ಇದು ಕಾಂಗ್ರೆಸ್​​ ಪಕ್ಷದ ಆ 5 ಗ್ಯಾರಂಟಿಗಳಲ್ಲ, ಸಚಿವ ಪ್ರಿಯಾಂಕ್ ಖರ್ಗೆ ಸ್ಪೆಷಲ್​​​ ಗ್ಯಾರಂಟಿ! ಇದಕ್ಕೆ ಯಾಕೆ ಅಧಿಕಾರಿಗಳು ಥರಗುಟ್ಟುತ್ತಿರುವುದು!?

|

Updated on: Jun 02, 2023 | 4:28 PM

ಯಾವುದೇ ಸರ್ಕಾರ ಬರಲಿ, ಒಂದು ಪಕ್ಷದ ಪರವಾಗಿ ಕೆಲಸ ಮಾಡದೇ, ಜನರ ಪರವಾಗಿ ಕೆಲಸ ಮಾಡಿದ್ರೆ ಯಾವುದೇ ಸಮಸ್ಯೆ ಇರಲ್ಲಾ. ಆದ್ರೆ ಒಂದು ಪಕ್ಷದ ಕಾರ್ಯಕರ್ತರಂತೆ ಕೆಲಸ ಮಾಡಿದ ಅಧಿಕಾರಿಗಳಿಗೆ ಇದೀಗ ನಡುಕ ಆರಂಭವಾಗಿದೆ

ಇದು ಕಾಂಗ್ರೆಸ್​​ ಪಕ್ಷದ ಆ 5 ಗ್ಯಾರಂಟಿಗಳಲ್ಲ, ಸಚಿವ ಪ್ರಿಯಾಂಕ್ ಖರ್ಗೆ ಸ್ಪೆಷಲ್​​​ ಗ್ಯಾರಂಟಿ! ಇದಕ್ಕೆ ಯಾಕೆ ಅಧಿಕಾರಿಗಳು ಥರಗುಟ್ಟುತ್ತಿರುವುದು!?
ಕಲಬುರಗಿ ಜಿಲ್ಲೆಯಲ್ಲಿ 6ನೇ ಗ್ಯಾರಂಟಿ ಜಾರಿಗೆ ಪ್ರಿಯಾಂಕ್ ಖರ್ಗೆ ಸಜ್ಜು, ಅಧಿಕಾರಿಗಳಿಗೆ ನಡುಕ
Follow us on

ಕಲಬುರಗಿ (kalaburagi) ಜಿಲ್ಲೆಯ ಅನೇಕ ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಗೆ ಇದೀಗ ನಡುಕ ಆರಂಭವಾಗಿದೆ. ಅನೇಕರ ವರ್ಗಾವಣೆ ಮತ್ತು ಅಮಾನತ್ತು ತೂಗುಕತ್ತಿ ನೇತಾಡಲು ಆರಂಭವಾಗಿದೆ. ಹೌದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಮತ್ತು ಪ್ರಿಯಾಂಕ್​ ಖರ್ಗೆ (Priyank Kharge), ಡಾ. ಶರಣಪ್ರಕಾಶ್ ಪಾಟೀಲ್ ಮಂತ್ರಿಯಾಗುತ್ತಿದ್ದಂತೆ ಅನೇಕರಿಗೆ (government employees) ನಡುಕ ಆರಂಭವಾಗಿದೆ. ಇದಕ್ಕೆ ಕಾರಣ, ಕಲಬುರಗಿಯಲ್ಲಿ ಆರನೇ ಗ್ಯಾರಂಟಿ ಜಾರಿ ಸಾಧ್ಯತೆ ಭೀತಿ! ಹೌದು ಚುನಾವಣೆಯ ಸಮಯದಲ್ಲಿ, ಪ್ರಿಯಾಂಕ್ ಖರ್ಗೆ ಕಲಬುರಗಿ ಜಿಲ್ಲೆಯ ಜನರಿಗೆ ಆರನೇ ಗ್ಯಾರಂಟಿ (guarantee scheme) ನೀಡಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ಕಲಬುರಗಿಯಲ್ಲಿ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಮಾಡಲಾಗುವುದು ಮತ್ತು ಬಿಜೆಪಿ ಕೈಗೊಂಬೆಯಾಗಿ (whims and fancies) ಕೆಲಸ ಮಾಡಿರೋ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಸ್ವಲ್ಪ ದಿನ ಕಾಯಿರಿ, ನಮ್ಮ ಸರ್ಕಾರ ಬಂದೇ ಬರುತ್ತೆ, ಏಕಪಕ್ಷೀಯವಾಗಿ ಬಿಜೆಪಿ ಪರ ಕೆಲಸ ಮಾಡೋ ನಿಮ್ಮ ವಿರುದ್ದ ಕ್ರಮ ಕೈಗೊಳ್ಳುತ್ತೇವೆ. ಇದು ಕಲಬುರಗಿ ಜನರಿಗೆ ನಾನು ನೀಡೋ ಆರನೇ ಗ್ಯಾರಂಟಿ ಅಂತ ಅನೇಕ ಸಲ ಪ್ರಿಯಾಂಕ್ ಖರ್ಗೆ ಹೇಳಿದ್ದರು.

ಅದರಂತೆ ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ವಿತ್ವಕ್ಕೆ ಬಂದಿದೆ. ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ದಿ ಸಚಿವರಾಗಿದ್ದಾರೆ. ಜೊತೆಗೆ ಡಾ. ಶರಣಪ್ರಕಾಶ್ ಪಾಟೀಲ್ ಕೂಡಾ ಮಂತ್ರಿಯಾಗಿದ್ದಾರೆ. ಇಬ್ಬರು ಕೂಡಾ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದಾರೆ ಅಂತ ಹೇಳಲಾಗುತ್ತಿರುವ ಕೆಲ ಅಧಿಕಾರಿಗಳ ಪಟ್ಟಿ ಮಾಡಿಕೊಂಡಿದ್ದು, ಅವರ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಮತ್ತು ಅವರ ವಿರುದ್ದ ಕ್ರಮ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಕಲಬುರಗಿ ಜಿಲ್ಲೆಯಲ್ಲಿ ಅಕ್ರಮವಾಗಿ ಅಕ್ಕಿ ಕಳ್ಳ ಸಾಕಾಣಿಕೆಗೆ ಕುಮ್ಮಕ್ಕು, ಮರಳು ಮಾಫಿಯಾಗೆ ಕುಮ್ಮಕ್ಕು, ರೌಡಿಗಳ ಜೊತೆ ಶಾಮೀಲಾಗಿರುವ ಕೆಲ ಪೊಲೀಸ್ ಅಧಿಕಾರಿಗಳ ಪಟ್ಟಿಯನ್ನು ಕೂಡಾ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಕೈಯಲ್ಲಿನ ಹಿಡಿದಿದ್ದಾರೆ. ಕೆಲವೇ ದಿನಗಳಲ್ಲಿ ಅವರ ಎತ್ತಂಗಡಿ ಮತ್ತು ತನಿಖೆ ಮಾಡಿಸೋ ಮಾತುಗಳನ್ನು ಹೇಳಿದ್ದಾರೆ. ಇದು ಅನೇಕ ಅಧಿಕಾರಿಗಳಿಗೆ ನಡುಕ ಪ್ರಾರಂಭವಾಗುವಂತೆ ಮಾಡಿದೆ.

ಜನಪ್ರತಿನಿಧಿಗಳು ಮತ್ತು ಬಿಜೆಪಿ ನಾಯಕರ ಜೊತೆ ಸೇರಿ ಬೇಕಾಬಿಟ್ಟಿಯಾಗಿ ಕಾಮಗಾರಿ ಮಾಡಿದವರು ಮತ್ತು ಕಾಮಗಾರಿ ಮಾಡದೇ ಹಣ ಎತ್ತಿ ಹಾಕಿರೋ ಕೆಲ ಅಧಿಕಾರಿಗಳು ಕಲಬುರಗಿ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಳ್ಳಲು ಈಗಾಗಲೇ ತಯಾರಿ ಮಾಡಿಕೊಂಡಿದ್ದಾರಂತೆ.
ಇಲ್ಲೇ ಇದ್ದು, ಕೆಂಗಣ್ಣಿಗೆ ಗುರಿಯಾಗುವ ಬದಲು, ಬೇರೆ ಜಿಲ್ಲೆಗೆ ಹೋದ್ರೆ ಸುರಕ್ಷಿತ ಅನ್ನೋ ಭಾವನೆಯನ್ನು ಅನೇಕ ಅಧಿಕಾರಿಗಳು ಹೊಂದಿದ್ದು, ಕಾಂಗ್ರೆಸ್ ನಲ್ಲಿ ತಮಗೆ ಬೇಕಾದವರ ಮೂಲಕ ಬೇರೆ ಜಿಲ್ಲೆಗೆ ವರ್ಗಾವಣೆಗೆ ಪ್ರಯತ್ನ ಆರಂಭಿಸಿದ್ದಾರೆ.

ಯಾವುದೇ ಸರ್ಕಾರ ಬರಲಿ, ಒಂದು ಪಕ್ಷದ ಪರವಾಗಿ ಕೆಲಸ ಮಾಡದೇ, ಜನರ ಪರವಾಗಿ ಕೆಲಸ ಮಾಡಿದ್ರೆ ಯಾವುದೇ ಸಮಸ್ಯೆ ಇರಲ್ಲಾ. ಆದ್ರೆ ಒಂದು ಪಕ್ಷದ ಕಾರ್ಯಕರ್ತರಂತೆ ಕೆಲಸ ಮಾಡಿದ ಅಧಿಕಾರಿಗಳಿಗೆ ಇದೀಗ ನಡುಕ ಆರಂಭವಾಗಿದ್ದು, ಯಾರೆಲ್ಲರ ಮೇಲೆ ಕ್ರಮವಾಗಲಿದೆ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

ವರದಿ: ಸಂಜಯ್, ಟಿವಿ9, ಕಲಬುರಗಿ

Published On - 4:18 pm, Fri, 2 June 23