ಕಲಬುರಗಿ, ಫೆ.14: ಕಲಬುರಗಿ ಕೇಂದ್ರೀಯ ವಿಶ್ವ ವಿದ್ಯಾಲಯದ(Kalaburagi central university)ಗ್ರಂಥಾಲಯದಲ್ಲಿ ವಿದ್ಯಾರ್ಥಿಯೊಬ್ಬ ಸರಸ್ವತಿ ಪೂಜೆಗೆ ವಿರೋಧ ಮಾಡಿದ ಘಟನೆ ನಡೆದಿದೆ. ವಸಂತ ಪಂಚಮಿ ಹಿನ್ನಲೆ ಗ್ರಂಥಾಲಯದಲ್ಲಿರುವ ಸರಸ್ವತಿ ಮೂರ್ತಿಗೆ ಇಂದು(ಫೆ.14) ಪೂಜೆ ಸಲ್ಲಿಕೆಗೆ ತಯಾರು ಮಾಡಲಾಗಿತ್ತು. ಅದರಂತೆ ವಿವಿಯ ಸಿಬ್ಬಂದಿಗಳು ಪೂಜೆ ಸಲ್ಲಿಸಿದರು. ಆಗ ಮಧ್ಯಪ್ರವೇಶಿಸಿದ ಸಂಶೋಧನಾ ವಿದ್ಯಾರ್ಥಿ ನಂದಕುಮಾರ್ ಎಂಬಾತ ಇದಕ್ಕೆ ಅಡ್ಡಿಪಡಿಸಿದ್ದಾನೆ.
ಈ ವೇಳೆ ಮಾತನಾಡಿದ ವಿದ್ಯಾರ್ಥಿ ನಂದಕುಮಾರ್, ‘ಇದೇನೂ ದೇವಸ್ಥಾನವೋ, ವಿಶ್ವವಿದ್ಯಾಲಯವೋ ಎಂದು ವಿದ್ಯಾ ದೇವತೆ ಸರಸ್ವತಿ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ್ದಾನೆ. ವಿದ್ಯಾದೇವತೆ ಸರಸ್ವತಿಯ ಮೂರ್ತಿಗೆ ಪೂಜೆಗೆ ಅಡ್ಡಿ ಪಡಿಸಿರುವ ಎಡಪಂಥಿಯ ವಿಚಾರ ಧಾರೆಯ ವಿದ್ಯಾರ್ಥಿ ನಂದಕುಮಾರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿದ್ಯಾರ್ಥಿ ಪೂಜೆಗೆ ಅಡ್ಡಿಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಶೋಧನಾ ವಿದ್ಯಾರ್ಥಿ ನಂದಕುಮಾರ ನಡೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದಲ್ಲದೇ, ಈ ಕುರಿತು ಪರ ವಿರೋಧ ಚರ್ಚೆ ಶುರುವಾಗಿದೆ.
ಇದನ್ನೂ ಓದಿ:ಹಿಂದೂ, ಜೈನ ಸಮುದಾಯದ ಹೆಣ್ಣುಮಕ್ಕಳಿಗೆ ಹಿಜಾಬ್ ಧರಿಸುವಂತೆ ಒತ್ತಾಯಿಸುವಂತಿಲ್ಲ: ಮಧ್ಯಪ್ರದೇಶ ಹೈಕೋರ್ಟ್
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅಪ್ಡೇಟ್ ಆಗುತ್ತಿದೆ…