ಕಲಬುರಗಿ, ಜನವರಿ 18: ನಗರದ ಮಾಲಗತ್ತಿ ರಸ್ತೆಯಲ್ಲಿರುವ ಮೌಲಾನಾ ಅಬ್ದುಲ್ ಆಂಗ್ಲ ಮಾಧ್ಯಮ ಶಾಲಾ ಮಕ್ಕಳಿಂದ (students) ಶೌಚಾಲಯ ಮತ್ತು ಮುಖ್ಯ ಶಿಕ್ಷಕಿ ಮನೆಗೆಲಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶಾಲಾ ಮಕ್ಕಳು ಕೆಲಸ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಮೆಂಟ್, ಮರಳನ್ನು ಮಿಕ್ಸ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಕಳೆದೊಂದು ವರ್ಷದಿಂದ ವಿದ್ಯಾರ್ಥಿಗಳನ್ನ ಮನೆಗೆಲಸಕ್ಕೆ ಮತ್ತು ಶಾಲೆ ಶೌಚಾಲಯ ಸ್ವಚ್ಛತೆಗೆ ಮುಖ್ಯ ಶಿಕ್ಷಕಿ ಬಳಸಿಕೊಂಡಿದ್ದಾರೆ. ಈ ಬಗ್ಗೆ ರೋಜಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಶಾಲೆಯ ಮುಖ್ಯಶಿಕ್ಷಕಿ ಜೋಹರ ಜಬೀನ್, ವಿದ್ಯಾರ್ಥಿಗಳನ್ನ ವಾರಕ್ಕೊಮ್ಮೆ ಶಾಲೆಯ ಶೌಚಾಲಯ ಸ್ವಚ್ಛ ಮಾಡಿಸುತ್ತಾರೆಂಬ ಆರೋಪ ಕೇಳಿ ಬಂದಿತ್ತು. ಶಾಲೆಯಲ್ಲಿ ಡಿ ಗ್ರೂಪ್ ಸಿಬ್ಬಂದಿಗಳ ಕೊರತೆ ನೆಪವೊಡ್ಡಿ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಚ ಮಾಡಿಸುತ್ತಿದ್ದರಂತೆ. ಅಲ್ಲದೇ ಎರಡು ದಿನಕ್ಕೊಮ್ಮೆ ವಿದ್ಯಾರ್ಥಿಗಳನ್ನ ತಮ್ಮ ನಿವಾಸಕ್ಕೆ ಕರೆದುಕೊಂಡು ಹೋಗುವ ಜೋಹರ ಜಬೀನ್ ಮೇಡಂ ಮನೆಗೆಲಸ ಮಾಡಿಸುತ್ತಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿ: ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣ, ಮುಖ್ಯ ಶಿಕ್ಷಕಿ ವಿರುದ್ಧ ಎಫ್‌ಐಆರ್
ಮೌಲಾನಾ ಆಜಾದ್ ಮಾದರಿಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳೆದ ಒಂದು ವರ್ಷದಿಂದ ವಿದ್ಯಾರ್ಥಿಗಳನ್ನ ಶಾಲೆಯ ಶೌಚಾಲಯ ಸ್ವಚ್ಛ ಮಾಡುವ ಕೆಲಸಕ್ಕೆ ಮತ್ತು ತರಗತಿ ಮುಗಿದನಂತರ ಮನೆಗೆ ಕರೆದುಕೊಂಡು ಹೋಗಿ ಗಾರ್ಡನ್ ಸ್ವಚ್ಛ ಹಾಗೂ ಮನೆಗೆಲಸಗಳನ್ನ ಮಾಡಿಸಿಕೊಳ್ಳುತ್ತಿದ್ದರಂತೆ. ಈ ಬಗ್ಗೆ ವಿದ್ಯಾರ್ಥಿಗಳು ಸಾಕಷ್ಟು ಬಾರಿ ಪೋಷಕರ ಬಳಿ ಹೇಳಿಕೊಂಡಿದ್ದರಂತೆ. ಆದರೆ ಹೋಗಲಿ ಬಿಡು. ಎಷ್ಟೇ ಆದರೂ ಶಿಕ್ಷಕರು ಅಲ್ವ ಅಂತಾ ಪೋಷಕರು ಸಹ ಸೈಲೆಂಟ್ ಆಗಿದ್ದರು.
ಶೌಚಾಲಯ ಸ್ವಚ್ಛಗೊಳಿಸುತ್ತಿರುವುದಕ್ಕೆ ಪೋಷಕರು ಸಿಡಿದೆದ್ದಿದ್ದಾರೆ. ಈ ಬಗ್ಗೆ ಮುಖ್ಯ ಶಿಕ್ಷಕಿ ಜೋಹರ ಜಬೀನ್ ವಿರುದ್ಧ ಪೋಷಕರು ನಗರದ ರೋಜಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೋಷಕರ ದೂರಿನ ಅನ್ವಯ ಶಾಲಾ ಮುಖ್ಯ ಶಿಕ್ಷಕಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ: ಕಲಬುರಗಿ: ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛ, ಪ್ರಾಂಶುಪಾಲರ ಮನೆಗೆಲಸ ಮಾಡಿಸಿದ ಆರೋಪ
ಪೋಷಕರು ನೀಡಿರುವ ದೂರಿನ ಅನ್ವಯ ರೋಜಾ ಪೊಲೀಸ್ ಠಾಣೆಯಲ್ಲಿ ಮುಖ್ಯ ಶಿಕ್ಷಕಿ ಜೋಹರ ಜಬೀನ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ತನಿಖೆ ನಂತರವಷ್ಟೇ ನಿಜವಾಗಿಯೂ ವಿದ್ಯಾರ್ಥಿಗಳನ್ನ ಶೌಚಾಲಯ ಸ್ವಚ್ಛ ಹಾಗೂ ಮನೆಗೆಲಸಕ್ಕೆ ಬಳಸಿಕೊಳ್ಳುತ್ತಿದ್ರ ಅಥವಾ ಇಲ್ವ ಅನ್ನೊದು ತಿಳಿಯಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.