PM Modi With Children: ಕಲಬುರಗಿಯ ಈ ಬಾಲಕನಿಗೆ ಪ್ರಧಾನಿ ಮೋದಿಯ ಕಾರ್ಯದರ್ಶಿಯಾಗುವ ಆಸೆಯಂತೆ

|

Updated on: May 02, 2023 | 10:30 PM

ಕಲಬುರಗಿ ನಗರದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ನಡೆಸಿದರು. ರೋಡ್ ಶೋಗೂ ಮುನ್ನ ಡಿ.ಆರ್ ಮೈದಾನದಲ್ಲಿ ಪೊಲೀಸ್ ಸಿಬ್ಬಂದಿ ಮಕ್ಕಳ ಜೊತೆ ಪ್ರಧಾನಿ ಮಾತುಕತೆ ನಡೆಸಿದರು.

PM Modi With Children: ಕಲಬುರಗಿಯ ಈ ಬಾಲಕನಿಗೆ ಪ್ರಧಾನಿ ಮೋದಿಯ ಕಾರ್ಯದರ್ಶಿಯಾಗುವ ಆಸೆಯಂತೆ
ಕಲಬುರಗಿಯಲ್ಲಿ ಮಕ್ಕಳೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
Follow us on

ಕಲಬುರಗಿ: ವಿಶ್ವದ ಘಟಾನುಘಟಿ ನಾಯಕರೇ ಕೊಂಡಾಡುವ ಜಗ ಮೆಚ್ಚಿದ ನಾಯಕ ನರೇಂದ್ರ ಮೋದಿ ಅವರಿಗೆ (Narendra Modi) ದೇಶ ವಿದೇಶಗಳಲ್ಲೂ ಕೋಟ್ಯಾಂತರ ಅಭಿಮಾನಿಗಳು ಇದ್ದಾರೆ. ಮೋದಿ ಅವರ ಕಾರ್ಯವೈಖರಿ ಕಂಡು ಯುವಕರು, ಹಿರಿಯರು ಮಾತ್ರವಲ್ಲದೆ ಚಿನ್ನರು, ಬಾಲಕ ಬಾಲಕಿಯರು ಕೂಡ ಮೋದಿ ಅಭಿಮಾನಿಗಳಾಗಿದ್ದಾರೆ. ಅಷ್ಟರ ಮಟ್ಟಿಗೆ ಮೋದಿ ಮನೆಮಾತಾಗಿದ್ದಾರೆ. ಇದಕ್ಕೆ ನಿದರ್ಶನವೇ ಕಲಬುರಗಿಯ ಈ ಪೋರ.

ಹೌದು, ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸಿ ಮತಯಾಚೆನೆ ಮಾಡಲು ಕಲಬುರಗಿ ನಗರಕ್ಕೆ ಆಗಮಿಸಿದ್ದರು. ಇದಕ್ಕೂ ಮುನ್ನ ನಗರದ ಡಿ ಆರ್ ಮೈದಾನದಲ್ಲಿ ಮಕ್ಕಳ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದು, ಮಕ್ಕಳು ಸಂತೋಷಗೊಂಡಿದ್ದಲ್ಲದೆ, ಮಕ್ಕಳ ಮಾತಿಗೆ ಮೋದಿ ಫುಲ್ ಖುಷ್ ಆಗಿಬಿಟ್ಟಿದ್ದಾರೆ ಮಾರಾಯ್ರೆ. ಯಾಕೆ ಅಂತ ಕೇಳ್ತಿತಿದ್ದೀರಾ?

ಮಕ್ಕಳ ಜೊತೆ ಕೆಲವು ನಿಮಿಷಗಳ ಕಾಲ ಮಾತುಕತೆ ನಡೆಸಿದ ಪ್ರಧಾನಿ ಮೋದಿ, ಮಕ್ಕಳ ಕೈಬೆರಳುಗಳಿಗೆ ವ್ಯಾಯಾಮ ನೀಡುವಂತಹ ಆಟವನ್ನ ಆಡಿಸಿದರು. ನಂತರ ತಾವು ಯಾವ ತರಗತಿಯಲ್ಲಿ ವ್ಯಾಸಾಂಗ ಮಾಡತ್ತಿದ್ದೀರಿ ಎಂದು ವಿಚಾರಿಸಿದ ಮೋದಿ, ನೀವು ದೊಡ್ಡವರಾದ ಮೇಲೆ ಏನಾಗಲು ಬಯಸುತ್ತೀರಿ ಎಂದು ಒಬ್ಬೊಬ್ಬರನ್ನೇ ಕೇಳಿದ್ದಾರೆ. ಈ ವೇಳೆ ತಾನು ಪೊಲೀಸ್, ಡಾಕ್ಟರ್ ಆಗುತ್ತೇನೆ ಎಂದು ಹೇಳುವ ಮೂಲಕ ಮಕ್ಕಳು ಮೋದಿ ಮುಂದೆ ತಮ್ಮ ಕನಸು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: Karwar: ಮೋದಿ ಗೆಲುವಿಗಾಗಿ ಬೆರಳು ಕತ್ತರಿಸಿ ಕಾಳಿ ಮಾತೆಗೆ ರಕ್ತದ ತಿಲಕವಿಟ್ಟಿದ್ದ ಅರುಣ್​ ಈಗ ಏನಂತಾರೆ?

ಇದೇ ವೇಳೆ, ಓರ್ವ ಬಾಲಕ ತಾನು ನಿಮ್ಮ ಕಾರ್ಯದರ್ಶಿಯಾಗುತ್ತೇನೆ ಎಂದು ಹೇಳಿದ್ದಾನೆ. ಈ ಮಾತಿಗೆ ಮೋದಿ ಫಿದಾ ಆಗದೆ ಇರುತ್ತಾರಾ? ಬಾಲಕನ ಮಾತಿಗೆ ಅಚ್ಚರಿಗೊಂಡ ಮೋದಿ ಆತನಿಗೆ ಮತ್ತೊಂದು ಪ್ರಶ್ನೆಯನ್ನು ಕೇಳಿದ್ದಾರೆ. ಹೌದಾ, ಯಾಕಪ್ಪ ಪ್ರಧಾನಿ ಆಗುವದಿಲ್ವಾ? ನೀವ್ಯಾರೂ ಪ್ರಧಾನಿ ಆಗಲು ಬಯಸುವುದಿಲ್ಲವೇ ಎಂದು ಎಲ್ಲಾ ಮಕ್ಕಳನ್ನು ಪ್ರಶ್ನಿಸಿದ್ದಾರೆ. ಮೋದಿಯ ಈ ಮಾತಿಗೆ ಮಕ್ಕಳೆಲ್ಲರೂ ನಕ್ಕರಲ್ಲದೆ, ಒಬ್ಬರು ತಾನು ಪ್ರಧಾನಿಯಾಗುವುದಾಗಿ ಹೇಳಿದರು. ಮಕ್ಕಳೊಂದಿಗೆ ಮಕ್ಕಳಾಗಿ ಮಾತನಾಡಿದ ಪ್ರಧಾನಿ ಮೋದಿ, ನಂತರ ಮತಬೇಟೆ ನಡೆಸಲು ತೆರಳಿದರು.

ಇತ್ತ, ಟಿವಿ9 ಜೊತೆ ಮಕ್ಕಳು ಸಂತಸವನ್ನು ಹಂಚಿಕೊಂಡಿದ್ದಾರೆ. ನಾವು ಮೋದಿಯನ್ನು ನೋಡಲು ಕಾಯುತ್ತಿದ್ದೆವು. ಈ ವೇಳೆ ಅವರು ಕಾರು ಬಳಿ ಹೋಗುತ್ತಿರುವುದನ್ನು ನೋಡಿ ಹತ್ತಿರ ಹೋದೆವು. ಈ ವೇಳೆ ಮೋದಿ ಕಾರಿನಿಂದ ಇಳಿದು ನಮ್ಮ ಬಳಿ ಬಂದು ಮಾತನಾಡಿದರು ಎಂದು ಡಾಕ್ಟರ್ ಆಗುವ ಕನಸು ಹೊತ್ತುಕೊಂಡಿರುವ ಬಾಲಕೊಬ್ಬ ಮಾಹಿತಿ ಹಂಚಿಕೊಂಡಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:23 pm, Tue, 2 May 23