ಕಲಬುರಗಿಯಲ್ಲಿ ನಡೆದ ಎರಡು ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಪಾತ್ರವಿದೆ: ಎನ್ ರವಿಕುಮಾರ್

| Updated By: Rakesh Nayak Manchi

Updated on: Oct 22, 2023 | 8:50 PM

ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆತ್ಮಹತ್ಯೆ ಪ್ರಕರಣ ಸಂಬಂಧ ಶಿವಕುಮಾರ್ ಮನೆಗೆ ಬಿಜೆಪಿ ಎಂಎಲ್​ಸಿ ಎನ್​.ರವಿಕುಮಾರ್ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, ಕಲಬುರಗಿಯಲ್ಲಿ ಎರಡು ಕಡೆ ಆತ್ಮಹತ್ಯೆ ಆಗಿದ್ದು ಎರಡು ಕಡೆ ಕಾಂಗ್ರೆಸ್ ನಾಯಕರ ಪಾತ್ರವಿದೆ ಎಂದು ಆರೋಪಿಸಿದರು.

ಕಲಬುರಗಿಯಲ್ಲಿ ನಡೆದ ಎರಡು ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಪಾತ್ರವಿದೆ: ಎನ್ ರವಿಕುಮಾರ್
ಎನ್​ ರವಿಕುಮಾರ್
Follow us on

ಕಲಬುರಗಿ, ಅ.22: ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆತ್ಮಹತ್ಯೆ ಪ್ರಕರಣ ಸಂಬಂಧ ಶಿವಕುಮಾರ್ ಮನೆಗೆ ಬಿಜೆಪಿ ಎಂಎಲ್​ಸಿ ಎನ್​.ರವಿಕುಮಾರ್ (N.Ravikumar) ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, ಕಲಬುರಗಿಯಲ್ಲಿ (Kalaburagi) ಎರಡು ಕಡೆ ಆತ್ಮಹತ್ಯೆ ಆಗಿದ್ದು ಎರಡು ಕಡೆ ಕಾಂಗ್ರೆಸ್ ನಾಯಕರ ಪಾತ್ರವಿದೆ ಎಂದು ಆರೋಪಿಸಿದರು.

ಕಲಗುರ್ತಿಯಲ್ಲಿ ದೇವಾನಂದ ಹಾಗೂ ಶಿರೋಳಿಯಲ್ಲಿ ಶಿವಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿರೋಳಿಯಲ್ಲಿ ಸಾವಿಗೂ ಮುನ್ನ ಶರಣಪ್ರಕಾಶ್ ಪಾಟೀಲ್ ಕಾರಣ ಅಂತಾ ಹೇಳಿದ್ದಾನೆ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂಬುದನ್ನು ಶಿವಕುಮಾರ್ ಆತ್ಮಹತ್ಯೆಗೆ ಮುನ್ನ ಹೇಳಿದ್ದಾನೆ ಎಂದರು.

ಇದನ್ನೂ ಓದಿ: ಕಲಬುರಗಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಪ್ರಕರಣದ ತನಿಖೆ ಸಿಐಡಿಗೆ, ಮೃತನ ತಾಯಿ ಹೇಳಿದ್ದೇನು?

ಕಾಂಗ್ರೆಸ್​ನ ಒಂದು ದೊಡ್ಡ ಗುಂಪು ಇವರ ಸಾವಿಗೆ ಕಾರಣ. ಸಾವಿನ ಬಳಿಕ ಕಾಂಗ್ರೆಸ್ ಮುಖಂಡ ಜಗದೀಶ್ ಹಾಗೂ ಇತರರು ಶವ ಯಾಕೆ ಇಳಿಸಿದ್ದು? ಶಿವಕುಮಾರ್ ಮೊಬೈಲ್ ಯಾಕೆ ಸಿಗುತ್ತಿಲ್ಲ? ಮೃತ ಸ್ಥಳದಿಂದ ಬೇರೆ ಕಡೆ ಶವವನ್ನು ಯಾಕೆ ಕೈ ಮುಖಂಡರು ಸ್ಥಳಾಂತರ ಮಾಡಿದರು ಎಂದು ಪ್ರಶ್ನಿಸಿದರು.

ಎಲ್ಲಾ ಕೆಲಸ‌ ಮುಗಿದ‌ ಮೇಲೆ ಪೊಲೀಸರಿಗೆ ಬರಲು ಹೇಳಿದ್ದಾರೆ. ಪೊಲೀಸರು ಶವದ ಪಂಚನಾಮೇ ಯಾಕೆ ಮಾಡಿಲ್ಲಾ? ಪೊಲೀಸರು ಕಾಂಗ್ರೆಸ್ ಏಜೆಂಟರಾ? ಕುಟುಂಬಸ್ಥರಿಗೆ ನೀಜ ಹೇಳಬಾರದು ಅಂತಾ ಕುಟುಂಬಸ್ಥರಿಗೆ ಜೀವ ಬೆದರಿಕೆಯಿದೆ ಎಂದು ಆರೋಪಿಸಿದರು.

ಶಿವಕುಮಾರ್ ಬಿಜೆಪಿ ಹಾಗೂ ಹಿಂದು ಕಾರ್ಯಕರ್ತನಾಗಿದ್ದನು. ಚುನಾವಣೆ ಬಳಿಕ ದ್ವೇಷದ ರಾಜಕಾರಣ‌ ಕಾಂಗ್ರೆಸ್ ಮಾಡುತ್ತಿದೆ. ಕೂಡಲೇ ಸಿಬಿಐಗೆ ಪ್ರಕರಣ ನೀಡಬೇಕು. ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ