ಕಲಬುರಗಿ ಬಹಮನಿ ಕೋಟೆಯಲ್ಲಿ ಸೋಮೇಶ್ವರ ದೇಗುಲದ ಕುರುಹು ವಿಚಾರ; ಟಿವಿ9ಗೆ ಮಾಹಿತಿ ನೀಡಿದ ಇತಿಹಾಸ ಪ್ರಾಧ್ಯಾಪಕ

| Updated By: sandhya thejappa

Updated on: May 24, 2022 | 1:50 PM

ಪುರಾತತ್ತ್ವ ಇಲಾಖೆ ಪುನರುಜ್ಜೀವನ ಮಾಡುವ ವೇಳೆ ಕೆಡವಿದ್ದರು. ಒಂದು ಮಂಟಪ ಮಾತ್ರ ಪುನರುಜ್ಜೀವನ ಮಾಡಲಾಯಿತು. ಅನೇಕ ಕಂಬಗಳು ಚೆಲ್ಲಾಪಿಲ್ಲಿಯಾಗಿ ಕೋಟೆಯಲ್ಲಿ ಬೇರೆ ಕಡೆ ಬಿದ್ದಿವೆ. ಶಿವ, ಪಾರ್ವತಿ, ಗಣಪತಿ ನಂದಿ ಮೇಲೆ ಕುಳಿತಿರುವ ಶಿಲ್ಪ ಇದೆ.

ಕಲಬುರಗಿ ಬಹಮನಿ ಕೋಟೆಯಲ್ಲಿ ಸೋಮೇಶ್ವರ ದೇಗುಲದ ಕುರುಹು ವಿಚಾರ; ಟಿವಿ9ಗೆ ಮಾಹಿತಿ ನೀಡಿದ ಇತಿಹಾಸ ಪ್ರಾಧ್ಯಾಪಕ
ಬಹಮನಿ ಕೋಟೆಯಲ್ಲಿ ಸೋಮೇಶ್ವರ ದೇಗುಲದ ಕುರುಹು ಪತ್ತೆಯಾಗಿದೆ
Follow us on

ಕಲಬುರಗಿ: ಬಹಮನಿ ಕೋಟೆಯಲ್ಲಿ (Bahmani kote) ಸೋಮೇಶ್ವರ ದೇಗುಲದ (Someshwara Temple) ಕುರುಹು ಇರುವ ವಿಚಾರಕ್ಕೆ ಸಂಬಂಧಿಸಿ ಸರ್ಕಾರಿ ಮಹಾವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಡಾ.ಶಂಭುಲಿಂಗ ವಾಣಿ ಟಿವಿ9ಗೆ ಕೆಲ ಮಾಹಿತಿ ನೀಡಿದ್ದಾರೆ. ಕಲಬುರಗಿ ಕೋಟೆ ನಿರ್ಮಿಸಿದ್ದು ವಾರಂಗಲ್ನ ರಾಜ ಗುಲಚಂದ. ಬಹಮನಿ ಸುಲ್ತಾನರು ಕೇವಲ ಕೋಟೆಯನ್ನು ಅಭಿವೃದ್ಧಿ ಮಾಡಿದ್ದರು. ಕಲಬುರಗಿ ಕೋಟೆಯ 4 ಕಡೆ ದೇವಾಲಯದ ಅವಶೇಷಗಳಿವೆ. ಕಲ್ಯಾಣಿ ಚಾಲುಕ್ಯರ ಕಾಲದ ವಾಸ್ತುಶೈಲಿಯ ಕಂಬಗಳು ಇವೆ. ಬಹಮನಿ ಕೋಟೆಯ ಆಗ್ನೇಯ ದಿಕ್ಕಿನಲ್ಲಿ ಎರಡು ಮಂಟಪಗಳಿವೆ ಎಂದು ತಿಳಿಸಿದ್ದಾರೆ.

ಪುರಾತತ್ತ್ವ ಇಲಾಖೆ ಪುನರುಜ್ಜೀವನ ಮಾಡುವ ವೇಳೆ ಕೆಡವಿದ್ದರು. ಒಂದು ಮಂಟಪ ಮಾತ್ರ ಪುನರುಜ್ಜೀವನ ಮಾಡಲಾಯಿತು. ಅನೇಕ ಕಂಬಗಳು ಚೆಲ್ಲಾಪಿಲ್ಲಿಯಾಗಿ ಕೋಟೆಯಲ್ಲಿ ಬೇರೆ ಕಡೆ ಬಿದ್ದಿವೆ. ಶಿವ, ಪಾರ್ವತಿ, ಗಣಪತಿ ನಂದಿ ಮೇಲೆ ಕುಳಿತಿರುವ ಶಿಲ್ಪ ಇದೆ. ಜಾಮಿಯಾ ಮಸೀದಿ ಮುಂಭಾಗದಲ್ಲಿ ಕಂಕಾ ಅನ್ನೋ ಕಟ್ಟಡವಿದೆ. ಅದನ್ನು ಕೂಡ ಪುನರ್ ನಿರ್ಮಾಣ ಮಾಡಲಾಗಿತ್ತು. ಪುನರ್ ನಿರ್ಮಾಣಕ್ಕೆ ದೇವಸ್ಥಾನದ ಕಂಬ ಉಪಯೋಗಿಸಲಾಗಿದೆ. ಕಲ್ಯಾಣಿ ಚಾಲುಕ್ಯರ ವಾಸ್ತುಶೈಲಿ ಹೊಂದಿರುವ ಕಂಬಗಳು ಇವೆ. 280 ಐತಿಹಾಸಿಕ ದೇವಾಲಯಗಳು ಲಭ್ಯವಾಗಿವೆ. ಭೂ ಉತ್ಖನನ ಮಾಡಿದರೆ ಅನೇಕ ದೇವಸ್ಥಾನದ ಅವಶೇಷ ಸಿಗುತ್ತವೆ ಎಂದು ಇತಿಹಾಸ ಪ್ರಾಧ್ಯಾಪಕ ಶಂಭುಲಿಂಗ ವಾಣಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಲಾರಿ, ಖಾಸಗಿ ಬಸ್ ಅಪಘಾತ; ಸಂತಾಪ ಸೂಚಿಸಿದ ಹೆಚ್​ಡಿಕೆ

ಇದನ್ನೂ ಓದಿ
Yogaraj Bhat: ಶಿವಣ್ಣ- ಪ್ರಭುದೇವ ಕಾಂಬಿನೇಷನ್​ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿರುವ ಯೋಗರಾಜ್ ಭಟ್; ಚಿತ್ರೀಕರಣ ಯಾವಾಗ?
ಹುಬ್ಬಳ್ಳಿಯಲ್ಲಿ ಲಾರಿ, ಖಾಸಗಿ ಬಸ್ ಅಪಘಾತ; ಸಂತಾಪ ಸೂಚಿಸಿದ ಹೆಚ್​ಡಿಕೆ
NHAI Recruitment 2022: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ: ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?

ಪ್ರಕರಣವೇನು?
ರಾಜ್ಯದಲ್ಲಿ ಸದ್ಯ ಮಸೀದಿ- ದೇಗುಲಗಳ ವಿವಾದ ಭುಗಿಲೇಳುತ್ತಿದೆ. ಕಲಬುರಗಿಯ ಬಹಮನಿ ಕೋಟೆಯಲ್ಲಿ ಸೋಮೇಶ್ವರ ದೇಗುಲದ ಕುರುಹು ಇದೆ ಅಂತ ಹೇಳಲಾಗುತ್ತಿದ್ದು, ಪೂಜಾದಿಗಳಿಗೆ ಅವಕಾಶ ನೀಡಬೇಕೆಂದು ಒತ್ತಾಯ ಕೇಳಿಬಂದಿದೆ. ಜಾಮಾ ಮಸೀದಿ ಹಿಂಭಾಗ ಸೋಮೇಶ್ವರ ದೇಗುಲ ಇರುವುದು ಪತ್ತೆಯಾಗಿದೆ. ಹೀಗಾಗಿ ಹಿಂದೂ ಸಂಘಟನೆಗಳು ಜಿಲ್ಲಾಡಳಿತದ ಗಮನ ಸೆಳೆಯಲು ಪ್ರತಿಭಟನೆಗೆ ಇಳಿದಿವೆ.

ಟವಿ9 ವರದಿ ಬಳಿಕ ಎಚ್ಚೆತ್ತ ಪುರಾತತ್ವ ಇಲಾಖೆಯ ಅಧಿಕಾರಿಗಳು:
ಬಹಮನಿ ಕೋಟೆಯಲ್ಲಿ ಸೋಮೇಶ್ವರ ದೇವಸ್ಥಾನ ಇರುವ ಬಗ್ಗೆ ನಿನ್ನೆ ಟಿವಿ9 ವಿಸ್ತೃತ ವರದಿ ಪ್ರಸಾರ ಮಾಡಿತ್ತು. ದೇವಸ್ಥಾನ ಪಾಳು ಬಿದ್ದಿದ್ದು, ಅಲ್ಲಿಗೆ ಹೋಗಲಿಕ್ಕೂ ಕೂಡಾ ಆಗದಂತಹ ಸ್ಥಿತಿ ಇತ್ತು. ನಿನ್ನೆ ಟಿವಿ9 ನಲ್ಲಿ ವರದಿ ಪ್ರಸಾರವಾದ ನಂತರ  ಪುರಾತತ್ವ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಇಂದದು ಸಿಬ್ಬಂದಿಯಿಂದ ಸ್ವಚ್ಚತಾ ಕಾರ್ಯ ಆರಂಭವಾಗಿದೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:28 am, Tue, 24 May 22