ಒಳ ಮೀಸಲಾತಿಯಿಂದ ಲಂಬಾಣಿ ಸಮಾಜ ಆಕ್ರೋಶ: ಈ ಬಗ್ಗೆ ಸಂಸದ ಉಮೇಶ್ ಜಾಧವ್ ಹೇಳಿದ್ದಿಷ್ಟು

ಒಳ ಮೀಸಲಾತಿಯಿಂದ ಲಂಬಾಣಿ ಸಮಾಜದ ಆಕ್ರೋಶ ವಿಚಾರವಾಗಿ ‘ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಇದ್ದ ಗೊಂದಲವನ್ನು ಸರ್ಕಾರ ನಿವಾರಿಸಿದೆ. ಕೆಲವರು ಮಾಹಿತಿ ಇಲ್ಲದೇ ಗಲಾಟೆ ಮಾಡುತ್ತಿದ್ದಾರೆ ಎಂದು ಸಂಸದ ಡಾ.ಉಮೇಶ್ ಜಾಧವ್ ಹೇಳಿದ್ದಾರೆ.

ಒಳ ಮೀಸಲಾತಿಯಿಂದ ಲಂಬಾಣಿ ಸಮಾಜ ಆಕ್ರೋಶ: ಈ ಬಗ್ಗೆ ಸಂಸದ ಉಮೇಶ್ ಜಾಧವ್ ಹೇಳಿದ್ದಿಷ್ಟು
ಸಂಸದ ಉಮೇಶ್​ ಜಾಧವ್​

Updated on: Mar 30, 2023 | 1:03 PM

ಕಲಬುರಗಿ: ಒಳ ಮೀಸಲಾತಿಯಿಂದ ಲಂಬಾಣಿ ಸಮಾಜದ ಆಕ್ರೋಶ ವಿಚಾರವಾಗಿ ‘ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಇದ್ದ ಗೊಂದಲವನ್ನು ಸರ್ಕಾರ ನಿವಾರಿಸಿದೆ. ಕೆಲವರು ಮಾಹಿತಿ ಇಲ್ಲದೇ ಗಲಾಟೆ ಮಾಡುತ್ತಿದ್ದಾರೆ. ಸದಾಶಿವ ಆಯೋಗದ ವರದಿ ಜಾರಿಗೆ ತರಬಾರದು ಎನ್ನುವುದು ಲಂಬಾಣಿ ಸಮಾಜದ ಬೇಡಿಕೆಯಾಗಿತ್ತು. ಸದಾಶಿವ ಆಯೋಗದ ವರದಿ ಕೆಲ ಅಂಶಗಳಿಗೆ ನಮ್ಮ ವಿರೋಧವಿತ್ತು. ಬಂಜಾರ‌ ಸಮಾಜವನ್ನು ಎಸ್ಸಿಯಿಂದ‌ ತಗಿಬೇಕು ಎಂದು  ಹೇಳಲಾಗಿತ್ತು ಎಂದು ಸಂಸದ ಡಾ.ಉಮೇಶ್ ಜಾಧವ್(Umesh Jadhav) ಹೇಳಿದ್ದಾರೆ.

ಜಾತಿ ಜಾತಿಗಳ ನಡುವೆ ಜಗಳ ಹಚ್ಚೋ ಆತಂಕವಿತ್ತು

ಕಲಬುರಗಿ ನಗರದಲ್ಲಿ ಮಾತನಾಡಿದ ಅವರು ‘ಜಾತಿ ಜಾತಿಗಳ ನಡುವೆ ಜಗಳ ಹಚ್ಚುವ ಆತಂಕವಿತ್ತು. ಆದರೆ ನಮ್ಮ ಸರ್ಕಾರ ಎಸ್ಸಿ ಮೀಸಲಾತಿಯನ್ನು 15 ರಿಂದ 17 ಕ್ಕೆ ಹೆಚ್ಚಿಸಿದೆ. ರಾಜ್ಯ ಸರ್ಕಾರ ಸದಾಶಿವ ಆಯೋಗದ ವರದಿ ಮೇಲೆ ಒಳ ಮೀಸಲಾತಿ ಜಾರಿಗೊಳಿಸಿಲ್ಲ. ಸಮಾಜದ ಮೇಲಿದ್ದ ತೂಗಕತ್ತಿಯನ್ನು ಸರ್ಕಾರ ನಿವಾರಿಸಿದೆ. ರಾಜ್ಯ ಸರ್ಕಾರಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಸರ್ಕಾರದ ಒಳ ಮೀಸಲಾತಿ ಜಾರಿಯಿಂದ ನಮಗೆ ಸಂತೋಷವಾಗಿದೆ. ಕೆಲವರು ಸುಳ್ಳು ಹೇಳುತ್ತಿದ್ದಾರೆ, ಕಾಣದ ಕೈಗಳು ಕೆಲಸ ಮಾಡುತ್ತಿವೆಯೆಂದು. ಯಡಿಯೂರಪ್ಪನವರು ನಮ್ಮ ಸಮಾಜಕ್ಕೆ ಒಳ್ಳೆಯದನ್ನು ಮಾಡಿದ್ದರು. ಅಂತವರ ಮನೆ ಮೇಲೆ ಕಲ್ಲು ಹೊಡಿದಿದ್ದನ್ನು ನಾನು ಖಂಡಿಸುತ್ತೇನೆ. ನಮ್ಮ ಸಮಾಜದ ಎಂಟು ಜನರನ್ನ ಶಾಸಕರನ್ನಾಗಿ ಮಾಡಿದ್ದು, ನನಗೆ ಸಂಸದ ಮಾಡಿದ್ದು ಯಡಿಯೂರಪ್ಪನವರು ಎಂದಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ