ಕಲಬುರಗಿ, ನ.10: ಕೆಇಎ (KEA) ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಆರ್‌ಡಿ ಪಾಟೀಲ್ (R.D.Patil) ಪೊಲೀಸರ ದಾಳಿ ವೇಳೆ ತಪ್ಪಿಸಿಕೊಂಡಿದ್ದು, ಈತನಿಗೆ ರಕ್ಷಣೆ ನೀಡಿದ್ದ ಇಬ್ಬರನ್ನು ಬಂಧಿಸಲಾಗಿದೆ. ಈ ನಡುವೆ ಆರ್‌ಡಿ ಪಾಟೀಲ್ಗೆ ಸಂಬಂಧಿಸಿದ ವಿಡಿಯೋವೊಂದು ಬಹಿರಂಗವಾಗಿದ್ದು, ಯುವಕರಿಗೆ ಉದ್ಯೋಗ ನೀಡಿದ ಬಗ್ಗೆ ನೀಡಿದ ಹೇಳಿಕೆ ಈ ವಿಡಿಯೋದಲ್ಲಿದೆ.
ಈ ವಿಡಿಯೋ ನೋಡಿದರೆ ಸರ್ಕಾರ ಹಾಗೂ ಗೃಹ ಇಲಾಖೆಯೇ ಬೆಚ್ಚಿ ಬಿಳಬೇಕು. ಹಾದಿ ಬಿದಿಯಲ್ಲಿ ಅಕ್ರಮದ ಬಗ್ಗೆ ಆರ್‌ಡಿ ಪಾಟೀಲ್ ಬಿಂದಾಸಾಗಿ ಮಾತನಾಡಿದ್ದಾನೆ. ಅಲ್ಲದೆ, ಕಳೆದ ವಿಧಾನಸಭಾ ಚುನಾವಣೆ ಪ್ರಚಾರದ ಸಮಯದಲ್ಲಿ ಅಫಜಲಪುರ ಮತಕ್ಷೇತ್ರದ ಜನರಿಗೆ ಸರ್ಕಾರಿ ನೌಕರಿಯ ಓಪನ್ ಆಫರ್ ಕೊಟ್ಟಿದ್ದನು.
ಅಫಜಲಪುರ ವಿಧಾನಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಅಖಾಡಕ್ಕೆ ಇಳಿದ್ದ ಆರ್‌ಡಿ ಪಾಟೀಲ್, ಚುನಾವಣಾ ಪ್ರಚಾರದ ಸಮಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ರೀತಿ ಮತ ಪಡೆಯಲು ಸುಳ್ಳು ಆಶ್ವಾಸನೆ ಕೋಡುವುದಿಲ್ಲ. ಹಲವಾರು ವರ್ಷಗಳಿಂದ ನಾನು ಯಾವುದೇ ಅಧಿಕಾರ ಇಲ್ಲ. ಅಧಿಕಾರ ಇಲ್ಲದೆ ಇದ್ದರೂ ಅತಿ ಚಿಕ್ಕ ವಯಸ್ಸಿನಲ್ಲಿ ನಮ್ಮ ಯುವಕರಿಗೆ ಉದ್ಯೋಗ ಕೋಡಿಸಿದ್ದೇನೆ ಎಂದು ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ: ಪರೀಕ್ಷಾ ಅಕ್ರಮದ ಕಿಂಗ್ಪಿನ್ ಪರಾರಿ: ಅಫಜಲಪುರ ಕ್ಷೇತ್ರದ ಶಾಸಕನಾಗುವ ಕನಸು ಕಂಡಿದ್ದ ಆರ್‌ಡಿ ಪಾಟೀಲ್
ಅಲ್ಲದೆ, ಇದನ್ನೆಲ್ಲಾ ಮನಗಂಡು ನಮ್ಮ ತಾಲೂಕಿನಲ್ಲಿ ಉದ್ಯೋಗ ಕ್ರಾಂತಿ ಮಾಡಬಹುದು ಅಂತಾ ಅಂದುಕೊಂಡಿದ್ದಾರೆ. ಹಾಗಾಗಿಯೆ ನನ್ನ ಮೇಲೆ ಕೇಸ್ ಹಾಕಿ ಒಳಗಡೆ ಕಳುಹಿಸಿದ್ದಾರೆ. ನಿಮ್ಮ ಮನೆ ಮಕ್ಕಳು ಉದ್ದಾರ ಆಗಬೇಕಾದರೆ ನಿಮ್ಮ ಮನೆ ಯುವಕರಿಗೆ ಮಕ್ಕಳಿಗೆ ಉದ್ಯೋಗ ಅವಕಾಶ ಮಾಡಿಕೊಡುತ್ತೇನೆ ಎಂದಿದ್ದಾನೆ.
ನಾನು ಜಾತಿ ಮತ ಬೇಧ ಮಾಡದೆ ಎಲ್ಲರಿಗೂ ಉದ್ಯೋಗ ಅವಾಕಶ ಕೊಟ್ಟಿದ್ದೇನೆ. ನಾನು ಎಲ್ಲಾ ಜಾತಿಯ ಜನರಿಗೆ ಉದ್ಯೋಗ ಕೊಡಿಸಿರುವುದಕ್ಕೆ ನನ್ನ ಹೊರಗಡೆ ಬರಂದತೆ ಮಾಡಿದರು. ಆದರೆ ನಿಮ್ಮ ಮಕ್ಕಳಿಗೆ ಉದ್ಯೋಗ ಅವಕಾಶ ಕೊಡುತ್ತೇನೆ, ಸುಳ್ಳು ಭರವಸೆ ಕೊಡುವುದಿಲ್ಲ. ನಿಮ್ಮ ಮಕ್ಕಳಿಗೆ ಉದ್ಯೋಗ ಸಿಗಬೇಕಾದರೆ ನನಗೆ ಮತ ಹಾಕುವಂತೆ ಮನವಿ ಮಾಡಿದ್ದ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:21 am, Fri, 10 November 23