ಜಾತ್ರೆಯಲ್ಲಿ ಸಿಡಿಮದ್ದು ಸ್ಫೋಟ 15 ಜನರಿಗೆ ಗಾಯ; 8 ಮಂದಿ ಗಂಭೀರ

| Updated By: ವಿವೇಕ ಬಿರಾದಾರ

Updated on: Oct 21, 2022 | 3:05 PM

ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದ ಮರಗಮ್ಮದೇವಿ ಜಾತ್ರೆಯಲ್ಲಿ ಸಿಡಿಮದ್ದು ಸ್ಫೋಟಗೊಂಡು 15 ಜನರಿಗೆ ಗಾಯವಾಗಿದ್ದು, 8ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ.

ಜಾತ್ರೆಯಲ್ಲಿ ಸಿಡಿಮದ್ದು ಸ್ಫೋಟ 15 ಜನರಿಗೆ ಗಾಯ; 8 ಮಂದಿ ಗಂಭೀರ
ಜಾತ್ರೆಯಲ್ಲಿ ಸಿಡಿಮದ್ದು ಸ್ಫೋಟಗೊಂಡು 15 ಜನರಿಗೆ ಗಾಯ
Follow us on

ಕಲಬುರಗಿ: ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದ ಮರಗಮ್ಮದೇವಿ ಜಾತ್ರೆಯಲ್ಲಿ ಸಿಡಿಮದ್ದು ಸ್ಫೋಟಗೊಂಡು 15 ಜನರಿಗೆ ಗಾಯವಾಗಿದ್ದು, 8ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊನ್ನಕಿರಣಗಿ ಗ್ರಾಮದಲ್ಲಿ ಇಂದು (ಅ. 21) ಮರಗಮ್ಮದೇವಿ ಮೂರ್ತಿ ಪ್ರತಿಷ್ಠಾಪನೆ ಮಹೋತ್ಸವ ಇತ್ತು. ಈ ಹಿನ್ನೆಲೆ ಗ್ರಾಮಸ್ಥರು ಮದ್ದು ಹಾರಿಸುವವರನ್ನು ಕರೆಸಿದ್ದರು. ಮದ್ದು ಹಾರಿಸುತ್ತಿರುವ ವೇಳೆ ಮೇಲೆ ಹಾರಿಸಿದ್ದ ಮದ್ದು, ಕೆಳಗೆ ಬಿದ್ದಿದೆ. ಪರಿಣಾಮ ಅಲ್ಲೆ ಇದ್ದ ಬೇರೆ ಸಿಡಿಮದ್ದುಗಳಿಗು ಬೆಂಕಿ ತಗುಲಿ ಸ್ಪೋಟಗೊಂಡಿವೆ. ಇದರಿಂದ 2 ರಿಂದ 3 ಮಕ್ಕಳು ಸೇರಿ 15 ಜನರಿಗೆ ಗಾಯಗಳಾಗಿವೆ. ಫರಹತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:44 pm, Fri, 21 October 22