ಕಲಬುರಗಿ: ಚರಂಡಿಯಲ್ಲಿ ಪಲ್ಟಿಯಾದ ಮರಳು ತುಂಬಿದ್ದ ಟಿಪ್ಪರ್; ಬಾಲಕ ಸೇರಿ ಇಬ್ಬರ ಸಾವು

ಮನೆ ನಿರ್ಮಾಣ ಕೆಲಸಕ್ಕೆ ಮರಳು ತಂದಿದ್ದ ಟಿಪ್ಪರ್​ ಅನ್​ಲೋಡ್​ ಮಾಡುವಾಗ ಪಲ್ಟಿಯಾಗಿ, ಟಿಪ್ಪರ್​ನಡಿ ಸಿಲುಕಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಕಲಬುರಗಿ: ಚರಂಡಿಯಲ್ಲಿ ಪಲ್ಟಿಯಾದ ಮರಳು ತುಂಬಿದ್ದ ಟಿಪ್ಪರ್; ಬಾಲಕ ಸೇರಿ ಇಬ್ಬರ ಸಾವು
ಮರಳು ತುಂಬಿದ ಟಿಪ್ಪರ್​ ಪಲ್ಟಿ, ಇಬ್ಬರು ಸಾವು
Updated By: ಕಿರಣ್ ಹನುಮಂತ್​ ಮಾದಾರ್

Updated on: Feb 09, 2023 | 8:06 AM

ಕಲಬುರಗಿ: ನಿನ್ನೆ ರಾತ್ರಿ ಮನೆ ನಿರ್ಮಾಣ ಕೆಲಸಕ್ಕೆ ಮರಳು ತಂದಿದ್ದ ಟಿಪ್ಪರ್ ಮರಳನ್ನ ಅನಲೋಡ್ ಮಾಡುವಾಗ ಚರಂಡಿಯಲ್ಲಿ ಪಲ್ಟಿಯಾಗಿ ಟಿಪ್ಪರ್ ನಡಿ ಸಿಲುಕಿ ಬಾಲಕ ಸೇರಿ ಇಬ್ಬರ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ. ವಾಡಿ ಪಟ್ಟಣದ ಕಲಕಂಬ್ ಬಡಾವಣೆಯಲ್ಲಿ ಕಳೆದ ರಾತ್ರಿ ಈ ದುರ್ಘಟನೆ ನಡೆದಿದ್ದು, ಮುಕಂದ್ (12) ಹಾಗೂ ಮಹಮ್ಮದ್ ಸಲೀಂ(66) ಸಾವಿಗೀಡಾಗಿದ್ದಾರೆ.

ಇನ್ನೋವಾ ಕಾರಿಗೆ ಹಿಂಬದಿಯಿಂದ ಗುದ್ದಿದ ಟಿಪ್ಪರ್ ಲಾರಿ; ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರು

ಬೆಂಗಳೂರು: ನಗರದ ಮಾಗಡಿ ರಸ್ತೆಯ ಲಕ್ಷ್ಮಿ ಆಸ್ಪತ್ರೆ ಮುಂಭಾಗದಲ್ಲಿ ಇನ್ನೋವಾ ಕಾರಿಗೆ ಹಿಂಬದಿಯಿಂದ ಬಂದ ಟಿಪ್ಪರ್ ಲಾರಿ ಗುದ್ದಿದೆ. ಟಿಪ್ಪರ್ ಲಾರಿ ಗುದ್ದಿದ್ದ ರಭಸಕ್ಕೆ ಲೈಟ್ ಕಂಬಕ್ಕೆ ಇನ್ನೋವಾ ಕಾರ್​ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಬಚಾವಾಗಿದ್ದು, ಕಾರಿನಲ್ಲಿದ್ದ ಮೂವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೈಕ್-ಆ್ಯಂಬುಲೆನ್ಸ್ ನಡುವೆ ಭೀಕರ ಅಪಘಾತ, ಬೈಕ್​ ಸವಾರ ದಾರುಣ ಸಾವು

ಕೊಡಗು: ಬೈಕ್-ಆ್ಯಂಬುಲೆನ್ಸ್ ನಡುವೆ ಭೀಕರ ಅಪಘಾತವಾಗಿದ್ದು, ಬೈಕ್ ಸವಾರ ಲೋಕೇಶ್ (44) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆ ಮಡಿಕೇರಿ ತಾಲೂಕಿನ ಕತ್ತಲೆಕಾಡು ಬಳಿ‌ ನಡೆದಿದೆ. ಮೃತ ಲೋಕೇಶ್ ಮಡಿಕೇರಿಯಿಂದ ಚೆಟ್ಟಳಿಗೆ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕೂಡಲೇ ಆತನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಆದರೆ ಮಾರ್ಗ ಮಧ್ಯೆಯೇ ಅಸುನೀಗಿದ್ದಾನೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ