ಚೇಳು ಕಚ್ಚಿ ಬಾಲಕಿ ಸಾವು, ತಾಲೂಕು ಆಸ್ಪತ್ರೆ ಎದುರು ಪ್ರತಿಭಟನೆ

|

Updated on: Mar 02, 2020 | 3:02 PM

ಕಲಬುರಗಿ: ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ಪೋಷಕರು ಆರೋಪಿಸಿ ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಧರಣಿ ನಡೆಸಿದ್ದಾರೆ. ಫೆಬ್ರವರಿ 26ರಂದು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ರಂಜೋಳ ಗ್ರಾಮದ ನಿವಾಸಿ ಐಶ್ವರ್ಯ ಮಲ್ಲಪ್ಪ (11) ಚೇಳು ಕಚ್ಚಿದೆ ಎಂದು ಸೇಡಂ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದಳು. ಕೆಲ ದಿನಗಳ ನಂತರ ಕಲಬುರಗಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಕಳೆದ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ. ಹೀಗಾಗಿ ಸೇಡಂ ಆಸ್ಪತ್ರೆಗೆ ದಾಖಲಾದಾಗ ಸೂಕ್ತ […]

ಚೇಳು ಕಚ್ಚಿ ಬಾಲಕಿ ಸಾವು, ತಾಲೂಕು ಆಸ್ಪತ್ರೆ ಎದುರು ಪ್ರತಿಭಟನೆ
Follow us on

ಕಲಬುರಗಿ: ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ಪೋಷಕರು ಆರೋಪಿಸಿ ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಧರಣಿ ನಡೆಸಿದ್ದಾರೆ.

ಫೆಬ್ರವರಿ 26ರಂದು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ರಂಜೋಳ ಗ್ರಾಮದ ನಿವಾಸಿ ಐಶ್ವರ್ಯ ಮಲ್ಲಪ್ಪ (11) ಚೇಳು ಕಚ್ಚಿದೆ ಎಂದು ಸೇಡಂ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದಳು. ಕೆಲ ದಿನಗಳ ನಂತರ ಕಲಬುರಗಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಕಳೆದ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ. ಹೀಗಾಗಿ ಸೇಡಂ ಆಸ್ಪತ್ರೆಗೆ ದಾಖಲಾದಾಗ ಸೂಕ್ತ ಸ್ಪಂಧನೆ ಇಲ್ಲದೆ ವಿಳಂಬ ಆರೋಪಿಸಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಹೆತ್ತವರು ಆಕ್ರೋಶ ಹೊರ ಹಾಕಿದ್ರು.

ಆಂಬುಲೆನ್ಸ್ ಇದ್ದರೂ ಶೀಘ್ರವೆ ಹೆಚ್ಚಿನ ಚಿಕಿತ್ಸೆಗೆ ಕಲುಬುರಗಿಗೆ ಕಳಿಸಿಲ್ಲಾ ಅಂತ ಆರೋಪಿಸಿ ಪಾಲಕರು ಮತ್ತು ಸ್ಥಳೀಯರು ಸೇಡಂ ತಾಲೂಕು ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದ್ದು, ಸಾವಿಗೆ ಕಾರಣರಾದ ವೈದ್ಯರನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ. ನಂತರ ತಪ್ಪಿತಸ್ಥ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲೂಕು ವೈದ್ಯಾಧಿಕಾರಿಯಿಂದ ಭರವಸೆ ಸಿಕ್ಕ ನಂತರ ಹೆತ್ತವರು ಪ್ರತಿಭಟನೆ ಕೈ ಬಿಟ್ಟಿದ್ದಾರೆ.