ಕಲಬುರಗಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ (Karnataka-Mharashtra border dispute) ಶುರುವಾದ ಬೆನ್ನಲ್ಲೇ ಮಾಹಾರಾಷ್ಟ್ರದ ಜತ್ (Jatta) ತಾಲೂಕಿನ ಸಂಖ, ತಿಕ್ಕುಂಡಿ ಗ್ರಾಮದ ಕನ್ನಡಿಗರು ನಮಗೆ ಕುಡಿಯುವ ನೀರು ಕೊಡಿ ಇಲ್ಲವಾದರೇ ನಮಗೆ ಕರ್ನಾಟಕಕ್ಕೆ ಹೋಗಲು ಅನುಮತಿ ನೀಡಿ ಎಂದು ಕನ್ನಡ ಬಾವುಟ ಹಾರಿಸಿದರು. ಇದಾದ ಬಳಿಕ ಈಗ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಇಲ್ಲವೇ ಕರ್ನಾಟಕಕ್ಕೆ ನಮ್ಮನ್ನೇ ಸೇರಿಸಿ ಅಂತ ಸೊಲ್ಲಾಪುರ (Sollapur) ಜಿಲ್ಲೆಯ ಅಕ್ಕಲಕೋಟ ತಾಲೂಕಿನ 28 ಗ್ರಾಮದ ಕನ್ನಡಿಗರು ಮನವಿ ಮಾಡಿದ್ದಾರೆ.
ಆಳಗೆ, ಶೇಗಾಂವ, ಕಲ್ಲಕರ್ಜಾಳ, ಧಾರಸಂಗ, ಕೆಗಾಂವ, ದೇವಿಕವಟಾ, ಶಾವಳ, ಹಿಳ್ಳಿ, ಅಂದೇವಾಡಿ, ಪಾನ್ ಮಂಗರುಳ ಮತ್ತು ಕೋರ್ಸೆಗಾಂವ 11 ಗ್ರಾಮ ಪಂಚಾಯತ್ನ 28 ಗ್ರಾಮದ ಜನರು ಸೊಲ್ಲಾಪುರದ ಜಿಲ್ಲಾಧಿಕಾರಿಗೆ ಠರಾವು ಪ್ರತಿಯನ್ನು ನೀಡಿದ್ದಾರೆ.
ಇದನ್ನೂ ಓದಿ: ಮಾಹಾರಾಷ್ಟ್ರ ಸಚಿವರು-ಸಂಸದ ಬೆಳಗಾವಿ ಎಂಟ್ರಿಗೆ ಬ್ರೇಕ್, ನಿಷೇಧಾಜ್ಞೆ ಜಾರಿಗೊಳಿಸಿದ ಡಿಸಿ
ನಮಗೆ ನೀರು ಕೊಡಿ ಇಲ್ಲವಾದರೇ ಕರ್ನಾಟಕಕ್ಕೆ ಹೋಗುತ್ತೇವೆ ಎಂದ ಜತ್ ಜನರು
ಕಳೆದ ಕೆಲವು ದಿನಗಳ ಹಿಂದೆ ಜತ್ ತಾಲೂಕಿನ ಜನರು ನಮಗೆ ನೀರು ಕೊಡಿ ಇಲ್ಲವಾದರೆ ಕರ್ನಾಟಕಕ್ಕೆ ಹೋಗುತ್ತೇವೆಂದು ತಾಲೂಕಿನ ಉಮದಿ ಗ್ರಾಮದ ಜನ ಆಕ್ರೋಶ ಹೊರ ಹಾಕಿದ್ದರು. ಜತ್ ತಾಲೂಕು ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಜತ್ ತಾಲೂಕಿನ 42 ಹಳ್ಳಿಗಳ ಜನರು ಉಮದಿ ಗ್ರಾಮದಲ್ಲಿ ಸಭೆ ಸೇರಿದ್ದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.
ಮಹಾರಾಷ್ಟ್ರದ ಗಡಿನಾಡ ಕನ್ನಡಿಗರ ಮನವೊಲಿಸಲು ಮುಂದಾದ “ಮಹಾ” ಸಚಿವರು
ವಿಜಯಪುರ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಬುಗಿಲೇಳುತ್ತಿದ್ದಂತೆ, ಮಹಾರಾಷ್ಟ್ರದ ಗಡಿ ಅಂಚಿನಲ್ಲಿರುವ ಕನ್ನಡಿಗರು ಕರ್ನಾಟಕಕ್ಕೆ ಸೇರುತ್ತೇವೆ ಎಂದು ಇಂಗಿತ ವ್ಯಕ್ತಪಡಿಸಿದ್ದರು. ಇದಾದ ಬೆನ್ನಲ್ಲೇ ಕರ್ನಾಟಕದಿಂದ, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿಗೆ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಮೂಲಕ ನೀರು ಹರಿ ಬಿಡಲಾಯ್ತು. ಇದು ಮಹಾರಾಷ್ಟ್ರ ಸರ್ಕಾರಕ್ಕೆ ಕಸಿ ವಿಸಿ ಉಂಟು ಮಾಡಿತ್ತು. ಹೀಗಾಗಿ ಇಂದು (ಡಿ. 5) ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಜತ್ ತಾಲೂಕಿನ ತಿಕ್ಕುಂಡಿ ಗ್ರಾಮಕ್ಕೆ ಮಹಾರಾಷ್ಟ್ರದ ಉದ್ಯೋಗ ಮಂತ್ರಿ ಉದಯ್ ಸಾವಂತ್ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಕೆಗೆ ಮುಂದಾಗಿದರು.
ದಿಢೀರ್ ಭೇಟಿ ನೀಡಿದ ಮಹಾರಾಷ್ಟ್ರ ಸಚಿವರು ಮತ್ತು ಅಧಿಕಾರಿಗಳು, ಗ್ರಾಮದ ಹಿರಿಯರು, ಕನ್ನಡ ಪರ ಸಂಘಟನೆಗಳ ಮುಖಂಡರು, ಯುವಕರೊಂದಿಗೆ ಚರ್ಚೆ ನಡೆಸಿ ಗ್ರಾಮದ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.
ಕರ್ನಾಟಕಕ್ಕೆ ಹೋಗಲು ಅನುಮತಿ ಕೊಡಿ
ಉದ್ಯೋಗ ಮಂತ್ರಿ ಉದಯ್ ಸಾವಂತ್ ಜತ್ ತಾಲೂಕಿನ ಸಂಖ, ತಿಕ್ಕುಂಡಿ ಗ್ರಾಮದ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಈ ವೇಳೆ ಸಚಿವರ ಸಮ್ಮುಖದಲ್ಲಿ ನಮ್ಮ ಬೇಡಿಕೆ ಈಡೇರಿದಿದ್ದರೆ ನಮಗೆ ಕರ್ನಾಟಕಕ್ಕೆ ಹೋಗಲು ಅನುಮತಿ ಕೊಡಿ ಎಂದು ಕನ್ನಡಿಗರು ಒತ್ತಾಯಿಸಿದರು. ಈ ವೇಳೆ ಕರ್ನಾಟಕದ ಮಾಜಿ ಜಲ ಸಂಪನ್ಮೂಲ ಸಚಿವ ಎಂ ಬಿ ಪಾಟೀಲರನ್ನು ಹಾಡಿ ಹೊಗಳಿದರು. ಹಾಗೇ ಕರ್ನಾಟಕ ಸರ್ಕಾರದ ಬಗ್ಗೆಯೂ ಹೊಗಳಿದರು. ಇದು ಸಚಿವ ಸಾವಂತ್ಗೆ ಇರುಸು ಮುರಿಸು ಉಂಟಾಯಿತುಯ/
ಕನ್ನಡ ಧ್ವಜಾರೋಹಣ
ಇನ್ನೂ ಗಡಿನಾಡಿನ ಕನ್ನಡಿಗರು ಇತ್ತೀಚೆಗೆ ಗ್ರಾಮದಲ್ಲಿ ಕನ್ನಡ ಧ್ವಜಾರೋಹಣ ಮಾಡಿದ್ದರು. ತಿಕ್ಕುಂಡಿ ಗ್ರಾಮದ ದ್ವಾರ ಬಾಗಿಲು ಮೇಲೆ ಕನ್ನಡದ ಬಾವುಟ ಹಾರಿಸಿದ್ದರು. ಅಲ್ಲದೇ ಗ್ರಾಮಸ್ಥರು ಸಿಎಂ ಬೊಮ್ಮಾಯಿ ಭಾವಚಿತ್ರದ ಬ್ಯಾನರ್ ಹಾಕಿದ್ದರು.
ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ