ಕೆಕೆಆರ್‌ಟಿಸಿ ಪ್ರಯಾಣ ಇನ್ನು ಮತ್ತಷ್ಟು ಸುಲಭ, ಸುರಕ್ಷಿತ: 4,063 ಬಸ್‌ಗಳಿಗೆ ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆ

ಪ್ರಯಾಣಿಕರ ಸುರಕ್ಷತೆ ಮತ್ತು ಸೇವೆಗಳನ್ನು ಸುಧಾರಿಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ತನ್ನ 4,063 ಬಸ್‌ಗಳಿಗೆ ವಾಹನ ಟ್ರ್ಯಾಕಿಂಗ್ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (VTMS) ಅಳವಡಿಸಲು ಮುಂದಾಗಿದೆ. ಪ್ರತಿಯೊಂದು ಬಸ್‌ನಲ್ಲೂ ಡ್ಯುಯಲ್ ಸಿಮ್ ಹೊಂದಿರುವ GPRS ವ್ಯವಸ್ಥೆಯನ್ನು ಅಳವಡಿಕೆ ನಡೆಯಲಿದ್ದು, ಈ ಮೂಲಕ ಪ್ರಯಾಣಿಕರು ಮತ್ತು ಅಧಿಕಾರಿಗಳು ಬಸ್‌ಗಳ ಸಂಚಾರವನ್ನು ಟ್ರ್ಯಾಕ್ ಮಾಡಬಹುದಾಗಿದೆ.

ಕೆಕೆಆರ್‌ಟಿಸಿ ಪ್ರಯಾಣ ಇನ್ನು ಮತ್ತಷ್ಟು ಸುಲಭ, ಸುರಕ್ಷಿತ: 4,063 ಬಸ್‌ಗಳಿಗೆ ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆ
ಸಾಂದರ್ಭಿಕ ಚಿತ್ರ
Image Credit source: PTI

Updated on: Nov 19, 2026 | 12:49 PM

ಕಲಬುರಗಿ, ನವೆಂಬರ್​​ 19: ಪ್ರಯಾಣಿಕರ ಸುರಕ್ಷತೆ ಮತ್ತು ಸೇವೆಗಳನ್ನು ಸುಧಾರಿಸುವ ಉದ್ದೇಶದಿಂದ 4,063 ಬಸ್‌ಗಳಿಗೆ ವಾಹನ ಟ್ರ್ಯಾಕಿಂಗ್ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (VTMS) ಅಳವಡಿಸಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ನಿರ್ಧರಿಸಿದೆ. ಈಗಾಗಲೇ 1,213 ಬಸ್‌ಗಳಲ್ಲಿ ವಿಟಿಎಂಎಸ್​​ ಅಳವಡಿಸಲಾಗಿದೆ. ಇನ್ನುಳಿದ 2,850 ಬಸ್‌ಗಳಿಗೆ ಅಗತ್ಯವಿರುವ ವ್ಯವಸ್ಥೆ ಮತ್ತು ಸಾಧನಗಳ ಖರೀದಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. KKRTC ತನ್ನ ಒಂಬತ್ತು ವಿಭಾಗಗಳಲ್ಲಿ ಒಟ್ಟು 4,803 ಬಸ್‌ಗಳನ್ನು ನಿರ್ವಹಿಸುತ್ತಿದೆ.

ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆಯಿಂದ ಏನೆಲ್ಲ ಪ್ರಯೋಜನ?

ಪ್ರತಿಯೊಂದು ಬಸ್‌ನಲ್ಲೂ ಡ್ಯುಯಲ್ ಸಿಮ್ ಹೊಂದಿರುವ GPRS ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಈ ವ್ಯವಸ್ಥೆಯ ಮೂಲಕ ಪ್ರಯಾಣಿಕರು ಮತ್ತು ಅಧಿಕಾರಿಗಳು ಬಸ್‌ಗಳ ಸಂಚಾರವನ್ನು ಟ್ರ್ಯಾಕ್ ಮಾಡಬಹುದು. ಅಲ್ಲದೆ, ಬಸ್ ನಿಲ್ದಾಣಗಳಿಗೆ ಬಸ್‌ಗಳ ನಿರ್ಗಮನ ಮತ್ತು ನಿರೀಕ್ಷಿತ ಆಗಮನದ ಸಮಯವನ್ನೂ ತಿಳಿದುಕೊಳ್ಳಬಹುದಾಗಿದೆ. ಪ್ರಯಾಣಿಕರು ಆ್ಯಪ್‌ನಲ್ಲಿ ಬಸ್‌ನ ನೋಂದಣಿ ಸಂಖ್ಯೆ ಹಾಗೂ ಅಗತ್ಯ ವಿವರಗಳನ್ನು ನಮೂದಿಸುವ ಮೂಲಕ ಬಸ್ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಬಹುದು. ಯಾವುದೇ ಅಹಿತಕರ ಘಟನೆ ನಡೆದರೂ ಈ ವ್ಯವಸ್ಥೆಯು ತಕ್ಷಣ ಮಾಹಿತಿ ನೀಡಲಿದೆ. ಈ ಮಾಹಿತಿಯನ್ನು ಬೆಂಗಳೂರಿನಲ್ಲಿರುವ ಸಾರಿಗೆ ಇಲಾಖೆಯ ಕಮಾಂಡ್ ಸೆಂಟರ್ ಮೇಲ್ವಿಚಾರಣೆ ಮಾಡಲಿದೆ.

Loading...

ಇದನ್ನೂ ಓದಿ:  ಕೊಪ್ಪಳದಲ್ಲಿ ವಾಯು ಮತ್ತು ಜಲ ಕಾಯ್ದೆ ಉಲ್ಲಂಘಿಸಿದ 8 ಕಾರ್ಖಾನೆಗಳು ಬಂದ್

ದೂರ ಪ್ರಯಾಣದ ವೇಳೆ ಬಸ್ ವಿಳಂಬ, ಮಾರ್ಗ ಬದಲಾವಣೆ ಮತ್ತು ಅನಗತ್ಯ ನಿಲುಗಡೆಗಳ ಕುರಿತು ಈ ವ್ಯವಸ್ಥೆಯು ಎಚ್ಚರಿಕೆ ನೀಡಲಿದೆ. ಇದರಿಂದ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಹೆಚ್ಚು ಸಮಯ ಕಾಯುವುದನ್ನು ತಪ್ಪಿಸಬಹುದು ಎಂದು KKRTC ಮುಖ್ಯ ತಾಂತ್ರಿಕ ವಾಸ್ತುಶಿಲ್ಪಿ ಸಂತೋಷ್ ಗೊಗೇರಿ ತಿಳಿಸಿದ್ದಾರೆ. VTMS ಅಳವಡಿಕೆಗಾಗಿ KKRTC ನಾಲ್ಕು ಬಾರಿ ಟೆಂಡರ್ ಆಹ್ವಾನಿಸಿತ್ತು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಬಿ. ಸುಶೀಲಾ ತಿಳಿಸಿದ್ದಾರೆ. ಟೆಂಡರ್ ಪ್ರಕ್ರಿಯೆ ಅಂತಿಮಗೊಂಡ ಬಳಿಕ ನಿಗಮವು ಆ್ಯಪ್ ಅಭಿವೃದ್ಧಿಪಡಿಸಲಿದೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us