ಕಲಬುರಗಿ: ಕಲಬುರಗಿ ಜಿಲ್ಲೆಯ 16 ಖಾಸಗಿ ಶಾಶ್ವತ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳು ವಿದ್ಯಾರ್ಥಿಗಳ ದಾಖಲಾತಿ ಇಲ್ಲದೇ ವಿಚ್ಚಿನ್ನತೆಗೆ ಒಳ್ಳಪಟ್ಟಿರುವ ಹಿನ್ನೆಲೆಯಲ್ಲಿ ಈ ಕಾಲೇಜುಗಳ ಶೈಕ್ಷಣಿಕ ಮಾನ್ಯತೆಯನ್ನು 2021-22ನೇ ಸಾಲಿನಿಂದಲೇ ರದ್ದುಪಡಿಸಲಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಕೆಳಕಂಡ ಕಾಲೇಜುಗಳಲ್ಲಿ ದಾಖಲಾತಿಯನ್ನು ಪಡೆಯಬಾರದೆಂದು ಕಲಬುರಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶಿವಶರಣಪ್ಪ ಮುಳೇಗಾಂವ ತಿಳಿಸಿದ್ದಾರೆ.
ಮಾನ್ಯತೆ ರದ್ದುಪಡಿಸಲಾದ ಪದವಿಪೂರ್ವ ಕಾಲೇಜುಗಳ ವಿವರ ಇಂತಿದೆ:
1. ಕಲಬುರಗಿ (ಕೆಕೆ-127) ಹುಮನಾಬಾದ ರಸ್ತೆಯ ಸರ್ಕಾರಿ ಮಿಲ್ಕ ಡೈರಿ ಎದುರುಗಡೆಯಿರುವ ಟಿಪ್ಪು ಸುಲ್ತಾನ್ ಶಾಹಿದ್ ಎಜುಕೇಷನಲ್ ಟ್ರಸ್ಟ(ರಿ) ಕಾಲೇಜು
2. ಕಲಬುರಗಿಯ (ಕೆಕೆ-0180) ಸೇಡಂ ರಸ್ತೆಯ ಎಜಿಓ ಕಾಲೋನಿಯ ಓಕಳಿ ಕ್ಯಾಂಪ್ ಹತ್ತಿರದ ಚೇತನ್ ಯುಥ್ ಫೋರಂ ಸಂಯುಕ್ತ ಪದವಿ ಪೂರ್ವ ಕಾಲೇಜು
3. ಕಲಬುರಗಿಯ (ಕೆಕೆ-0331) ಮಹಮ್ಮದಿ ಸಂಯುಕ್ತ ಪದವಿ ಪೂರ್ವ ಕಾಲೇಜು
4. ಕಲಬುರಗಿಯ (ಕೆಕೆ-0300) ಪ್ರತಿಭಾ ಸ್ವತಂತ್ರ ಪದವಿ ಪೂರ್ವ ಕಾಲೇಜು
5. ಕಲಬುರಗಿ ಜಿಲ್ಲೆಯ (ಕೆಕೆ-0200) ಸೇಡಂ ತಾಲ್ಲೂಕಿನ ಮುಧೋಳದ ಕೇರ್/ಅಫ್ ಶ್ರೀ ಶ್ರೀನಿವಾಸ ನರ್ಸಿಂಗ್ ಹೋಂ
6. ಕೆ.ಜಿ.ಬಿ. ಎದುರುಗಡೆಯಿರುವ ಶ್ರೀ ಶ್ರೀನಿವಾಸ ಸ್ವತಂತ್ರ ಪದವಿ ಪೂರ್ವ ಕಾಲೇಜು
7. ಕಲಬುರಗಿ (ಕೆಕೆ-0277) ನಾಗನಹಳ್ಳಿ ರಸ್ತೆಯ ಕೋರಂಟೆ ಹನುಮಾನ ಗುಡಿ ಹತ್ತಿರದ ಪ್ಲಾಟ್ ಸಂ.04, ಸರ್ವೆ ನಂ.39/3ದಲ್ಲಿನ ವಿಶ್ವೇಶ್ವರಯ್ಯ ಪದವಿ ಪೂರ್ವ ಕಾಲೇಜು
8. ಕಲಬುರಗಿ (ಕೆಕೆ-0167) ಪ್ರಶಾಂತನಗರದಲ್ಲಿನ ಕೀರ್ತಿ ಸ್ವತಂತ್ರ ಪದವಿ ಪೂರ್ವ ಕಾಲೇಜು
9. ಕಲಬುರಗಿ (ಕೆಕೆ-0362) ಅಫಜಲಪೂರ ರಸ್ತೆಯ ಶರಣಸಿರಸಿಗಿಯಲ್ಲಿನ ಅಭಿಷೇಕ್ ಎ ಹತಗುಂದಿ ಪದವಿ ಪೂರ್ವ ಕಾಲೇಜು
10. ಕಲಬುರಗಿ (ಕೆಕೆ0140) ಖ್ವಾಜಾ ಕಾಲೋನಿಯಲ್ಲಿನ ಟೈನಿಪರ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜು
11. ಕಲಬುರಗಿ (ಕೆಕೆ-0275) ಎಸ್.ಟಿ.ಬಿ.ಟಿ. ರಸ್ತೆಯ ಹೊಸ ಬಸ್ ನಿಲ್ದಾಣದ ಹತ್ತಿರದ ಎಸ್.ವಿ. ಪಟೇಲ್ ಚಂದನ ಪ್ರಿಂಟರ್ ಕಟ್ಟಡದಲ್ಲಿನ ಶ್ರೀ ಸಾಯಿ ಪದವಿ ಪೂರ್ವ ಕಾಲೇಜು
12. ಕಲಬುರಗಿ (ಕೆಕೆ-0186) ಸ್ಟೇಷನ್ ರಸ್ತೆಯಲ್ಲಿರುವ 1-174 ಆನಗರಕ್ ಬಿಲ್ಡಿಂಗ್‍ದಲ್ಲಿರುವ ಶ್ರೀ ಪದ್ಮಾವತಿ ಸ್ವತಂತ್ರ ಪದವಿ ಪೂರ್ವ ಕಾಲೇಜು
13. ಕಲಬುರಗಿ ಜಿಲ್ಲೆಯ (ಕೆಕೆ-0289) ಚಿಂಚೋಳಿ ತಾಲೂಕಿನ ವಿದ್ಯಾನಿಧಿ ಪರಿಸರ (ದೇವಡಿ) ಶ್ರೀ ವೆಂಕಟೇಶ್ವರ ರಸ್ತೆಯ ಶ್ರೀಮತಿ ಕಾವೇರಿಬಾಯಿ ಬಿ ಜೋಷಿ ಸರಣಾಂತ ವಿದ್ಯಾನಿಧಿ ಜ್ಞಾನಮಂದಿರ ಸ್ವತಂತ್ರ ಪದವಿ ಪೂರ್ವ ಕಾಲೇಜು
13. ಕಲಬುರಗಿ (ಕೆಕೆ-0228) ಸ್ಟೇಷನ್ ರಸ್ತೆಯ ಸಿದ್ದಿಖ್ ಅಹಮ್ಮದ್ ಮುಜದ್ದದಿ (ಎಸ್.ಎ.ಎಂ) ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜು
15. ಕಲಬುರಗಿಯ (ಕೆಕೆ-0203) ವಿಶ್ವವಿದ್ಯಾನಿಲಯ ರಸ್ತೆಯ ವಿರೇಂದ್ರ ಪಾಟೀಲ್ ಎಕ್ಸಟೆನ್ಷನ್ ಜಿ.ಡಿ.ಎ ಕಾಲೋನಿಯಲ್ಲಿನ ಆಶಾಜ್ಯೋತಿ ಸಂಯುಕ್ತ ವಿಜ್ಞಾನ ಪದವಿ ಪೂರ್ವ ಕಾಲೇಜು
15. ಕಲಬುರಗಿಯ (ಕೆಕೆ-0241) ಶಹಾಬಜಾರ ಆಳಂದ ರಸ್ತೆಯ ಶೆಟ್ಟಿ ಎನ್‍ಕ್ಲೇವ್ ಶ್ರೀ ಶಟ್ಟಿ ಸಂಗಪ್ಪ ಮೆಮೋರಿಯಲ್ ಪದವಿ ಪೂರ್ವ ಕಾಲೇಜು
16. ಕಲಬುರಗಿ(ಕೆಕೆ-0156) ಪ್ರಶಾಂತನಗರದ ಸರಸ್ವತಿ ವಿದ್ಯಾಮಂದಿರ ಕಲಾ ವಾಣಿಜ್ಯ ಮತ್ತು ವಿಜ್ಞಾನ ಸ್ವತಂತ್ರ ಪದವಿ ಪೂರ್ವ ಕಾಲೇಜು.