ಮಾತನಾಡುವ ನೆಪದಲ್ಲಿ ಕರೆಸಿ ನಡು ರಸ್ತೆಯಲ್ಲಿ ಚಾಕುವಿನಿಂದ ಇರಿದು ಯುವಕನ ಭೀಕರ ಕೊಲೆ

| Updated By: ಆಯೇಷಾ ಬಾನು

Updated on: Jul 27, 2021 | 8:25 AM

ಆತ ತನ್ನ ಪಾಡಿಗೆ ತಾನಿದ್ದ. ಒಂದು ವಾರದಿಂದ ಕೆಲಸವಿಲ್ಲದೆ ಮನೆಯಲ್ಲೇ ಸೈಲೆಂಟ್‌ ಆಗಿದ್ದ. ಆದ್ರೆ ಮೊನ್ನೆ ಮನೆಯಿಂದ ವಾಪಸ್ ಹೋಗಿದ್ದ ಆತ ಮನೆಗೇ ಬಂದಿರಲಿಲ್ಲ. ಮನೆಯವರು ಕಾಲ್ ಮಾಡಿದ್ರೆ ಬರ್ತಿನಿ ಬರ್ತಿನಿ ಅಂತ ಹೇಳುತ್ತಿದ್ದ ಆತ ಸ್ವಲ್ಪ ಹೊತ್ತಿನ ನಂತ್ರ ಬಾರದ ಲೋಕಕ್ಕೆ ಹೋಗಿದ್ದಾನೆ.

ಮಾತನಾಡುವ ನೆಪದಲ್ಲಿ ಕರೆಸಿ ನಡು ರಸ್ತೆಯಲ್ಲಿ ಚಾಕುವಿನಿಂದ ಇರಿದು ಯುವಕನ ಭೀಕರ ಕೊಲೆ
ಅನಿಲ್ ಭಜಂತ್ರಿ ಕೊಲೆಯಾದ ಯುವಕ
Follow us on

ಕಲಬುರಗಿ: ನಗರದ ದುಬೈ ಕಾಲೋನಿಯಲ್ಲಿ ಭೀಕರ ಘಟನೆಯೊಂದು ನಡೆದಿದೆ. ಇಲ್ಲಿಯ ನಿವಾಸಿ ಅನಿಲ್ ಭಜಂತ್ರಿ ಎಂಬ 24 ವರ್ಷದ ಯುವಕ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾನೆ. ಕಲಬುರಗಿ ನಗರದ ಕೋರ್ಟ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆ ಬಳಿ ಅನಿಲ್ನನ್ನು ಮೊನ್ನೆ ರಾತ್ರಿ 11ಗಂಟೆ ಸಮಯದಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಖಾಸಗಿ ಆಸ್ಪತ್ರೆ ಬಳಿ ಅನಿಲ್‌ನನ್ನ ಕರೆದಿದ್ದ ಹತ್ತರಿಂದ ಹದಿನೈದು ಜನರ ಗುಂಪು ದಾಳಿ ಮಾಡಿದೆ. ಈ ವೇಳೆ ಗುಂಪಿನಲ್ಲಿದ್ದ ಯುವಕನೋರ್ವ ಅನಿಲ್‌ಗೆ ಚಾಕು ಇರಿದಿದ್ದಾನೆ. ತಕ್ಷಣವೇ ಅನೀಲ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರು, ಜೀವ ಉಳಿಯಲಿಲ್ಲ.

ಟಾಟಾ ಏಸ್‌ ಓಡಿಸಿಕೊಂಡಿದ್ದ ಅನಿಲ್ ಭಜಂತ್ರಿ ವಾರದ ಹಿಂದೆ ತನ್ನ ಗಾಡಿಯನ್ನ ಮಾರಾಟ ಮಾಡಿ ಕೆಲಸವಿಲ್ಲದೇ ಮನೆಯಲ್ಲೇ ಇದ್ದ. ಆದ್ರೆ ಮೊನ್ನೆ ಬೆಳಗ್ಗೆ 9 ಗಂಟೆಗೆ ಮನೆಯಿಂದ ಹೋಗಿದ್ದ ಅನಿಲ್ ವಾಪಸ್ ಬಂದಿರಲಿಲ್ಲ. ತಾಯಿ ಮೇಲಿಂದ ಮೇಲೆ ಕರೆ ಮಾಡಿದಾಗ ಬರ್ತೇನೆ ಅಂತ ಹೇಳಿದ್ದನಂತೆ. ರಾತ್ರಿ ಒಂಬತ್ತು ಗಂಟೆಗೆ ಕರೆ ಮಾಡಿದಾಗ ಕೂಡಾ ಬರ್ತೇನೆ ಅಂತ ಹೇಳಿದ್ದನಂತೆ. ಆದ್ರೆ ರಾತ್ರಿ ಹನ್ನೊಂದು ಗಂಟೆಗೆ ಅನಿಲ್‌ಗೆ ಪಾಪಿಗಳು ಚಾಕುವಿನಿಂದ ಇರಿದಿದ್ದಾರೆ. ಇನ್ನು ಮೊನ್ನೆ ಮಧ್ಯಾಹ್ನ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಳೇ ವೈಷ್ಯಮದ ಹಿನ್ನೆಲೆಯಲ್ಲಿ ಅನಿಲ್‌ ಸ್ನೇಹಿತ ವಿಜಯ್ ಅನ್ನೋ ಯುವಕನ ಕಾಲನ್ನು ದುಷ್ಕರ್ಮಿಗಳು ಕತ್ತರಿಸಿದ್ರಂತೆ. ನಂತ್ರ ವಿಜಯ್‌ನ ಸ್ನೇಹಿತರೇ ಅನಿಲ್‌ನನ್ನ ಕಳೆದ ರಾತ್ರಿ ಫೋನ್ ಮಾಡಿ ಆಸ್ಪತ್ರೆ ಬಳಿ ಕರೆಸಿಕೊಂಡಿದ್ದರು ಅಂತ ಹೇಳಲಾಗುತ್ತಿದೆ. ವಿಜಯ್ ಕಾಲು ಕತ್ತರಿಸೋಕೆ ಅನಿಲ್ ಕಾರಣ ಎಂದು ತಿಳಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಅನಿಲ್ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅನಿಲ್ ಕೊಲೆ ಕಾರಣವೇನು? ಸ್ನೇಹಿತರೇ ಅನಿಲ್‌ನನ್ನ ಕೊಲೆ ಮಾಡಿದ್ರಾ ಅನ್ನೋದು ತನಿಖೆಯಿಂದ ಗೊತ್ತಾಗಬೇಕಿದೆ.

ಇದನ್ನೂ ಓದಿ: Crime News: ರೈಲ್ವೆ ಹಳಿಯ ಮೇಲೆ ವೃದ್ಧೆಯ ಮೃತದೇಹ ಪತ್ತೆ; ಆಕಸ್ಮಿಕ ಅಲ್ಲ, ಕೊಲೆ

Crime News: ಬೆಳಗಿನ ಕ್ರೈಂ ಸುದ್ದಿಗಳು.. ಮನೆಗೆ ನುಗ್ಗಿ ಮಚ್ಚಿನಿಂದ ಹಲ್ಲೆ ನಡೆಸಿ ಅರ್ಧ ಕೆ.ಜಿ. ಚಿನ್ನ, ನಗದು ಕದ್ದ ದುಷ್ಕರ್ಮಿಗಳು