ಮಕ್ಕಳನ್ನು ನೋಡಿ ಕಣ್ಣೀರು ಹಾಕಿದ ದಿವ್ಯಾ ಹಾಗರಗಿ; 21 ದಿನದಲ್ಲಿ ಧರ್ಮಸ್ಥಳ ಸೇರಿ ಮಂಗಳೂರು ಕಡೆ ಸುತ್ತಾಡಿದ್ದ ಮಂಜುನಾಥ ಮೇಳಕುಂದಿ
ಕಾಣೆಯಾಗಿದ್ದ ಕಿಂಗ್ಪಿನ್ ಮಂಜುನಾಥ ಮೇಳಕುಂದಿ (Manjunath Melakundi) ನಿನ್ನೆ ಆಟೋದಲ್ಲಿ ಬಂದು ಸಿಐಡಿ ಮುಂದೆ ಶರಣಾಗಿದ್ದಾನೆ. 21 ದಿನ ಹತ್ತಾರು ಕಡೆ ಓಡಾಡಿದ್ದಾನೆ. ಯಾವುದೇ ಊರಲ್ಲಿ 2 ದಿನಕ್ಕಿಂತ ಹೆಚ್ಚಾಗಿ ಇರುತ್ತಿರಲಿಲ್ಲ.
ಕಲಬುರಗಿ: ಪಿಎಸ್ಐ ನೇಮಕಾತಿಯಲ್ಲಿ (PSI Recruitment) ನಡೆದ ಅಕ್ರಮ ಆರೋಪದ ಮೇಲೆ ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ (Divya Hagaragi) ಈಗಾಗಲೇ ಬಂಧನಕ್ಕೆ ಒಳಗಾಗಿದ್ದಾಳೆ. ಸಿಐಡಿ ವಶದಲ್ಲಿರುವ ದಿವ್ಯಾ ತನ್ನ ಮಕ್ಕಳನ್ನು ನೀಡಿ ಕಣ್ಣೀರು ಹಾಕಿದ್ದಾಳೆ. ಮಕ್ಕಳು ಕೂಡಾ ತಾಯಿಯನ್ನು ಕಂಡು ಕಣ್ಣೀರು ಹಾಕಿದ್ದಾರೆ. ನಿನ್ನಿಂದಲೇ ಎಲ್ಲಾ ಆಗಿದ್ದು, ನಿನ್ನಿಂದ ಅಪ್ಪ ಕೂಡಾ ಜೈಲಿಗೆ ಹೋಗುವಂತಾಯಿತು. ನಾನು ಎಲ್ಲಾ ಟಿವಿಯಲ್ಲಿ ನೋಡಿದ್ದೇನೆ ಅಂತ ತಾಯಿಗೆ ಹಾಗರಗಿ ಪುತ್ರ ಹೇಳಿದ್ದಾನೆ. ಮಗನ ಈ ಮಾತಿಗೆ ದಿವ್ಯಾ ಹಾಗರಗಿ ಕಣ್ಣೀರು ಹಾಕಿದ್ದಾಳೆ. ಮಕ್ಕಳು ನಿನ್ನೆ ದಿವ್ಯಾ ಹಾಗರಗಿಯನ್ನು ಭೇಟಿ ಮಾಡಲು ಸಿಐಡಿ ಕಚೇರಿಗೆ ಬಂದಿದ್ದರು.
21 ದಿನ ಹತ್ತಾರು ಕಡೆ ಓಡಾಡಿರುವ ಮಂಜುನಾಥ ಮೇಳಕುಂದಿ: ಕಾಣೆಯಾಗಿದ್ದ ಕಿಂಗ್ಪಿನ್ ಮಂಜುನಾಥ ಮೇಳಕುಂದಿ (Manjunath Melakundi) ನಿನ್ನೆ ಆಟೋದಲ್ಲಿ ಬಂದು ಸಿಐಡಿ ಮುಂದೆ ಶರಣಾಗಿದ್ದಾನೆ. 21 ದಿನ ಹತ್ತಾರು ಕಡೆ ಓಡಾಡಿದ್ದಾನೆ. ಯಾವುದೇ ಊರಲ್ಲಿ 2 ದಿನಕ್ಕಿಂತ ಹೆಚ್ಚಾಗಿ ಇರುತ್ತಿರಲಿಲ್ಲ. ಧರ್ಮಸ್ಥಳ ಸೇರಿದಂತೆ ಅನೇಕ ದೇವಾಲಯಗಳಿಗೆ ಭೇಟಿ ನೀಡಿದ್ದಾನೆ. ಕಲಬುರಗಿಯಿಂದ ಬೆಂಗಳೂರು, ಬೆಂಗಳೂರಿನಿಂದ ಮಂಗಳೂರು, ಮಂಗಳೂರಿನಿಂದ ಕಾರವಾರ, ಆಂಧ್ರ ಸೇರಿದಂತೆ ಹಲವೆಡೆ ಅಲೆದು ಬಂದಿದ್ದಾನೆ.
ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ಊರೂರು ಅಲೆದಿದ್ದ. ಕಲಬುರಗಿ ನೀರಾವರಿ ಇಲಾಖೆಯಲ್ಲಿ ಎಇ ಆಗಿರುವ ಮೇಳಕುಂದಿ, ಅಂತಿಮವಾಗಿ ತಾನಾಗಿಯೇ ಸಿಐಡಿ ಮುಂದೆ ಶರಣಾಗಿದ್ದಾನೆ.
ಮಗ ತಪ್ಪು ಮಾಡಿದರೆ ಅನುಭವಿಸಲಿ; ಮಂಜುನಾಥ್ ತಂದೆ ಮಾತು: ಕಿಂಗ್ಪಿನ್ ಮಂಜುನಾಥ ಮೇಳಕುಂದಿ ತಂದೆ ನಿವೃತ್ತ ಎಎಸ್ಐ. ಮಂಜುನಾಥ್ ನಾಪತ್ತೆಯಾಗಿದ್ದ ಸಂದರ್ಭದಲ್ಲಿ ಮಂಜುನಾಥ್ ತಂದೆಯನ್ನ ಕರೆಯಿ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ತನ್ನ ಮಗ ಅಕ್ರಮ ಎಸಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಅಂತ ಮಂಜುನಾಥ ತಂದೆ ಹೇಳಿದ್ದರು. ನನ್ನ ಮಗ ತಪ್ಪು ಮಾಡಿದ್ದರೆ ಶಿಕ್ಷ ಅನುಭವಿಸಲಿ ಅಂತಾ ಹೇಳಿದ್ದರು. ಕೊನೆಗೆ ಕರ್ನಾಟಕ ಪೊಲೀಸ್ ಬಗ್ಗೆ ಒಳ್ಳೆಯ ಮಾತು ಹೇಳಿ ಸಿಐಡಿ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆದಿದ್ದರು. ಸೆಲ್ಯೂಟ್ ಹೊಡೆದು ಜೈ ಕರ್ನಾಟಕ ಪೊಲೀಸ್ ಅಂತಾ ಹೇಳಿದ್ದರು. ನಿನ್ನೆ ಮಂಜುನಾಥ ಶರಣಾದ ಎನ್ನುವ ಸುದ್ದಿ ಕೇಳಿದಾಗ ಮಂಜುನಾಥ ತಂದೆ ಮನೆಯಲ್ಲಿ ಚಪ್ಪಾಳೆ ತಟ್ಟಿದ್ದರು. ಸಿಐಡಿ ಅಧಿಕಾರಿಗಳು ಸರಿಯಾಗಿ ತನಿಖೆ ಮಾಡುತ್ತಿದ್ದಾರೆ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಫ್ರೀಡಂಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ: ಮರು ಪರೀಕ್ಷೆ ವಿರೋಧಿಸಿ ಆಯ್ಕೆಪಟ್ಟಿಯಲ್ಲಿರುವವರು ಇಂದು ಧರಣಿ ನಡೆಸುತ್ತಾರೆ. ಫ್ರೀಡಂಪಾರ್ಕ್‌ನಲ್ಲಿ ಅಭ್ಯರ್ಥಿಗಳು ಉಪವಾಸ ಸತ್ಯಾಗ್ರಹ ಮಾಡುತ್ತಾರೆ. ಇಂದು ಬೆಳಗ್ಗೆ 11 ಗಂಟೆಯಿಂದ ಉಪವಾಸ ಸತ್ಯಾಗ್ರಹ ಆರಂಭವಾಗುತ್ತದೆ. ಮಾಜಿ ಸಿಎಂಗಳಾದ ಹೆಚ್ ಡಿಕುಮಾರಸ್ವಾಮಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಾಗಿಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ
ಬಾಚಣಿಗೆಯಿಂದ ಹಲ್ಲು ಕೆರೆದುಕೊಂಡ ಅಕ್ಷಯ್ ಕುಮಾರ್; ಇದು ಗುಟ್ಕಾ ಎಫೆಕ್ಟ್ ಎಂದ ನೆಟ್ಟಿಗರು
ಹಿರಿಯ ನಟ ಧರ್ಮೇಂದ್ರ ಆಸ್ಪತ್ರೆಗೆ ದಾಖಲು; ಹೇಗಿದೆ ಅವರ ಆರೋಗ್ಯ ಪರಿಸ್ಥಿತಿ?
Published On - 7:51 am, Mon, 2 May 22