ಕಲಬುರಗಿಯಿಂದ ಕೊಲ್ಹಾಪುರದವರೆಗೂ ರೈಲು: ಸಚಿವ ಪ್ರಲ್ಹಾದ್ ಜೋಶಿಯಿಂದ ಹಸಿರು ನಿಶಾನೆ, ಯಾವೆಲ್ಲಾ ತೀರ್ಥಯಾತ್ರೆ ಮಾಡಬಹುದು, ಇಲ್ಲಿದೆ ವಿವರ

| Updated By: ಸಾಧು ಶ್ರೀನಾಥ್​

Updated on: Sep 16, 2022 | 9:11 PM

Kalaburagi to Kolhapur Train: ರೈಲು ಮಾರ್ಗ ವಿಸ್ತರಣೆಯಿಂದ ಗಾಣಗಾಪುರದ ದತ್ತಾತ್ರೇಯ, ಫಂಡರಾಪುರದ ವಿಠ್ಠಲ, ಕೊಲ್ಹಾಪುರದ ಮಹಾಲಕ್ಷ್ಮೀ ದೇವಾಲಯಗಳಿಗೆ ತೆರಳುವ ಭಕ್ತರಿಗೆ ಸಹಾಯಕವಾಗಲಿದೆ. ಧಾರ್ಮಿಕ ಸ್ಥಳಗಳನ್ನು ಸಂಪರ್ಕಿಸುವ ನೇರ ರೈಲಿಗೆ ಬೇಡಿಕೆ ಇಟ್ಟಿದ್ದ ಜನರಿಗೆ ಕೊನೆಗೂ ಕೇಂದ್ರ ಸರ್ಕಾರ ಸ್ಪಂದಿಸಿದೆ.

ಕಲಬುರಗಿಯಿಂದ ಕೊಲ್ಹಾಪುರದವರೆಗೂ ರೈಲು: ಸಚಿವ ಪ್ರಲ್ಹಾದ್ ಜೋಶಿಯಿಂದ ಹಸಿರು ನಿಶಾನೆ, ಯಾವೆಲ್ಲಾ ತೀರ್ಥಯಾತ್ರೆ ಮಾಡಬಹುದು, ಇಲ್ಲಿದೆ ವಿವರ
ಕಲಬುರಗಿ - ಕೊಲ್ಹಾಪುರ ರೈಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
Follow us on

ಕಲಬುರಗಿ-ಕೊಲ್ಹಾಪುರ ರೈಲು ಸಂಚಾರಕ್ಕೆ (Kalaburagi to Kolhapur Train) ಇಂದು ಶುಕ್ರವಾರ ಹಸಿರು ನಿಶಾನೆ ತೋರಿಸಲಾಯಿತು. ಕಲಬುರಗಿ ರೈಲ್ವೇ ನಿಲ್ದಾಣದಲ್ಲಿ ( Kalburagi Railway Station) ಇಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಈ ಮೂಲಕ ಕಲಬುರಗಿ ಕೊಲ್ಹಾಪುರ ಮಾರ್ಗದ ರೈಲು ಸಂಚಾರಕ್ಕೆ ಚಾಲನೆ ನೀಡಿದರು.‌ ಇಲ್ಲಿಯ ವರೆಗೆ ಸೊಲ್ಹಾಪುರ-ಮೀರಜ್ ನಡುವೆ ಮಾತ್ರ ಸಂಚಾರ ನಡೆಸುತ್ತಿದ್ದ ಎಕ್ಸ್‌ಪ್ರೆಸ್‌ ರೈಲನ್ನು ಕೊಲ್ಹಾಪುರದ ವರೆಗೂ ವಿಸ್ತರಣೆ ಮಾಡಲಾಗಿದೆ. ಕಲಬುರಗಿ – ಕೊಲ್ಹಾಪುರ ರೈಲು ಸಂಚಾರಕ್ಕೆ ಜನರು ಹೆಚ್ಚಿನ ಬೇಡಿಕೆ ಇಟ್ಟಿದ್ದರು. ಸಂಸದ ಉಮೇಶ್ ಜಾಧವ್ (Umesh Jadhav) ಕೇಂದ್ರ ಸರ್ಕಾರಕ್ಕೆ ಈ ಕುರಿತಂತೆ ಮನವಿ ಮಾಡಿದ್ದರು.

ರೈಲು ಸಂಚಾರದ ವೇಳಾಪಟ್ಟಿ ಹೀಗಿದೆ:

ಕಲಬುರಗಿ-ಕೊಲ್ಹಾಪುರ ನಡುವೆ ಸಂಚರಿಸಲಿರುವ ರೈಲು, ಕಲಬುರಗಿ ನಗರದಿಂದ ಪ್ರತಿದಿನ ಮುಂಜಾನೆ 6.40ಕ್ಕೆ ಪ್ರಯಾಣ ಆರಂಭಿಸಲಿದೆ. ಮಧ್ಯಾಹ್ನ 2.15ಕ್ಕೆ ಕೊಲ್ಹಾಪುರಕ್ಕೆ ತಲುಪಲಿದೆ. ಕೊಲ್ಹಾಪುರದಿಂದ ಮಧ್ಯಾಹ್ನ 3 ಗಂಟೆಗೆ ಹೊರಡಲಿದ್ದು, ರಾತ್ರಿ 10.45ಕ್ಕೆ ಕಲಬುರಗಿ ತಲುಪಲಿದೆ.

ರೈಲು ಮಾರ್ಗ ವಿಸ್ತರಣೆಯಿಂದ ಗಾಣಗಾಪುರದ ದತ್ತಾತ್ರೇಯ, ಫಂಡರಾಪುರದ ವಿಠ್ಠಲ, ಕೊಲ್ಹಾಪುರದ ಮಹಾಲಕ್ಷ್ಮೀ ದೇವಾಲಯಗಳಿಗೆ ತೆರಳುವ ಭಕ್ತರಿಗೆ ಸಹಾಯಕವಾಗಲಿದೆ. ಧಾರ್ಮಿಕ ಸ್ಥಳಗಳನ್ನು ಸಂಪರ್ಕಿಸುವ ನೇರ ರೈಲಿಗೆ ಬೇಡಿಕೆ ಇಟ್ಟಿದ್ದ ಜನರಿಗೆ ಕೊನೆಗೂ ಕೇಂದ್ರ ಸರ್ಕಾರ ಸ್ಪಂದಿಸಿದೆ.

ಕಲಬುರಗಿಯಿಂದ ಹೊರಡುವ ರೈಲು 7.05ಕ್ಕೆ ಗಾಣಗಾಪುರ, 7.46ಕ್ಕೆ ಅಕ್ಕಲಕೋಟ, 9.30ಕ್ಕೆ ಕುರುಡ್ವಾಡಿ, 10.20ಕ್ಕೆ ಪಂಡರಾಪುರ, 12.45 ಮೀರಜ್, 1.10ಕ್ಕೆ ಜೈಸಿಂಗ್‌ಪುರ, 1.25ಕ್ಕೆ ಹತ್ಕಣಂಗಲೆ ಮೂಲಕ ಕೊಲ್ಹಾಪುರ ತಲುಪಲಿದೆ.

Published On - 9:08 pm, Fri, 16 September 22