
ಕಲಬುರಗಿ: ಕಲಬುರಗಿ ಅಂದಾಕ್ಷಣ ತಟ್ಟಣೆ ನೆನಪಾಗುವುದು ಬಿಸಿಲನಾಡು ಅಂತ. ಬಹುತೇಕರಿಗೆ ಕಲಬುರಗಿ ಅಂದ್ರೆ ಇಂದಿಗೂ ಕೂಡಾ ಬಿಸಿಲೆ ಮೊದಲು ಕಾಣಿಸುತ್ತದೆ. ಹೀಗಾಗಿ ನೀರು ನೆರಳಲ್ಲಿದ ಊರು ಅಂತ ಹೆಚ್ಚಿನ ಜನರು ಕಲಬುರಗಿಗೆ ಬರಲು ಹಿಂದೇಟು ಹಾಕ್ತಾರೆ. ಅದು ನಿಜಾ ಕೂಡಾ ಹೌದು. ಆದ್ರೆ, ಇದೇ ಜಿಲ್ಲೆಯಲ್ಲಿ ಹಸಿರು ಸಿರಿ ಕೂಡಾ ಇದೆ. ಮಳೆಗಾಲದಲ್ಲಿ ಹಸಿರು ಸೀರೆಯನ್ನುಟ್ಟು ಕಂಗೊಳಿಸುದನ್ನು ನೋಡಲು ಎರಡೂ ಕಣ್ಣುಗಳು ಸಾಲವು ಅನ್ನೋದು ಬಹುತೇಕರಿಗೆ ಗೊತ್ತಿಲ್ಲಾ.
ಬಯಲು ಬಿಸಿಲ ನಾಡಲ್ಲಿದೆ ಹಸಿರು ಅರಣ್ಯ
ಅಷ್ಟಕ್ಕೂ ಬಿಸಿಲುನಾಡು ಕಲಬುರಗಿ ಜಿಲ್ಲೆಯಲ್ಲಿರುವ ಮಲೆನಾಡು ಎಂದು ಖ್ಯಾತಿಯಾಗಿರೋದು ಚಿಂಚೋಳಿ ತಾಲೂಕಿನ ಕುಂಚಾವರಂ ಅರಣ್ಯ ಪ್ರದೇಶ. ಈ ಕುಂಚಾವರಂ ಅರಣ್ಯ ಪ್ರದೇಶ ಬರೋಬ್ಬರಿ 14,958 ಹೆಕ್ಟರ್ ಪ್ರದೇಶ ವ್ಯಾಪ್ತಿಯಲ್ಲಿ ಇದೆ. ಇದನ್ನು 2011 ರಲ್ಲಿ ಸಂರಕ್ಷಿತ ವನ್ಯಜೀವಿ ಧಾಮ ಅಂತಾ ಕೂಡಾ ಘೋಷಿಸಲಾಗಿದೆ.
ಮಳೆಗಾಲದಲ್ಲಿ ಹಸಿರು ಸಿರಿಯೇ ಅನಾವರಣ
ಹೌದು, ಕುಂಚಾವರಂ ಅರಣ್ಯ ಇದೀಗ ಸಂಪೂರ್ಣ ಹಸಿರಾಗಿದೆ. ಬೇಸಿಗೆಯ ಬಿಸಿಲಿಗೆ ಬಸವಳದಿದ್ದ ಮರಗಳು ಇದೀಗ ಬಿಸಿಲಿನಿಂದ ದೂರವಾಗಿ ಮಳೆಯ ಹನಿಗೆ ಹಸಿರನ್ನು ಮೈದೊಡೆದು ನಿಂತಿವೆ. ಹೀಗಾಗಿ ಎಲ್ಲೆಲ್ಲೂ ಇದೀಗ ಹಸಿರೆ ಹಸಿರು ಕಂಗೋಳಿಸುತ್ತಿದೆ. ಇದೇ ಅರಣ್ಯದಲ್ಲಿರುವ ‘ಚಂದ್ರಪಳ್ಳಿ’ ಜಲಾಶಯ, ‘ಎತ್ತಪೋತ’ ಕಿರು ಜಲಪಾತಗಳು ಜನರನ್ನು ಆಕರ್ಷಿಸುತ್ತಿವೆ. ಕುಂಚಾವರಂ ಅರಣ್ಯದಲ್ಲಿ ಹಾದು ಹೋಗುವದೆೇ ಇದೀಗ ಮನಸ್ಸಿಗೆ ಮುದ ನೀಡುವ ವಿಷಯ. ಹೀಗಾಗಿ ಜಿಲ್ಲೆಯ ಬಹುತೇಕ ಜನರು ಇದೀಗ ಕುಂಚಾವರಂನ ಹಸಿರು ಸಿರಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಪ್ರವಾಸಿಗರಿಗೆ ಉತ್ತಮ ಸಂಪರ್ಕ ಸಾಧನ
Published On - 4:11 pm, Thu, 18 June 20