಮತದಾನ ಮಾಡುತ್ತಿದ್ದಾರೋ ಅವರಿಗೆ ಉಚಿತವಾಗಿ ಉಪಾಹಾರ ನೀಡುತ್ತಿದ್ದಾರೆ. ಚುನಾವಣೆ ಎಂಬುದು ಒಂದು ದೊಡ್ಡ ಹಬ್ಬ. ಇಂದು ಭಾನುವಾರ ರಜೆ ಬೇರೆ ಇದೆ. ಹೀಗಾಗಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತಹಾಕಬೇಕು. ನನಗೂ ರಜೆ ಇರುವುದರಿಂದ ನಾನು ಮತದಾರರಿಗೆ ತಿಂಡಿ ಕೊಡುತ್ತಿದ್ದೇನೆ ಎಂದಿದ್ದಾರೆ.

  • 20 Feb 2022 12:28 PM (IST)

    11ಗಂಟೆವರೆಗೆ ಪಂಜಾಬ್​ನಲ್ಲಿ ಶೇ.17-ಯುಪಿಯಲ್ಲಿ ಶೇ.21ರಷ್ಟು ಮತದಾನ

    ಉತ್ತರ ಪ್ರದೇಶ ಮತ್ತು ಪಂಜಾಬ್​​ನಲ್ಲಿ ಬಿರುಸಿನಿಂದ ಮತದಾನ ನಡೆಯುತ್ತಿದ್ದು, ಬೆಳಗ್ಗೆ 11ಗಂಟೆವರೆಗೆ ಪಂಜಾಬ್​ನಲ್ಲಿ 17.77 ಮತ್ತು ಉತ್ತರ ಪ್ರದೇಶದಲ್ಲಿ ಶೇ.21.18ರಷ್ಟು ಮತದಾನವಾಗಿದೆ.

  • 20 Feb 2022 12:20 PM (IST)

    ಉತ್ತರ ಪ್ರದೇಶದ ಜನರು ಬಿಜೆಪಿಯನ್ನು ಕ್ಷಮಿಸುವುದಿಲ್ಲ: ಅಖಿಲೇಶ್ ಯಾದವ್​

    ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​ ಅವರು ಇಂದು ಜಸ್ವಂತ್​ನಗರದಲ್ಲಿ ಮತದಾನ ಮಾಡಿದರು. ಕರ್ಹಾಲ್​ ಕ್ಷೇತ್ರದ ಅಭ್ಯರ್ಥಿಯಾಗಿರುವ ಅವರು ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಇಂದು ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ಈ ಬಾರಿ ಬಿಜೆಪಿ ಉತ್ತರ ಪ್ರದೇಶದಿಂದ ಖಂಡಿತ ನಿರ್ಮೂಲನೆಯಾಗುತ್ತದೆ. ಉತ್ತರ ಪ್ರದೇಶದ ರೈತರು ಬಿಜೆಪಿ ಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದರು.

  • 20 Feb 2022 11:51 AM (IST)

    ಬಿಜೆಪಿ ಬೆಂಬಲಿಗರು ಬ್ಯಾಗ್​ ಮತ್ತು ಮೊಬೈಲ್​ ಕದ್ದಿದ್ದಾರೆ: ಎಸ್​ಪಿ ಆರೋಪ

    ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕನೊಬ್ಬನ ಬೆಂಬಲಿಗರು ಸಮಾಜವಾದಿ ಪಕ್ಷದ ಚುನಾವಣಾ ಏಜೆಂಟ್​​ಗಳ ಬ್ಯಾಗ್​ ಮತ್ತು ಮೂರು ಮೊಬೈಲ್​​ಗಳನ್ನು ಕದ್ದಿದ್ದಾರೆ ಎಂದು ಸಮಾಜವಾದಿ ಪಕ್ಷ ಆರೋಪ ಮಾಡಿದೆ. ಮರಹರಾ  ವಿಧಾನಸಭಾ ಕ್ಷೇತ್ರದ ಬೂತ್​ ನಂಬರ್​ 105 ಮತ್ತು ಇಟಾಹ್​​ನ ಬೂತ್​ ನಂಬರ್​ 331 ರಲ್ಲಿ ಈ ಘಟನೆ ನಡೆದಿದೆ. ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಸಮಾಜವಾದಿ ಪಕ್ಷ ಆಗ್ರಹ ಮಾಡಿದೆ.

  • 20 Feb 2022 10:25 AM (IST)

    ಮತ ಚಲಾಯಿಸಿದ ಕಾಂಗ್ರೆಸ್​ ಅಭ್ಯರ್ಥಿ, ಸೋನು ಸೂದ್​ ಸೋದರಿ ಮಾಳವಿಕಾ ಸೂದ್​

    ನಟ ಸೋನು ಸೂದ್​ ಸೋದರಿ, ಪಂಜಾಬ್​​ನ ಮೋಗಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಳವಿಕಾ ಸೂದ್​ ತಮ್ಮ ಮತ ಚಲಾಯಿಸಿದರು. ಬಳಿಕ ಮಾತನಾಡಿದ ಮಾಳವಿಕಾ, ನಾನು ಮೋಗಾದ ಮಗಳು. ಹಾಗೇ ಒಬ್ಬ ನಾಗರಿಕಳಾಗಿ ನನ್ನ ಮತ ಚಲಾಯಿಸಿದ್ದೇನೆ. ಮೋಗಾವನ್ನು ಅಭಿವೃದ್ಧಿಯೆಡೆಗೆ ತೆಗೆದುಕೊಂಡು ಹೋಗುವುದು ನನ್ನ ಕರ್ತವ್ಯ. ನಾನು ಮತಗಟ್ಟೆಗಳಿಗೆ ತೆರಳಿ, ಜನರನ್ನು ಭೇಟಿಯಾಗುತ್ತೇನೆ. ಅವರೂ ಸಹ ನನ್ನ ಭೇಟಿಗೆ ಕಾಯುತ್ತಿದ್ದಾರೆ ಎಂದು ಹೇಳಿದರು.

  • 20 Feb 2022 10:19 AM (IST)

    ಉತ್ತರ ಪ್ರದೇಶದಲ್ಲಿ ಶೇ.8.15 ಮತ್ತು ಪಂಜಾಬ್​​ನಲ್ಲಿ ಶೇ.4.8ರಷ್ಟು ಮತದಾನ

    ಉತ್ತರ ಪ್ರದೇಶ ಮತ್ತು ಪಂಜಾಬ್​​ನಲ್ಲಿ ಮತದಾನ ಮುಂಜಾನೆ 7ಗಂಟೆಯಿಂದ ಪ್ರಾರಂಭವಾಗಿದ್ದು, ಬೆಳಗ್ಗೆ 9ಗಂಟೆವರೆಗೆ ಉತ್ತರ ಪ್ರದೇಶದಲ್ಲಿ ಶೇ.8.15 ಮತ್ತು ಪಂಜಾಬ್​​ನಲ್ಲಿ ಶೇ.4.8 ರಷ್ಟು ಮತದಾನವಾಗಿದೆ.

  • 20 Feb 2022 10:11 AM (IST)

    ಪತಿ ಮನೆಗೆ ಹೋಗುವುದಕ್ಕೂ ಮೊದಲು ಮತದಾನ ಮಾಡಿದ ವಧು

    ಉತ್ತರಪ್ರದೇಶದ ಫಿರೋಜಾಬಾದ್​​ ವಿಧಾನಸಭಾ ಕ್ಷೇತ್ರದಲ್ಲಿ ನವವಿವಾಹಿತ ದಂಪತಿ ತಮ್ಮ ಮದುವೆಯ ಉಡುಪು, ಅಲಂಕಾರದಲ್ಲೇ ಬಂದು ಮತದಾನ ಮಾಡುವ ಮೂಲಕ ಗಮನಸೆಳೆದರು. ಇವರು ನಿನ್ನೆ ಸಂಜೆ ಮದುವೆಯಾಗಿದ್ದು, ಇಂದು ಯುವತಿ ತನ್ನ ಪತಿಯ ಮನೆಗೆ ಹೋಗುವ ಕಾರ್ಯಕ್ರಮವಿತ್ತು. ಪತಿ ಮನೆಗೆ ಹೋಗುವುದಕ್ಕೂ ಮೊದಲು ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ.

  • 20 Feb 2022 09:39 AM (IST)

    ಮತದಾನದ ಫೋಟೋ ಶೇರ್​ ಮಾಡಿಕೊಂಡ ಕಾನ್ಪುರ ಮೇಯರ್​ ವಿರುದ್ಧ ಎಫ್​ಐಆರ್​ ದಾಖಲು

    ಕಾನ್ಪುರ ಜಿಲ್ಲೆಯ ಹಡ್ಸನ್​ ಸ್ಕೂಲ್​​ನಲ್ಲಿ ಮತದಾನ ಮಾಡಿದ ತಮ್ಮ ಫೋಟೋಗಳನ್ನು ಹಂಚಿಕೊಂಡ ಕಾನ್ಪುರ ಮೇಯರ್​ ಪ್ರಮೀಳಾ ಪಾಂಡೆ ವಿರುದ್ಧ ಎಫ್​ಐಆರ್​ ದಾಖಲಾಗಿದ್ದಾಗಿ ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್​ ನೇಹಾ ಪಾಂಡೆ ತಿಳಿಸಿದ್ದಾರೆ. ಪ್ರಮೀಳಾ ಪಾಂಡೆಯವರು ತಾವು ಇವಿಎಂ ಬಟನ್​ ಪ್ರೆಸ್​ ಮಾಡಿದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಚುನಾವಣಾ ನಿಯಮ ಉಲ್ಲಂಘನೆ ಮಾಡಿದ್ದಾರೆ. ಪಾಂಡೆ ಬಿಜೆಪಿಯವರಾಗಿದ್ದು, ಅವರು ಬಿಜೆಪಿಗೇ ಮತಹಾಕಿದ್ದನ್ನು ಫೋಟೋದಲ್ಲಿ ಕಾಣಬಹುದು. ಹೀಗಾಗಿ ಎಫ್​ಐಆರ್​ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

  • 20 Feb 2022 09:26 AM (IST)

    ಪಂಜಾಬ್​​ನಲ್ಲಿ ಮತದಾನ ಮಾಡಿದ ಸಯಾಮಿ ಅವಳಿಗಳು

    ಪಂಜಾಬ್​​ನ ಅಮೃತ್​ಸರ್​​ನ ಮನಾವಾಲಾದ ಬೂತ್​ ನಂಬರ್​ 101ರಲ್ಲಿ ಸೊಹ್ನಾ ಮತ್ತು ಮೊಹ್ನಾ ಎಂಬ ಸಯಾಮಿ ಅವಳಿಗಳು ಮತದಾನ ಮಾಡಿ ಗಮನ ಸೆಳೆದರು. ಇವರು ಇದೇ ಮೊದಲ ಬಾರಿಗೆ ತಮ್ಮ ಮತ ಚಲಾಯಿಸಿದ್ದಾರೆ. ಇವರಿಬ್ಬರ ದೇಹ ಒಂದಕ್ಕೊಂದು ಹೊಂದಿಕೊಂಡಿದ್ದರೂ ಕೂಡ ಇಬ್ಬರೂ ಪ್ರತ್ಯೇಕ ಮತದಾರರಾಗಿದ್ದರಿಂದ ಇದೊಂದು ವಿಶೇಷ ಕೇಸ್​ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

  • 20 Feb 2022 09:18 AM (IST)

    ಯುಪಿಯಲ್ಲಿ ಬಿಜೆಪಿ ಫಿಕ್ಸ್​ ಎಂದ ಡೆಪ್ಯೂಟಿ ಸಿಎಂ

    ಉತ್ತರ ಪ್ರದೇಶದಲ್ಲ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಹೀಗಾಗಿ ಗೂಂಡಾಗಳಲ್ಲಿ ಈಗಾಗಲೇ ಭಯ ಶುರುವಾಗಿದೆ ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್​ ಪ್ರಸಾದ್​ ಮೌರ್ಯ ಟ್ವೀಟ್ ಮಾಡಿದ್ದಾರೆ.

  • 20 Feb 2022 09:13 AM (IST)

    ಉತ್ತರ ಪ್ರದೇಶದಲ್ಲಿ ವಿವಿಧೆಡೆ ಇವಿಎಂ ಸಮಸ್ಯೆ-ಮತದಾನ ವಿಳಂಬ

    ಕಾನ್ಪುರ ದೇಹತ್​ ಸಿಖಂದ್ರಾ ವಿಧಾನಸಭಾ ಕ್ಷೇತ್ರದ ಬೂತ್​ ನಂಬರ್​ 331ರಲ್ಲಿ ಇವಿಎಂ ಸ್ಥಗಿತಗೊಂಡಿದ್ದರಿಂದ ಮತದಾನ ನಡೆಯುತ್ತಿಲ್ಲ ಎಂದು ಸಮಾಜವಾದಿ ಪಕ್ಷ ಹೇಳಿದೆ. ಅಷ್ಟೇ ಅಲ್ಲ, ಮತದಾನ ಸರಾಗವಾಗಿ ನಡೆಯಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ, ಚುನಾವಣಾ ಆಯೋಗದ ಅಧಿಕಾರಿಗಳಿಗೆ ಮನವಿ ಮಾಡಿದೆ. ಅಕ್ಬರ್​ಪುರ ರಾನಿಯಾ ವಿಧಾನಸಭಾ ಕ್ಷೇತ್ರದ ಬೂತ್​ ನಂಬರ್​ 307ರಲ್ಲೂ ಇದೇ ಸಮಸ್ಯೆಯಾಗಿದೆ. ಅಷ್ಟೇ ಅಲ್ಲ ಕಯಮ್​ಗಂಜ್​ ವಿಧಾನಸಭೆ ಕ್ಷೇತ್ರದ ಬೂತ್​ ನಂಬರ್​ 192 ಮತ್ತು ಇತರ ಮತಗಟ್ಟೆಗಳಲ್ಲೂ ಸಮಸ್ಯೆಯಾಗಿದೆ ಎಂದು ಸಮಾಜವಾದಿ ಪಕ್ಷ ಹೇಳಿದೆ.

  • 20 Feb 2022 08:39 AM (IST)

    ಮತದಾನ ಮಾಡಿದ ಉತ್ತರ ಪ್ರದೇಶ ಕಾಂಗ್ರೆಸ್​ ನಾಯಕ ಸಲ್ಮಾನ್​ ಖುರ್ಷಿದ್ ದಂಪತಿ

    ಉತ್ತರ ಪ್ರದೇಶ ಚುನಾವಣೆಯ ಮೂರನೇ ಹಂತದ ಮತದಾನದಲ್ಲಿ ಕಾಂಗ್ರೆಸ್​ ನಾಯಕ ಸಲ್ಮಾನ್​ ಖುರ್ಷಿದ್​ ಮತ್ತು ಅವರ ಪತ್ನಿ ಲೂಯಿಸ್​ ಖುರ್ಷಿದ್​ ಮತ ಚಲಾಯಿಸಿದರು. ಲೂಯಿಸ್ ಖುರ್ಷಿದ್​ ಅವರು ಫರುಖಾಬಾದ್​​ ಸಾದರ್​​ನ ಅಭ್ಯರ್ಥಿಯಾಗಿದ್ದಾರೆ. ಮತದಾನ ಮಾಡಿದ್ದನ್ನು ನಾನು ಸಂಭ್ರಮಿಸುತ್ತಿದ್ದೇನೆ. ಎಲ್ಲೇ ಹೋಗಿ ನೋಡಿದರೂ ಮಹಿಳೆಯರು ಮತದಾನ ಮಾಡಲು ಹೆಚ್ಚೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಇದು ಸಾಧ್ಯವಾಗಿದ್ದು ಪ್ರಿಯಾಂಕಾ ಗಾಂಧಿಯವರಿಂದ ಎಂದು ಲೂಯಿಸ್​ ಹೇಳಿದರು.

  • 20 Feb 2022 08:34 AM (IST)

    ತಪ್ಪದೆ ಮತ ಚಲಾಯಿಸಲು ಕರೆ ಕೊಟ್ಟ ಪ್ರಧಾನಿ ಮೋದಿ

    ಪಂಜಾಬ್​ ಮತ್ತು ಉತ್ತರ ಪ್ರದೇಶ ಮೂರನೇ ಹಂತದ ಮತದಾನ ಶುರುವಾದ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು. ಅದರಲ್ಲೂ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವಜನರು ತಪ್ಪದೆ ಹಕ್ಕು ಚಲಾಯಿಸಿ ಎಂದು ಕರೆ ನೀಡಿದ್ದಾರೆ.

  • 20 Feb 2022 08:32 AM (IST)

    ಈ ಪಂಜಾಬ್​ ಜನರು ಎಲ್ಲವನ್ನೂ ಬಲ್ಲರು !

    ಧುರಿಯಿಂದ ಸ್ಪರ್ಧಿಸುತ್ತಿರುವ ಆಪ್​ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್​ ಮನ್​ ಅವರು ಇಂದು ಮಾತನಾಡಿ, ಪಂಜಾಬ್​ ಪಾಲಿಗೆ ಇದು ಮಹತ್ವದ ದಿನ. ಬಿಜೆಪಿ ಮತ್ತು ಕಾಂಗ್ರೆಸ್​​ಗಳು ಒಟ್ಟಾಗಿ ನನ್ನ ಮತ್ತು ನಮ್ಮ ಪಕ್ಷದ ಮೇಲೆ ಆರೋಪಗಳ ಸುರಿಮಳೆ ಸುರಿಸುತ್ತಿವೆ. ಆದರೆ ಪಂಜಾಬ್​ ಜನರಿಗೆ ಎಲ್ಲವೂ ಗೊತ್ತಿದೆ ಎಂದು  ಹೇಳಿದ್ದಾರೆ.

  • 20 Feb 2022 08:02 AM (IST)

    ಕಟಲ್​ಗಢ್​ ಸಾಹಿಬ್​ ಗುರುದ್ವಾರದಲ್ಲಿ ಪಂಜಾಬ್​ ಸಿಎಂ ಛನ್ನಿ ಪ್ರಾರ್ಥನೆ

    ಇಂದು ಮುಂಜಾನೆ ಮತದಾನ ಶುರುವಾಗುವುದಕ್ಕೂ ಮೊದಲು ಪಂಜಾಬ್​ ಮುಖ್ಯಮಂತ್ರಿ ಚರಣಜಿತ್​ ಸಿಂಗ್ ಛನ್ನಿ ಖರಾರ್‌ನಲ್ಲಿರುವ ಕಟಲ್‌ಗಢ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ದೇವರು, ಮತದಾರರ ಇಚ್ಛೆಯಂತೆ ನಡೆಯುತ್ತದೆ. ನಾವು ಎಲ್ಲ ರೀತಿಯಲ್ಲೂ ಪ್ರಯತ್ನ ಮಾಡಿದ್ದೇವೆ. ಪಂಜಾಬ್​ಗೆ ಅತ್ಯುತ್ತಮ ಆಡಳಿತ, ಸರ್ಕಾರ ಸಿಗುವಂತೆ ಮಾಡು ಎಂದು ನಾನು ಗುರು ಸಾಹೀಬ್​​ರಲ್ಲಿ ಬೇಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

  • 20 Feb 2022 07:59 AM (IST)

    7ಗಂಟೆಯಿಂದ ಮತದಾನ ಪ್ರಾರಂಭ

    ಪಂಜಾಬ್​ ಮತ್ತು ಉತ್ತರ ಪ್ರದೇಶದಲ್ಲಿ ಮುಂಜಾನೆ ಏಳುಗಂಟೆಯಿಂದಲೇ ಮತದಾನ ಪ್ರಾರಂಭವಾಗಿದೆ. ಚುನಾವಣಾ ಅಧಿಕಾರಿಗಳು ಸುಮಾರು 6.30ರಿಂದಲೇ ಮತಗಟ್ಟೆಗಳಲ್ಲಿ ಸಿದ್ಧತೆಯಲ್ಲಿ ತೊಡಗಿದ್ದರು.

  • ಇಂದು ಪಂಜಾಬ್​ ವಿಧಾನಸಭೆ ಚುನಾವಣೆ. ಹಾಗೇ, ಉತ್ತರ ಪ್ರದೇಶದಲ್ಲೂ ಮೂರನೇ ಹಂತದ ಮತದಾನ ನಡೆಯುತ್ತಿದೆ. ಪಂಜಾಬ್​​ನಲ್ಲಿ ಒಟ್ಟು 117 ವಿಧಾನಸಭಾ ಕ್ಷೇತ್ರದಿಂದ 1304 ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ಪಂಜಾಬ್​ ಸಿಎಂ  ಚರಣಜಿತ್​ ಸಿಂಗ್​ ಛನ್ನಿ, ಆಮ್​ ಆದ್ಮಿ ಪಾರ್ಟಿಯ ಭಗವಂತ್ ಮನ್, ಪಂಜಾಬ್​ ಕಾಂಗ್ರೆಸ್​ ಮುಖ್ಯಸ್ಥ ನವಜೋತ್​ ಸಿಂಗ್ ಸಿಧು, ಮಾಜಿ ಮುಖ್ಯಮಂತ್ರಿಗಳಾದ ಅಮರಿಂದರ್ ಸಿಂಗ್​, ಪ್ರಕಾಶ್​ ಸಿಂಗ್​ ಬಾದಲ್​ ಮತ್ತು  ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್​ ಸಿಂಗ್​  ಇತರರು ಇಂದು ಕಣದಲ್ಲಿದ್ದಾರೆ.

    ಉತ್ತರ ಪ್ರದೇಶದಲ್ಲಿ ಇಂದು16 ಜಿಲ್ಲೆಗಳ 59 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. 627 ಅಭ್ಯರ್ಥಿಗಳು ಕಣದಲ್ಲಿದ್ದು, 2.15 ಕೋಟಿ ಜನರು ಮತ ಹಾಕಲಿದ್ದಾರೆ. ಮುಖ್ಯವಾಗಿ ಇವತ್ತು ಹತ್ರಾಸ್​, ಫಿರೋಜಾಬಾದ್​, ಇಟಾ, ಕಸಗಂಜ್​, ಮೇನ್​​ಪುರಿ, ಫರೂಖಾಬಾದ್​, ಕನ್ನೌಜ್​, ಕರ್ಹಾಲ್​​ ಗಳಲ್ಲಿ ಇಂದು ಮತದಾನ ಇದೆ. ಕರ್ಹಾಲ್​ನಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​ ಸ್ಪರ್ಧಿಸಿದ್ದು,  ಬಿಜೆಪಿಯಿಂದ ಎಸ್​ಪಿ ಬಾಘೇಲ್​ ಪ್ರತಿಸ್ಪರ್ಧಿಯಾಗಿದ್ದಾರೆ. 

    Published On - Feb 20,2022 7:55 AM

    Follow us
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
    ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
    ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
    ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
    ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
    ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
    ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
    ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
    ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
    ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ