ಸರ್ಕಾರಿ ಶಾಲಾ ಕೊಠಡಿಯಲ್ಲಿ ಅಕ್ರಮವಾಗಿ ಗೋರಿ ನಿರ್ಮಾಣ; ತರೆವುಗೊಳಿಸುವಂತೆ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಆಗ್ರಹ

| Updated By: ವಿವೇಕ ಬಿರಾದಾರ

Updated on: Nov 25, 2022 | 8:31 PM

ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ಮುಸ್ಲಿಂ ಸಮಾಜದ ಮಜರ್ (ಗೋರಿ) ನಿರ್ಮಾಣ ಮಾಡಿದ್ದಾರೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಕಲಬುರಗಿಯಲ್ಲಿ ಆರೋಪ ಮಾಡಿದ್ದಾರೆ.

ಸರ್ಕಾರಿ ಶಾಲಾ ಕೊಠಡಿಯಲ್ಲಿ ಅಕ್ರಮವಾಗಿ ಗೋರಿ ನಿರ್ಮಾಣ; ತರೆವುಗೊಳಿಸುವಂತೆ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ  ಸಿದ್ಧಲಿಂಗ ಸ್ವಾಮೀಜಿ ಆಗ್ರಹ
ಸರ್ಕಾರಿ ಶಾಲೆಯಲ್ಲಿ ಗೋರಿ
Follow us on

ಕಲಬುರಗಿ: ಕಲಬುರಗಿ (Kalaburagi) ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ (Government primary school) ಕೊಠಡಿಯಲ್ಲಿ ಮುಸ್ಲಿಂ ಸಮಾಜದ ಮಜರ್ (ಗೋರಿ) ನಿರ್ಮಾಣ ಮಾಡಿದ್ದಾರೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಕಲಬುರಗಿಯಲ್ಲಿ ಆರೋಪ ಮಾಡಿದ್ದಾರೆ. ಎರಡು ತಿಂಗಳ ಹಿಂದೆ (ಸೆಪ್ಟೆಂಬರ್​ 5) ರಂದು ಮೋಹರಂ ಆಚರಣೆ ಸಮಿತಿಯ ಕೆಲ ಯುವಕರು ಲಾಲ್ ಸಾಹೇಬ್ ನೈಯಿಲೆ ಯಹೈದರಿ ದರ್ಗಾದ ಮಜರ್ ಕಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಮೊದಲು ಗ್ರಾಮದ ಸಂತೆ ಜಾಗದಲ್ಲಿದ್ದ ಮಜರ್ (ಗೋರಿ) ನಿರ್ಮಾಣ ಮಾಡಲಾಗಿತ್ತು. ಹೀಗಾಗಿ ಗ್ರಾಮ ಪಂಚಾಯಿತಿಯವರು ಸಂತೆ ಜಾಗದಲ್ಲಿದ್ದ ದೇವಸ್ಥಾನ ಮತ್ತು ಮಜರ್​ ತೆರವುಗೊಳಿಸಿದ್ದರು. ನಂತರ ಗ್ರಾಮದ ಕೆಲ ಹಿಂದು, ಮುಸ್ಲಿಂರು ಸೇರಿಕೊಂಡು ಶಾಲೆಯ ಗೇಟ್ ಬೀಗ ಮುರಿದು, ಅತಿಕ್ರಮಣ ಮಾಡಿ ಕೊಠಡಿಯಲ್ಲಿ ಮಜರ್ ಕಟ್ಟಿದ್ದರು.

ಈ ಸಂಬಂಧ ಕೆಲ ದಿನಗಳ ಹಿಂದೆ ಅದೇ ಕೊಠಡಿಯಲ್ಲಿ ಬಾಡೂಟ ಕೂಡ ಮಾಡಿದ್ದಾರೆ. ಸದ್ಯ ಸಿಬ್ಬಂದಿ ಸರ್ಕಾರಿ ಶಾಲಾ ಕೊಠಡಿಗೆ ಬೀಗ ಹಾಕಿದ್ದಾರೆ. ಈಗ ಸಿದ್ದಲಿಂಗ ಸ್ವಾಮೀಜಿ ಕೂಡಲೇ ಮಜರ್ ತೆರವುಗೊಳಿಸಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ. ಸೋಮವಾರದೊಳಗಾಗಿ ಮಜರ್​ ತೆರವುಗೊಳಿಸದಿದ್ದರೆ ನವಂಬರ್ 29 ರಂದು ಚಲೋ ಬಂದರವಾಡ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:21 pm, Fri, 25 November 22